ಈ ಊರಿನಲ್ಲಿ ಹನುಮನನ್ನು ನಿಷೇ ದಿಸಲಾಗಿದೆ. ಇಲ್ಲಿ ಮಾರುತಿಯ ಪೂಜೆ ಮಾಡುವ ಹಾಗಿಲ್ಲ, ಆಂಜನೇಯನಿಗೆ ಸಂಭಂದಿಸಿದ ಹೆಸರುಗಳನ್ನು ಇಟ್ಟು ಕೊಳ್ಳುವ ಹಾಗಿಲ್ಲ. ಇಲ್ಲಿ ಗೆ ಮಾರುತಿ ಕಾರುಗಳೂು ಬರುವಹಾಗೆ ಅಲ್ಲಿ..

ಹಿಂದೂ ಧರ್ಮೀಯರು ಪೂಜಿಸುವ ದೈವಗಳಲ್ಲಿ ಪ್ರಮುಖ ದೇವರೆಂದರೆ ಅದು ಆಂಜನೇಯ. ಪ್ರತಿಯೊಂದು ಗ್ರಾಮಗಳಲ್ಲಿ ಹನುಮಂತನ ದೇವಾಲಯಗಳು ಇರುತ್ತವೆ. ರಾಮ ದೂತ ಹನುಮನನ್ನು ಜನ ತಮ್ಮನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುವ, ದೈವ ಭಲವನ್ನು ನೀಡುವ ಎಲ್ಲಾ ರೀತಿಯ ಚೈತನ್ಯವನ್ನು ತುಂಬುವ ಶಕ್ತಿ ದೈವವಾಗಿ ಆರಾಧಿಸುತ್ತಾ ಬಂದಿದ್ದಾರೆ.

ಆದರೆ ಈ ಒಂದು ಗ್ರಾಮದಲ್ಲಿ ಮಾತ್ರ ನೀವು ಆಂಜನೇಯ ದೇವಾಲಯವನ್ನು ನೋಡಲು ಸಾಧ್ಯವಿಲ್ಲ. ಇಲ್ಲಿ ಹನುಮನ ಯಾವುದೇ ಹೆಸರು ಕೇಳುವುದಿಲ್ಲ. ರಾಮ ಭಂಟನ ಯಾವುದೇ ಹೆಸರುಗಳನ್ನ ಜನ ಇಟ್ಟುಕೊಳ್ಳುವ ಹಾಗಿಲ್ಲ. ಒಂದು ವೇಳೆ ಬೇರೆ ಕಡೆಯಿಂದ ಹನುಮನಿಗೆ ಸಂಭಂದಿಸಿದ ಹೆಸರನ್ನು ಇಟ್ಟುಕೊಂಡವರು ಇಲ್ಲಿಗೆ ಬಂದರೆ ಅದ ಹೆಸರನ್ನು ಬದಲಾಯಿಸಿ ಕರೆಯಲಾಗುತ್ತದೆ.

ಅಷ್ಟೇ ಏಕೆ ಇಲ್ಲಿಗೆ ಮಾರುತಿ ಕಾರುಗಳು ಪ್ರವೇಶ ಮಾಡುವಂತಿಲ್ಲ. ಅರೇ ಏಕೆ ಈ ಜನರಿಗೆ ಆಂಜನೇಯನ ಮೇಲೆ ಅಷ್ಟು ದ್ವೇಷ ?ಏಕೆ ಈ ಸಂಪ್ರದಾಯ ಎಂದೆನಿಸಬಹುದು ನಿಮಗೆ ಅದಕ್ಕೆ ಇಲ್ಲಿದೆ ಉತ್ತರ…

ಇದು ಮಹಾರಾಷ್ಟ್ರದ ಅಹಮದ್ ನಗರದ ಬಳಿ ಇರುವ ನಂದಾ ಎಂಬುವ ಗ್ರಾಮ. ಈ ಗ್ರಾಮವನ್ನು ದೈತ್ಯ ನಂದಾ ಎಂದೂ ಕೂಡ ಕರೆಯಲಾಗುತ್ತದೆ. ಮುಂಬೈನಿಂದ ಐದು ಗಂಟೆಗಳ ಪ್ರಯಾಣ ಈ ಗ್ರಾಮಕ್ಕೆ . ಇದು ಎರಡು ಸಾವಿರ ಜನಸಂಖ್ಯೆ ಇರುವ ಗ್ರಾಮ.ಇಲ್ಲಿ ಆಂಜನೇಯನನ್ನು ಆರಾಧಿಸುವುದು ಇರಲಿ ಅವನ ಹೆಸರನ್ನೂ ಹೆತ್ತುವ ಹಾಗಿಲ್ಲ.

ಈ ಸಂಪ್ರದಾಯಕ್ಕೆ ಕಾರಣವೆಂದರೆ ಅದ ಪುರಾಣತನ ಕಥೆ. ಒಮ್ಮೆ ತ್ರೇತಾಯುಗದಲ್ಲಿ ಶ್ರೀ ರಾಮ ಚಂದ್ರನು ಸೀತಾಮಾತೆ, ಲಕ್ಷ್ಮಣ, ಆಂಜನೇಯನ ಸಮೇತ ಕೇದಾರೇಶ್ವರ ಕ್ಷೇತ್ರಕ್ಕೆ ಬಂದಿದ್ದರಂತೆ. ಆಗ ನಂದಾಸುರ ಎಂಬ ಅಸುರ ರಾಮನ ಪಕ್ಕದಲ್ಲಿ ಇದ್ದ ಹನುಮನನ್ನು ನೋಡಿ ಹೊಟ್ಟೆಕಿಚ್ಚುಪಟ್ಟನಂತೆ.

ಈ ಕಾರಣ ನಂದಾಸುರ ಸದಾ ರಾಮನ ಜೊತೆ ಇರುವ ಹನುಮನ ಮೇಲೆ ಯುದ್ಧಕ್ಕೆ ಹೋದ. ಇವರಿಬ್ಬರು ಜಗಳದಲ್ಲಿ ಯಾರೂ ಸೋಲದೆ ಇರಲು ಲಕ್ಷ್ಮಣನು ಆಂಜನೇಯನಿಗೆ ಸಹಕರಿಸಲು ಮುಂದಾದಾಗ ರಾಮ ಅವನನ್ನು ತಡೆಯುತ್ತಾನೆ. ಏಕೆಂದರೆ ಅಸುರನು ಮಹಾ ರಾಮ ಭಂಟನಾಗಿರುತ್ತಾನೆ. ಅಲ್ಲದೆ ಯುದ್ಧ ಮಾಡುವಾಗ ರಾಮ ನಾಮ ಸ್ಮರಣೆ ಮಾಡುತ್ತಿರುತ್ತಾನೆ.

ಕೊನೆಗೆ ಶ್ರೀ ರಾಮ ಚಂದ್ರನು ಯುದ್ದವನ್ನು ನಿಲ್ಲಿಸಿ, ಆ ಪ್ರದೇಶವನ್ನು ರಕ್ಷಿಸಿ ತನ್ನ ಹೆಸರಿನಲ್ಲಿ ಜನರನ್ನು ಕಾಪಾಡುತ್ತಾ ಬದುಕು ಎಂದು ಆಶೀರ್ವದಿಸುತ್ತಾ ನೆ. ಅಂದಿನಿಂದ ಅಲ್ಲಿ ನಂದಾಸುರನ್ನು ಬಿಟ್ಟರೆ ಮತ್ಯಾವ ದೈವವನ್ನು ಅರಾಧಿಸುವುದಿಲ್ಲ.ಈ ಪರಂಪರೆ ನೆನ್ನೆ ಮೊನ್ನೆಯದಲ್ಲ ಶತಮಾನಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ.