ನಿಮ್ಮ PF ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಲು ಒಂದು SMS ಅಥ್ವಾ ಒಂದು ಮಿಸ್ಡ್ ಕಾಲ್ ಸಾಕು..!

ಯಾವುದೇ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು PF ಖಾತೆಯನ್ನು ಹೊಂದಿರುತ್ತಾರೆ. ಪ್ರತೀ ತಿಂಗಳು ಬರುವ ಸಂಬಳದಲ್ಲಿ ಒಂದಿಷ್ಟು ಹಣ ಉದ್ಯೋಗಿಗಳ ಪಿಎಫ್ ಖಾತೆಗೆ ಜಮಾ ಆಗುತ್ತದೆ. ಆದರೆ ತಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನ ತಿಳಿಯಲು ಎಷ್ಟೋ ಮಂದಿಗೆ ಗೊತ್ತಿರುವುದಿಲ್ಲ.

ಆದರೆ ಈಗ ತಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣ ಜಮಾ ಆಗಿದೆ ಎಂಬುದನ್ನ ತಿಳಿಯುವುದು ಅತೀ ಸುಲಭ..ಇದಕ್ಕೂ ಮೊದಲು ಆನ್ಲೈನ್ ನಲ್ಲಿ ಪಾಸ್ಬುಕ್ ಡೌನ್ಲೋಡ್ ಮಾಡಿ ತಮ್ಮ ಪಿಎಫ್ ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಬೇಕಿತ್ತು. ಆದರೆ ಈಗ ಕೇವಲ ಒಂದು SMS ಕಳುಸುವುದರ ಮೂಲಕ ಎಷ್ಟು ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

ತಮ್ಮ PF ಖಾತೆಯಲ್ಲಿನ ಹಣ ನೋಡುವುದಕ್ಕೆ ಉದ್ಯೋಗಿಗಳಿಗೆ Universal Account Number (UAN) ನಂಬರ್ ಅವಶ್ಯವಾಗಿ ಗೊತ್ತಿರಬೇಕು. ನೀವು ಪಿಎಫ್ ಖಾತೆ ಮಾಡಿಸುವ ಸಂಧರ್ಭದಲ್ಲಿ ಯಾವ ಮೊಬೈಲ್ ನಂಬರ್ ನಿಂದ ರಿಜಿಸ್ಟರ್ ಮಾಡಿಸಿದ್ದೀರೋ, ಅದೇ ಮೊಬೈಲ್ ನಂಬರ್ ನಿಂದ SMS ಕಳುಹಿಸಬೇಕು.

ನೆನೆಪಿರಲಿ UAN ನಂಬರ್ ಇಪಿಎಫ್ಒ ದಲ್ಲಿ ನೋಂದಾಯಿಸಲ್ಪಟ್ಟಿದ್ದರೆ ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬೇಕು.

SMS ಕಳುಹಿಸುವುದು ಹೇಗೆ..?

ನಿಮ್ಮ PF ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಲು EPFOHO UAN ENG ಎಂದು ಟೈಪ್ ಮಾಡಿ 7738299899 ನಂಬರ್ ಗೆ ಕಳುಹಿಸಬೇಕು. ಒಂದು ವೇಳೆ ಹಿಂದಿ ಭಾಷೆಯಲ್ಲಿ ನಿಮಗೆ ಪಿಎಫ್ ಮಾಹಿತಿ ಬೇಕೆಂದಲ್ಲಿ EPFOHO UAN HIN ಎಂದು ಟೈಪ್ ಮಾಡಬೇಕು. ಕನ್ನಡ ಸೇರಿದಂತೆ ಹಿಂದಿ, ಇಂಗ್ಲಿಶ್, ತೆಲಗು, ತಮಿಳು, ಮಲಯಾಳಂ, ಪಂಜಾಬಿ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಪಿಎಫ್ ಬ್ಯಾಲೆನ್ಸ್ ಮಾಹಿತಿ ತಿಳಿಯಬಹುದಾಗಿದೆ.

ನೆನಪಿರಲಿ ನಿಮ್ಮ UAN ನಂಬರ್ ನಿಮ್ಮ ಬ್ಯಾಂಕ್ ಅಕೌಂಟ್, ಪಾನ್ ಹಾಗೂ ಅಧಾರ್ ನಂಬರ್ ಜೊತೆ ಲಿಂಕ್ ಇರಬೇಕು. ಒಂದು ವೇಳೆ ಲಿಂಕ್ ಮಾಡಿಸಸದಿದ್ದಲ್ಲಿ ಮೊದಲು ಮೇಲೆ ತಿಳಿಸಿರುವಂತೆ ಎಲ್ಲಾ ದಾಖಲೆಗಳ ಲಿಂಕ್ ಮಾಡಿಸಿ ನಂತರ ಪಿಎಫ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿ.

ಒಂದು ಮಿಸ್ಡ್ ಕಾಲ್ ನಿಂದಲೂ PF ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿ…

ಹೌದು SMS ಸೌಲಭ್ಯದ ಜೊತೆಗೆ ನೀವು ಮಿಸ್ಡ್ ಕಾಲ್ ಮಾಡಿ ನಿಮ್ಮ ಪಿಎಫ್ ಬ್ಯಾಲೆನ್ಸ್ ತಿಳಿಯಬಹುದಾಗಿದೆ. ನೀವು ನಿಮ್ಮ ಪಿಎಫ್ ಖಾತೆಯಲ್ಲಿ ನೊಂದಾಯಿಸಿದ ನಂಬರ್ ನಿಂದ 011-22901406 ನಂಬರ್ ಗೆ ಮಿಸ್ಡ್ ಕಾಲ್ ಕೊಟ್ಟಾಗ ನಿಮಗೊಂದು ಸಂದೇಶ ಬರಲಿದ್ದು, ಅದರಲ್ಲಿ ಪಿಎಫ್ ಖಾತೆದಾರರ ಹೆಸರು, ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂಬರ್ ಮಾಹಿತಿಯೊಂದಿಗೆ ನಿಮ್ಮ ಬ್ಯಾಲೆನ್ಸ್ ಎಷ್ಟಿದೆ ಎಂಬುದು ತಿಳಿಯುತ್ತದೆ.

ನೆನಪಿರಲಿ ನಿಮ್ಮ UAN ನಂಬರ್ ಆಕ್ಟಿವ್ ಆಗಿದ್ದು, ಬ್ಯಾಂಕ್ ಅಕೌಂಟ್, ಪಾನ್ ಹಾಗೂ ಅಧಾರ್ ನಂಬರ್ ಜೊತೆ ಲಿಂಕ್ ಹಾಗಿರಬೇಕು. ನೀವು ರಿಜಿಸ್ಟರ್ ಮಾಡಿಸಿದ ನಂಬರ್ ನಿಂದಲೇ ಮಿಸ್ ಕಾಲ್ ಮಾಡಬೇಕು.