ನಿಮ್ಮ ಹೊಲದ/ಜಮೀನಿನ ಆಸ್ತಿಯ ವಿವರಗಳನ್ನು ನಿಮ್ಮ ಮೊಬೈಲ್ ನಲ್ಲೇ ನೋಡುವುದು ಹೇಗೆ ಗೊತ್ತಾ..?

ಇದು ತಂತ್ರಜ್ಞಾನದ ಯುಗ. ಈಗಂತೂ ಪ್ರತಿಯೊಬ್ಬರ ಕೈನಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಈ ಒಂದು ಚಿಕ್ಕ ಮೊಬೈಲ್ ನಿಂದ ಇಡೀ ಜಗತ್ತಿನಲ್ಲಿ ನಡೆಯುವ ಯಾವುದೇ ಸುದ್ದಿಗಳನ್ನು ತಿಳಿಯಬಹುದು. ಹಾಗೆಯೇ ನಿಮಗೆ ಬೇಕಾದಂತ ಮಾಹಿತಿಗಳಾದ, ನಿಮ್ಮ ಯಾವುದೇ ಊರಿನಲ್ಲಿರುವ ಹೊಲ, ಜಮೀನಿನ ಮಾಹಿತಿಯನ್ನು ತಿಳಿಯಬಹುದಾಗಿದೆ.

ಹೌದು, ಈಗ ನಿಮ್ಮ ಬೆರಳ ತುದಿಯಲ್ಲಿ ನಿಮ್ಮ ಜಮೀನಿನ, ಆಸ್ತಿಯ ಮಾಹಿತಿ ಲಭ್ಯವಾಗಲಿದ್ದು, ನಿಮ್ಮ ಕೈ ನಲ್ಲಿರುವ ಸ್ಮಾರ್ಟ್ ಮೊಬೈಲ್ ನಿಂದಲೇ ಕರ್ನಾಟಕದ ಯಾವುದೇ ಮೂಲೆಯಲ್ಲಿರುವ ನಿಮ್ಮ ಹೊಲ/ಜಮೀನಿನ ಸರ್ವೇ ನಂಬರ್, ನಿಮ್ಮ ಭೂಮಿಯ ಅಳತೆ ಜೊತೆಗೆ ಮಾಲೀಕನ ಹೆಸರನ್ನು ತಿಳಿಯಬಹುದಾಗಿದೆ.

ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಪಹಣಿ (RTC) ಮಾಹಿತಿ ತಿಳಿಯುವುದು ಹೇಗೆ? ಈ ವಿಡಿಯೋ ನೋಡಿ…