ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ನ್ನು ವಾಪಸ್ ಕೊಟ್ಟು, ಪ್ರಾಮಾಣಿಕತೆ ಮೆರೆದ ಕ್ಯಾಬ್ ಡ್ರೈವರ್..!

ಈ ಕಾಲದಲ್ಲಿ ಪ್ರಾಮಾಣಿಕ ವ್ಯಕ್ತಿಗಳು ಸಿಗುವುದೇ ಕಷ್ಟ. ಇನ್ನೂ ಹಣದ ವಿಚಾರದಲ್ಲಿ ಕೇಳುವ ಹಾಗೇ ಇಲ್ಲ. ಹಣ ಏನಾದರೂ ಸಿಕ್ಕರೆ, ಯಾರಾದರೂ ಮರೆತುಬಿಟ್ಟು ಹೋದರೆ ಹಿಂತಿರುಗಿ ಕೊಡುವವರು ತುಂಬಾ ಕಡಿಮೆ.

ಅಂತಹುದರಲ್ಲಿ ಪ್ರವಾಸಿಗರೊಬ್ಬರು ಬಿಟ್ಟು ಹೋದ ಬರೋಬ್ಬರಿ ಹತ್ತು ಲಕ್ಷ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಹಿಂತಿರುಗಿಸಿ ಕೊಡುವುದರ ಮೂಲಕ ಕ್ಯಾಬ್ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.ತನ್ನ ಪ್ರಾಮಾಣಿಕತೆ ಮೆರೆದ ವ್ಯಕ್ತಿಯೇ ಜಮ್ಮು ಕಾಶ್ಮೀರದ ಷೋಪಿಯನ್ ಜಿಲ್ಲೆಗೆ ಸೇರಿದ ಕ್ಯಾಬ್ ಚಾಲಕ ತಾರೀಕ್ ಅಹಮದ್.

ಜಮ್ಮು-ಕಾಶ್ಮೀರದ ಷೋಪಿಯನ್ ಜಿಲ್ಲೆಗೆ ಪ್ರವಾಸಕ್ಕೆ  ಬಂದಿದ್ದ ಬಂದಿದ್ದ ಪ್ರವಾಸಿಗರೊಬ್ಬರು ತಾರೀಕ್ ಅಹಮದ್ ಅವರ ಕ್ಯಾಬ್ ನ್ನು ಬಾಡಿಗೆ ಪಡೆದು ಅವರ ಜೊತೆ ಪ್ರಯಾಣ ಮಾಡಿದ್ದಾರೆ. ಆದರೆ ಅವರು ಪ್ರವಾಸದ ನಂತರ ಹತ್ತು ಲಕ್ಷ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ನ್ನು ಆ ಕ್ಯಾಬ್ ನಲ್ಲೇ ಬಿಟ್ಟು ಹೋಗಿದ್ದಾರೆ.

ಅವರು ಬಿಟ್ಟು ಹೋಗಿದ್ದ ಬ್ಯಾಗ್ ನಲ್ಲಿ ಹಣ, ಚಿನ್ನಾ ಭರಣ ಸೇರಿದಂತೆ ಮೂರು ಕಾಸ್ಟ್ಲಿ ಮೊಬೈಲ್ ಗಳು ಸೇರಿದಂತೆ ಸುಮಾರು 10 ಲಕ್ಷದ ಬೆಲೆಬಾಳುವ ವಸ್ತುಗಳು ಇದ್ದವು.

ಅವರು ಬಿಟ್ಟು ಹೋದ ಬ್ಯಾಗ್ ನ್ನು ಗಮನಿಸಿದ ಕ್ಯಾಬ್ ಚಾಲಕ ತಾರೀಕ್ ಅಹಮದ್, ಆ ಬ್ಯಾಗ್ ನಲ್ಲಿದ್ದ ಮೂರು ಮೊಬೈಲ್ ಗಳಿಗೆ ಬರುತ್ತದೆಯೇ ಎಂದು ಕಾದು ಕುಳಿತಿದ್ದಾರೆ.ನಂತರ ಬಾಗ್ ಬಿಟ್ಟು ಹೋದ ಪ್ರವಾಸಿಗ ಕಾಲ್ ಮಾಡಿ ಬಂದಾಗ ಅವರಿಗೆ ಬ್ಯಾಗ್ ಹಿಂತಿರುಗಿಸಿ ಕೊಡುವುದರ ಮೂಲಕ ತಮ್ಮ ಪ್ರಾಮಾಣಿಕ ತನ ಮೆರೆದಿದ್ದಾರೆ.