ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ದಾಂಪತ್ಯದಲ್ಲಿ ಬಿರುಕು?ಆ ಪೋಸ್ಟ್ ಕುರಿತು ಪತ್ನಿ ವಾಣಿ ಹರಿಕೃಷ್ಣ ಹೇಳಿದ್ದೇನು..?

ಇತ್ತೀಚಿನ ಕುರುಕ್ಷೇತ್ರ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸಂಗೀತ ನಿರ್ದೇಶನ ಮಾಡಿರುವ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ ಮತ್ತು ಅವರ ಪತ್ನಿ ಗಾಯಕಿಯೂ ಆಗಿರುವ ವಾಣಿ ಹರಿಕೃಷ್ಣರವರ ದಾಂಪತ್ಯದಲ್ಲಿ ಬಿರುಕುಂಟಾಗಿದೆ ಎಂಬ ಸುದ್ದಿ ವೈರಲ್ ಆಗಿತ್ತು.

ಇತ್ತೀಚೆಗಷ್ಟೇ ಹರಿಕೃಷ್ಣ ಅವರ ಪತ್ನಿ ವಾಣಿ ಕೃಷ್ಣ ತಮ್ಮ ಫೇಸ್ಬುಕ್ ಖಾತೆಯಲ್ಲಿ ಒಂದು ಪೋಸ್ಟ್ ಮಾಸಿದ್ದು, ಅದು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಈ ಪೋಸ್ಟ್ ಕುರಿತಾಗಿ ಹರಿಕೃಷ್ಣ ದಂಪತಿಗಳ ಮಧ್ಯೆ ಬಿರುಕು ಉಂಟಾಗಿದೆ ಎಂಬ ಸುದ್ದಿ ವರದಿಯಾಗಿತ್ತು.

ಇದಕ್ಕೆ ಸಂಗೀತ ನಿರ್ದೇಶಕ ಹರಿಕೃಷ್ಣರವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಈಗ ತಾವು ಹಾಕಿರುವ ಫೇಸ್ಬುಕ್ ಪೋಸ್ಟ್ ಕುರಿತಂತೆ ಸ್ಪಷ್ಟನೆ ನೀಡಿರುವ ವಾಣಿ ಹರಿಕೃಷ್ಣರವರು ನಾನು ಹಾಗೂ ನನ್ನ ಪತಿ ಹರಿಕೃಷ್ಣ ಅವರ ನಡುವೆ ಯಾವುಡ್ಡೇ ರೀತಿಯ ಮನಸ್ತಾಪ ಇಲ್ಲ. ನಮ್ಮ ಸಂಸಾರ ಚೆನ್ನಾಗಿಯೇ ಇದೆ. ನಾನು ಹಾಕಿದ್ದ ಫೇಸ್ಬುಕ್ ಪೋಸ್ಟ್ ನನ್ನ ಹಾಡಿಗೆ ಸಂಬಂಧಪಟ್ಟಿದ್ದು ಮಾತ್ರ.

ನಾನು ಈಗಾಗಲೇ ಕುರುಕ್ಷೇತ್ರ ಸೇರಿದಂತೆ ರಾಂಧವ ಚಿತ್ರಗಳಲ್ಲಿ ಮೊದಲು ನನ್ನ ಕಡೆಯಿಂದ ಹಾಡಿಸಲಾಗಿತ್ತು. ಆದರೆ ನಂತರ ಬೇರೆ ಗಾಯಕಿಯರಿಂದ ಹಾಡಿಸಿದ್ದಾರೆ. ಇದೇ ನಾನು ಬೇಸರಗೊಳ್ಳಲು ಕಾರಣವಾಗಿದೆ. ಹಾಗಾಗಿ ಈ ಹಾಡುಗಳಿಗೆ ಸಂಬಂದಪಾಠ ಹಾಗೆ ನಾನು ಫೇಸ್ಬುಕ್ ಪೋಸ್ಟ್ ಹಾಕಿದ್ದೇನೆ ಅಷ್ಟೇ ಎಂದು ತಮ್ಮ ಪೋಸ್ಟ್ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.

ಅಸಲಿಗೆ ವಾಣಿ ಹರಿಕೃಷ್ಣ ಪೋಸ್ಟ್ ನಲ್ಲಿ ಹಾಕಿದ್ದೇನು?

ಬದುಕೇ ಬೇಡ ಅನ್ನಿಸಿಬಿಡುತ್ತದೆ, ಒಂದು ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ , ಈಗ ” ಕುರುಕ್ಷೇತ್ರ” ಹಾಗೂ ” ರಾಂಧವ” ಚಿತ್ರ ಗಳಲ್ಲಿ ನನ್ನನ್ನು ಹಾಡಿಸಿ , ಧ್ಧನಿ ಉಳಿಸಿಲ್ಲ , ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ..

Leave a Reply

Your email address will not be published. Required fields are marked *