ಹೋಳಿ ಹಬ್ಬದ ದಿನದಂದು ಮರೆತೂ ಕೂಡ ಈ ಕೆಲಸಗಳನ್ನು ಮಾತ್ರ ಮಾಡಬೇಡಿ!

ಹೋಳಿ ಹುಣ್ಣಿಮೆ ಹತ್ತಿರ ಬರ್ತಿದ್ದ ಹಾಗೆ ಬಣ್ಣದ ಹಬ್ಬಕ್ಕೆ ಈಗಾಗಲೇ ಇಡೀ ದೇಶದಾದ್ಯಂತ ಭರ್ಜರಿ ತಯಾರಿ ಜೋರಾಗಿಯೇ ನಡೆದಿದೆ. ಉತ್ತರ ಭಾರತದಲ್ಲಿ ಒಂದು ರೀತಿ ಹೋಳಿಯ ಹಬ್ಬ ಆಚರಣೆ ಮಾಡಿದರೆ ದಕ್ಷಿಣ ಭಾರತದ ಕಡೆ ಒಂದು ರೀತಿ ಹೋಳಿಯ ಆಚರಣೆ ನಡೆಯುತ್ತದೆ.

ಹೋಳಿಯ ಮೊದಲ ದಿನ ಕಾಮದಹನ ಮಾಡುವ ಮೂಲಕ ಆಚರಣೆ ಮಾಡಲಾಗುತ್ತದೆ. ಹೋಳಿ ದಹನದ ದಿನದಂದು ತಂತ್ರ ವಿಧ್ಯೆ ಬಹಳ ಚುರುಕು ಪಡೆಯುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಈ ದಿನದಂದು ಕೆಲವು ವಿಷಯಗಳ ಬಗ್ಗೆ ಗಮನ ಇರಲೇಬೇಕು.ಇಲ್ಲದಿದ್ದರೆ ದುಷ್ಟ ತಾಂತ್ರಿಕರ ವಿಧ್ಯೆಗೆ ಬಲಿಯಾಗಬೇಕಾಗುತ್ತದೆ ಎಂದು ಹೇಳಲಾಗಿದೆ.

ಹೋಳಿಯ ದಿನ ಯಾವ ವಿಷಯಗಳ ಬಗ್ಗೆ ಗಮನ ಇರಬೇಕೆಂದು ನೋಡೋಣ…

ಬಣ್ಣಗಳ ಹಬ್ಬ ಹೋಳಿಯ ದಿನದಂದು ಮನೆಯಿಂದ ಆಚೆ ಹೋಗುವ ಮುಂಚೆ ಮರೆಯದೆ ತಲೆಗೆ ಬಟ್ಟೆ ಕಟ್ಟಿಕೊಂಡು ಹೋಗಬೇಕು. ಏಕೆಂದರೆ ತಾಂತ್ರಿಕ ವಿದ್ಯೆಗಳು ಮೊದಲು ತಲೆ ಮೇಲೆ ಪ್ರಭಾವ ಬೀರುತ್ತವಂತೆ.
ತಾಂತ್ರಿಕರು ಹೆಚ್ಚಾಗಿ ಬಟ್ಟೆ ಪ್ರಯೋಗ ಮಾಡುವುದರಿಂದ, ಮನೆಯ ಹೊರಗಡೆ ಬಟ್ಟೆ ಒಣ ಹಾಕಿದ್ದರೆ, ಅದು ತಾಂತ್ರಿಕರ ಕೈಗೆ ಸಿಗದಂತೆ ಎಚ್ಚರವಹಿಸಬೇಕು.

ಹೋಳಿ ಹಬ್ಬದ ದಿನದಂದು ತಮ್ಮದಲ್ಲದ ದಾರಿಯಲ್ಲಿ ಅಥ್ವಾ ಮನೆಯ ಅಕ್ಕ ಪಕ್ಕದಲ್ಲಿ ಬಿದ್ದ ವಸ್ತುಗಳನ್ನು ಸ್ಪರ್ಶ ಮಾಡುವುದು ಒಳಿತಲ್ಲ. ಒಂದು ವೇಳೆ ಆ ವಸ್ತುಗಳು ತಾಂತ್ರಿಕರ ಪ್ರಭಾವಕ್ಕೆ ಒಳಗಾಗಿದ್ದಾರೆ ತೊಂದರೆ ಕಟ್ಟಿಟ್ಟ ಬುತ್ತಿ.

ಬಣ್ಣಗಳಲ್ಲಿ ತೇಲುವ ಹೋಳಿ ಹಬ್ಬದಂದು ನಿಮಗೆ ಗೊತ್ತಿರುವ ಅಥವಾ ಗೊತ್ತಿಲ್ಲದೇ ಇರುವ ವ್ಯಕ್ತಿಗಳು ಕೊಡುವ ಬಿಳಿ ಬಣ್ಣದ ಸಿಹಿಯನ್ನು ಸೇವನೆ ಮಾಡಬೇಡಿ. ಜೊತೆಗೆ ಸ್ವತಹ ನೀವೂ ಸಹ ಬಿಳಿ ಬಣ್ಣದ ಸಿಹಿಯನ್ನು ತಿನ್ನಬೇಡಿ.

ವಿಶೇಷವಾಗಿ ಹೋಳಿ ಹಬ್ಬದ ದಿನದಂದು ಗರ್ಭಿಣಿಯರು ಹೊರಗೆ ಒಂಟಿಯಾಗಿ ಹೋಗುವುದು ಬೇಡ. ಏಕೆಂದರೆ ತಾಂತ್ರಿಕ ವಿದ್ಯೆ ಇವರ ಮೇಲೆ ಬೇಗ ತನ್ನ ಪ್ರಭಾವ ಬೀರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.