ಉಡುಪಿಯಲ್ಲಿ 10ನೆಯ ತರಗತಿಯ ಹುಡುಗನೊಬ್ಬನ ಅತ್ಯದ್ಭುತ ಆಲೋಚನೆ..!ತಪ್ಪದೇ ನೋಡಿ…

ಎಕ್ಸ್ಪೆರಿ ಡೇಟ್ ಇಲ್ಲದೆ ಯಾವ ವಸ್ತುಗಳೂ ಸಿಗುವುದಿಲ್ಲ. ಹೆಚ್ಚು-ಕಡಿಮೆ ಎಲ್ಲಾ ವಸ್ತುಗಳ ಮೇಲೆಯೂ ಅಂತಿಮ ಅವಧಿಯ ದಿನಾಂಕ ಬರೆದಿರುತ್ತಾರೆ. ಯಾವುದೇ ವಸ್ತುವಿನ ಬಳಕೆಗೆ ಅಂತಿಮ ಅವಧಿ ಎಂಬುದು ನಿಗದಿಯಾಗಿರುತ್ತದೆ.

ಆದರೆ ಜೀವನ ನಡೆಸಲು ಬೇಕಾದ ಹಣಕ್ಕೆ (ಚಲಾವಣೆಯ ನೋಟುಗಳಿಗೆ) ಮಾತ್ರ ಯಾಕೆ ಬಳಕೆಯ ಅಂತಿಮ ಅವಧಿ ಇಲ್ಲ? ಅಂದರೆ ಎಕ್ಸ್ಪೆರಿ ಡೇಟ್ ಇಲ್ಲ.

ಚಲಾವಣಾ ನೋಟುಗಳ ಮೇಲೆ ಅಂತಿಮ ದಿನಾಂಕ (ಮುಗಿಯುವ ಅವಧಿ)ಯನ್ನು ಮುದ್ರಿಸಿದರೆ, ಜನರು ತಂತಾನೇ ಬ್ಯಾಂಕುಗಳಿಗೆ ಹೋಗಿ ಅವುಗಳನ್ನು ಬದಲಾಯಿಸಿಕೊಳ್ಳುತ್ತಾರೆ, ಮನೆಯಲ್ಲಿ ಕೂಡಿಡಲು ಆಗುವುದಿಲ್ಲ. ಜನರೇ ತಾವೇ ಸ್ವತಹ ಹೋಗಿ ಬ್ಯಾಂಕ್ ಗಳಲ್ಲೆ ಜಮೆ ಮಾಡಿ ಬಿಡುತ್ತಾರೆ..

ಎಲ್ಲಾ ನೋಟುಗಳಿಗೂ 5 ವರ್ಷಗಳ ಅವಧಿಯನ್ನು ನಿಗದಿ ಮಾಡಬಹುದು. ಇದರಿಂದ 5 ವರ್ಷ ಮುಗಿದ ಬಳಿಕ ಯಾರೂ ತಮ್ಮ ಹಣವನ್ನು ಮನೆಯ ಲಾಕರ್ ಗಳಲ್ಲಿ ಇಡುವುದಿಲ್ಲ. ಭ್ರಷ್ಟ ಮುಕ್ತ, ಕುಪ್ಪು ಹಣವನ್ನು ತಡೆಯಲಿ ಈ ವಿಧಾನ ಒಳ್ಳೆಯದಾಗಿದೆ.

ಈ ವಿಧಾನವನ್ನು ಅನುಸರಿಸಿದರೆ, ಎಲ್ಲಾ ಹಣವೂ ಅವರವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿ, ತನ್ನಷ್ಟಕ್ಕೆ ತಾನೇ ಕಪ್ಪು ಹಣ ಕರಗಿ ಹೋಗುತ್ತದೆ. ನಿಜವಾಗಲೂ ಇದು ಅದ್ಭುತ ವಿಚಾರವೇ ಸರಿ.

ಆದರೆ ಇದು ಕಾರ್ಯಗತಗೊಳ್ಳುವುದಕ್ಕೆ ಆಗುತ್ತಾ? ಯಾವ ಸರ್ಕಾರ ಈ ರೀತಿಯ ಕಾನೂನನ್ನು ಮಾಡಲು ಸಾಧ್ಯ? ಆದರೆ ಒಂದಂತೂ ನಿಜ. ಈ ವಿಧಾನ ಏನಾದರೂ ಕಾರ್ಯಗತವಾದಲ್ಲಿ ಕಪ್ಪು ಹಣ ಕರಗಿಹೋಗುವುದಂತೂ ಸತ್ಯ…ಇದ್ಕಕೆ ನೀವೇನು ಹೇಳುತ್ತೀರಾ… ಈ ವಿಧಾನ ಸರಿಯಾದಲ್ಲಿ ಶೇರ್ ಮಾಡಿ ನಿಮಮ್ ಕಾಮೆಂಟ್ ಮೂಲಕ ತಿಳಿಸಿ…