ಮಾತ್ರೆಯಿಲ್ಲದೆಯೇ ತಲೆನೋವು ಮಾಯ!ಹೇಗೆ ಗೊತ್ತಾ.?

ತಲೆನೋವಿನ ಸಮಸ್ಯೆಯನ್ನು ಅನುಭವಿಸುವವರಿಗೆ ಲೆಕ್ಕವಿಲ್ಲ. ಮೈಗ್ರೇನ್, ಸೈನಸ್ ಎನ್ನುತ್ತ ಒಂದಿಲ್ಲೊಂದು ಕಾರಣಗಳಿಂದಾಗಿ ಕಾಡುವ ತಲೆನೋವು ಹಲವರಿಗೆ ಜೀವನವೇ ಸಾಕು ಅನ್ನಿಸುವಷ್ಟು ಬೇಸರ ಮೂಡಿಸು ಬಿಡುತ್ತದೆ. ಈ ತಲೆನೋವು ಬಂದಾಗ ಯಾವುದೇ ರೀತಿಯ ಕೆಲಸ ಮಾಡಲು ಕಿರಿಕಿರಿಯಾಗುತ್ತದೆ.

ಕೆಲವರಿಗಂತೂ ಪ್ರತಿದಿನವೂ ಮಾತ್ರೆ ಬೇಕೇ ಬೇಕು. ಮಾತ್ರೆಯ ದಾಸರಾಗಿ ಅದಿಲ್ಲದೆ ನೋವು ಸಹಿಸುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಳ್ಳುವವರು ಹಲವರಿದ್ದಾರೆ. ಆದರೆ ತಲೆನೋವನ್ನು ಮಾತ್ರೆಯಿಲ್ಲದೆಯೂ ಪರಿಹರಿಸಬಹುದು ಎನ್ನುತ್ತಾರೆ ತಜ್ಞರು. ಜೀವನ ಶೈಲಿಯ ಬದಲಾವಣೆ ತಲೆ ನೋವಿಗೆ ಶಾಶ್ವತ ಪರಿಹಾರ ಒದಗಿಸುತ್ತದೆ ಎಂಬುದು ಅವರ ಅಭಿಪ್ರಾಯ.

ಹೆಚ್ಚು ನೀರು ಸೇವನೆ: ತಲೆ ನೋವಿಗೆ ನಿರ್ಜಲೀಕರಣವೂ ಒಂದು ಕಾರಣ. ಪ್ರತಿ ದಿನವೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸುವುದರಿಂದ ತಲೆನೋವು ಪರಿಹಾರವಾಗುತ್ತದೆ. ಆದರೆ ಸಕ್ಕರೆ ಹಾಕಿದ ಪಾನೀಯಗಳನ್ನು ಸೇವಿಸಬಾರದು. ಮದ್ಯ, ಕಾಫಿ ಒಳ್ಳೆಯದಲ್ಲ.  ಇವು ದೇಹ ನಿರ್ಜಲೀಕರಣಕ್ಕೊಳಗಾಗು ವಂತೆ ಮಾಡುತ್ತವೆ.

ಗಿಡಮೂಲಿಕೆಯ ಕಷಾಯ: ಪ್ರತಿನಿತ್ಯವೂ ಪುದಿನ ಮತ್ತು ಕಾಳುಮೆಣಸನ್ನು ಸೇರಿಸಿದ ಕಷಾಯ ಸೇವನೆ ತಲೆ ನೋವಿನ ಪರಿಹಾರಕ್ಕೆ ಒಳ್ಳೆಯದು.

ವ್ಯಾಯಾಮ: ಪ್ರತಿದಿನವೂ ವ್ಯಾಯಾಮ ಮಾಡು ವುದು. ಅದರಲ್ಲೂ ಬೆಳಗ್ಗೆ ಬೇಗನೇ ಎದ್ದು ಜಾಗಿಂಗ್ ಅಥವಾ ವಾಕಿಂಗ್ ಮಾಡುವುದು ರಕ್ತಸಂಚಾರವನ್ನು ಸರಾಗವಾಗಿಸಿ ತಲೆನೋವು ಬಾರದಂತೆ ತಡೆಯುತ್ತದೆ. ಇದರಿಂದಾಗಿ ನಿಮ್ಮ ದೇಹ ಚಟುವಟಿಕೆಯಿಂದ ಇರು ತ್ತದಾದ್ದರಿಂದ ಮನಸ್ಸು ಲವಲವಿಕೆಯಿಂದಿರಲು ಸಹಾ ಯಕವಾಗುತ್ತದೆ.

ತಂಪು ನೀರಿನ ಲೇಪನ: ತಲೆನೋವು ಅಧಿಕವಾದರೆ ನಿಮ್ಮ ಹಣೆಯ ಮೇಲೆ ತಂಪು ನೀರನ್ನು ಲೇಪಿಸಿಕೊಳ್ಳುತ್ತಿರಿ. ಇದರಿಂದ ತಲೆನೋವು ಸ್ವಲ್ಪಮಟ್ಟಿಗಾದರೂ ಉಪಶಮನ ವಾಗುತ್ತದೆ.

ನಗು: ಹೃದಯ ಹಗುರಾಗುವಂತೆ ನಗಬೇಕು. ಇದು ಒತ್ತಡ ಕಡಿಮೆ ಮಾಡಿ ತಲೆನೋವನ್ನು ಶಮನ ಮಾಡಬಲ್ಲದು.

ನಿದ್ದೆ: ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ನಿದ್ದೆ ಮಾಡುವುದು ಸಹ ಅಷ್ಟೇ ಮುಖ್ಯ. ನಿದ್ರಾಹೀನತೆಯೂ ತಲೆ ನೋವಿಗೆ ಕಾರಣವಾಗುತ್ತದೆ.

ಮಸಾಜ್: ಆಗಾಗ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡಿಕೊಳ್ಳುತ್ತಿದ್ದರೆ ತಲೆನೋವಿನ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಹಣೆ, ಕತ್ತು, ಕಿವಿಯ ಭಾಗ, ಕಣ್ಣಿನ ಮೇಲ್ಭಾಗ ವನ್ನೂ ನಿಧಾನವಾಗಿ ಮಸಾಜ್ ಮಾಡಿ. 
ಈ ಎಲ್ಲ ಕ್ರಮಗಳನ್ನೂ ಪಾಲಿಸುವುದರಿಂದ ತಲೆನೋ ವಿನ ಸಮಸ್ಯೆ ಪರಿಹಾರವಾಗುವುದಲ್ಲದೆ, ನಿಮಗೆ ಯಾವುದೇ ಮಾತ್ರೆಯ ಅಗತ್ಯವೂ ಬರುವುದಿಲ್ಲ.