ಮೊಳಕೆ ಕಟ್ಟಿದ ಹೆಸರುಕಾಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ.?

ಕಾಳುಗಳು ಮನುಷ್ಯನ ಆರೋಗ್ಯಕ್ಕೆ ಅತೀ ಅಗತ್ಯ. ಆದರೆ ಬರೀ ಕಾಳುಗಳನ್ನು ತಿನ್ನುವ ಬದಲು ಮೊಳಕೆಯೊಡೆದ ಕಾಳುಗಳನ್ನು ತಿನ್ನುವುದು ಒಳ್ಳೆಯದು. ಏಕೆಂದರೆ ಮೊಳಕೆ ಕಾಳುಗಳು ಯಥೇಚ್ಛವಾದ ಪ್ರೊಟಿನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.

ಮೊಳಕೆ ಕಾಳುಗಳು ಅಂದರೆ ನಮಗೆ ಮೊದಲಿಗೆ ನೆನಪಾಗುವುದು ಹುರುಳಿ ಕಾಳು, ಹೆಸರುಕಾಳು ಹಾಗೂ ಕಳ್ಳೆ ಕಾಳು.ಇದರಲ್ಲಿ ಯಾವುದೇ ಮೊಳಕೆಕಾಳು ಅಥ್ವಾ ಎಲ್ಲಾ ಸೇರಿದಿ ತಿಂದರೂ ಕೂಡ ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತವೆ. ಹಾಗಾದ್ರೆ ಹೆಸರುಕಾಳು ಮೊಳಕೆ ಕಾಳುಗಳಿಂದ ಏನೆಲ್ಲಾ ಉಪಯೋಗ ಇದೆ ಅಂತಾ ಮುಂದೆ ನೋಡೋಣ ಬನ್ನಿ…

ಸಾಮಾನ್ಯವಾಗಿ ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ಟೀ ಕಾಫಿ ಹಾಲು ಅಂತ ಕುಡಿಯುತ್ತಾರೆ. ನಂತರ ತಿಂಡಿ ಮಾಡುತ್ತೇವೆ. ಆದರೆ ತಿಂಡಿ ಮಾಡುವ ಮೊದಲು ಕೇವಲ ಒಂದೇ ಹಿಡಿಯಷ್ಟು ಮೊಳಕೆಯೊಡೆದ ಕಾಳುಗಳನ್ನು
ಖಾಲಿ ಹೊಟ್ಟೆಯಲ್ಲಿ ತಿಂದರೆ ಹೆಚ್ಚಿನ ಪೌಷ್ಠಿಕಾಂಶಗಳು ನಮ್ಮ ದೇಹಕ್ಕೆ ಸಿಗುತ್ತವೆ. ಅಷ್ಟೇ ಅಲ್ಲದೆ ಇದರಲ್ಲಿ ಕ್ಯಾಲೋರಿ ಕಡಿಮೆ ಇದ್ದು ವಿಟಮಿನ್ ಬಿ ಜೊತೆಗೆ ನಾರಿನಂಶ ಕೂಡ ಇದೆ.

*ಅಷ್ಟೇ ಅಲ್ಲದೆ ವಿಟಮಿನ್ ಸಿ ಹಾಗೂ ಕೆ ಕೂಡ ಇದೆ. ಆಹಾರ ಕ್ರಮವಾಗಿ ಅಳವಡಿಸಬಹುದಾದ ಅದ್ಭುತ ಆಹಾರ ಇದಾಗಿದೆ. ಮೊಳಕೆ ಕಾಳುಗಳಲ್ಲಿರುವ ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತ ಹೆಪ್ಪುಗಟ್ಟುವುದು ಅಂದರೆ ಅಕಸ್ಮಾತಾಗಿ ನಿಮಗೆ ಯಾವುದೇ ಗಾಯಗಳಾಗಿ ರಕ್ತ ಸೋರುತ್ತಿದ್ದಲ್ಲಿ ಆ ಸಂದರ್ಭದಲ್ಲಿ ಆ ಜಾಗದಲ್ಲಿ ರಕ್ತ ನಿಲ್ಲಬೇಕೆಂದರೆ ರಕ್ತ ಹೆಪ್ಪುಗಟ್ಟಬೇಕು. ಹಾಗಾಗಿ ರಕ್ತಹೆಪ್ಪುಗಟ್ಟುವಲ್ಲಿ ವಿಟಮಿನ್ ಕೆ ಪ್ರೋಟೀನ್ ಅಂಶವು ನಮ್ಮ ದೇಹದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ವಿಟಮಿನ್ ಕೆ ಅಂಶವು ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಮಾತ್ರ ಹೆಚ್ಚಾಗಿ ಸಿಗುತ್ತದೆ.

*ಮೊಳಕೆ ಹೊಡೆದಿರುವ ಕಾಳುಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮೊಳಕೆ ಕಾಳು ಗಳಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದ್ದು ಇದು ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಿ ಸೋಂಕು ಹಾಗೂ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ಅಷ್ಟೇ ಅಲ್ಲದೆ ಚರ್ಮದ ಕ್ಯಾನ್ಸರ್ ಬಾರದಂತೆ ತಡೆಯಲು ಮೊಳಕೆಕಾಳುಗಳು ಪ್ರಮುಖ ಪಾತ್ರ ವಹಿಸುತ್ತವೆ.

*ನಿಮ್ಮ ಕೂದಲುಗಳ ಆರೈಕೆ ಸಹ ಹೆಸರುಕಾಳು ಮೊಳಕೆಕಾಳುಗಳು ಉತ್ತಮವಾದ ಆಹಾರವಾಗಿದೆ. ವಿಟಮಿನ್ ಸಿ ಅಂಶವು ಒಳಗೊಂಡಿರುವ ಕಾರಣ ನಿಮ್ಮ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಲು ವಿಟಮಿನ್ C ಪ್ರಮುಖ ಪಾತ್ರವಹಿಸುತ್ತದೆ.

*ಹೆಸರು ಕಾಳು ಮೊಳಕೆ ಕಟ್ಟಿದ ಕಾಳುಗಳನ್ನು ತಿನ್ನುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಇದರಲ್ಲಿರುವ ಫೈಬರ್ ಅಂಶವು ದೇಹದಲ್ಲಿ ಆಹಾರದ ಸಂಚಾರವನ್ನು ಸಲೀಸು ಮಾಡಿ, ಮಲ ಸರಿಯಾದ ಪ್ರಮಾಣದಲ್ಲಿ ಹೋಗಲು ಸಹಾಯ ಮಾಡಿ ಮಲಬದ್ಧತೆಯನ್ನು ತಡೆಯುತ್ತದೆ. ಇಷ್ಟೆಲ್ಲಾ ಉಪಯೋಗಗಳಿರುವ ಮೊಳಕೆಗಳನ್ನು ತಿನ್ನಲು ಈ ದಿನದಿಂದಲೇ ಸ್ಟಾರ್ಟ್ ಮಾಡಿ.