ಸಾಕ್ಷಾತ್ ಮಹಾಲಕ್ಷ್ಮಿಯು ಸ್ವಯಿಚ್ಛೆಯಿಂದ ನೆಲೆಸಿರುವ ಈ ಸ್ಥಳಕ್ಕೆ ಒಮ್ಮೆ ನೀವು ಭೇಟಿ ನೀಡಿದ್ರೆ ನಿಮ್ಮ ಕಷ್ಟ ಪರಿಹಾರವಾಗುವುದು ಶತಸಿದ್ಧ..ಇದು ನಮ್ಮ ಕರ್ನಾಟಕದಲ್ಲೇ ಇರುವ ಪುಣ್ಯ ಕ್ಷೇತ್ರ…

ಇದು ಮಾಹಾಲಕ್ಷ್ಮಿ ತನ್ನ ಸ್ವಯಿಚ್ಚೆಯಿಂದ ನೆಲಸಿ ಭಕ್ತರನ್ನು ಪೊರೆಯುತ್ತಿರುವ, ಅತಿ ಹೆಚ್ಚು ಜನರು ಭೇಟಿ ನೀಡುವ, ಕರ್ನಾಟಕದ ಕೊಲ್ಲಾಪುರ ಎಂದು ಕರೆಯಲ್ಪಡುವ ಏಕೈಕ ಸ್ಥಳ. ಇಲ್ಲಿಗೆ ಭೇಟಿ ನೀಡಿ ತಾಯಿ ಮಹಾಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾದರೆ ಎಂತಹ ಹಣಕಾಸಿನ ಸಂಕಷ್ಟವಿದ್ದರೂ ಪರಿಹಾರವಾಗುವುದು ಶತ ಸಿದ್ಧ. ಈ ಕ್ಷೇತ್ರ ಬೇರಾವುದೂ ಅಲ್ಲ ನಮ್ಮ ಕರ್ನಾಟಕದಲ್ಲೇ ಇರುವ ಗೊರವನಹಳ್ಳಿ ಮಹಾಲಕ್ಷ್ಮಿ ಶ್ರೀ ಕ್ಷೇತ್ರ.

ಇದು ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ, ಗೊರವನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿರುವ ಶ್ರೀ ಮಹಾಲಕ್ಷ್ಮಿಯ ದೇವಿಯ ಶ್ರೀ ಕ್ಷೇತ್ರ. ಇಲ್ಲಿಗೆ ಕಡು ಬಡವರಿಂದ ಹಿಡಿದು ವಿರಾಟ್ ಕೊಹ್ಲಿಯಂತಹ ದೊಡ್ಡ ದೊಡ್ಡ ಕ್ರಿಕೆಟ್ ಆಟಗಾರರವರೆಗೂ ಲಕ್ಷಾಂತರ ಭಕ್ತರು ಬರುತ್ತಾರೆ. ಇಲ್ಲಿಗೆ ಬಂದು ದೇವಿ ದರ್ಶನ ಪಡೆದುಕೊಂಡು ಹೋದ ನಂತರ ಅದೃಷ್ಟವು ಬದಲಾಗುತ್ತದೆ.. ಹಣಕಾಸಿನ ಸಮಸ್ಯೆಗಳು ಬಗೆಹರಿದು ಎಲ್ಲ ಅನಿಷ್ಟಗಳು ನಾಶವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.

ಸಾಕ್ಷಾತ್ ಮಹಾಲಕ್ಷ್ಮಿಯು ಗೊರವನಹಳ್ಳಿಯಲ್ಲಿ ಬಂದು ನೆಲೆಸಿರುವುದರ ಇಂದೆ ಒಂದು ರೋಚಕ ಕಥೆ ಇದೆ. ತುಮಕೂರು ಜಿಲ್ಲೆಯ, ಕೊರಟಗೆರೆ ತಾಲೂಕಿನ, ಗೊರವನಹಳ್ಳಿ ಎಂಬ ಗ್ರಾಮದಲ್ಲಿ ಅಬ್ಬಯ್ಯ ಎಂಬ ವ್ಯಕ್ತಿ ಇದ್ದರು. ಅವರಿಗೆ ಒಮ್ಮೆ ತೋಟದಲ್ಲಿ ಕೆಲಸ ಮಾಡುವಾಗ ಒಂದು ಹೆಣ್ಣಿನ ಅಶರೀರವಾಣಿಯೊಂದು ಕೇಳಿಸಿತು. ನಿನ್ನೊಂದಿಗೆ ನಾನು ಬರುವೆ ನನ್ನನ್ನು ಕರೆದೊಯ್ಯು ಎಂಬ ಮಾತುಗಳು ಕೇಳಿಸಿದವು..

ಅಬ್ಬಯ್ಯ ಮೊದಮೊದಲು ಇದನ್ನು ನಿರ್ಲಕ್ಷಿಸಿದನು. ಆಶರೀರ ವಾಣಿ ಮತ್ತೆ ಮತ್ತೆ ಕೇಳಿಸುತ್ತಿತ್ತು. ಕೊನೆಗೆ ಒಂದು ದಿನ ಅಬ್ಬಯ್ಯ ಈ ವಿಷಯವನ್ನು ತನ್ನ ತಾಯಿಗೆ ತಿಳಿಸಿದ. ಅವನ ತಾಯಿ…ಒಂದು ವೇಳೆ ನೀನು ದೇವರಾಗಿದ್ದರೆ ನನ್ನ ಜೊತೆಯಲ್ಲಿ ಬಾ..,,ದೆವ್ವವಾಗಿದ್ದರೆ ಇಲ್ಲೇ ಇರು ಎಂದು ಹೇಳು ಎಂಬ ಸಲಹೆಯನ್ನು ನೀಡಿದರು. ಇದರಂತೆ ಅಬ್ಬಯ್ಯ ಅಶರೀರ ವಾಣಿಗೆ ನೀನು ದೈವವಾಗಿದ್ದರೆ ನನ್ ಜೊತೆ ಬಾ.. ದೆವ್ವ ವಾಗಿದ್ದರೆ ಇಲ್ಲೇ ಇರು ಎಂದು ಹೇಳಿದರು.

ನಂತರ ಆ ಸ್ಥಳದಲ್ಲಿ ಮಹಾಲಕ್ಷ್ಮಿಯ ವಿಗ್ರಹ ದೊರಕಿತಂತೆ.. ಅದನ್ನು ಅವರು ಮನೆಗೆ ಕೊಂಡೊಯ್ದರು. ಆನಂತರ ಅವರ ಕನಸಿನಲ್ಲಿ ಮಹಾಲಕ್ಷ್ಮಿಯು ಬಂದು ತನಗೆ ಒಂದು ದೇವಾಲಯ ನಿರ್ಮಿಸುವಂತೆ ಆಜ್ಞಾಪಿಸಿದರು. ಅದರಂತೆ ಅಬ್ಬಯ್ಯ ದೇವಾಲಯವನ್ನು ನಿರ್ಮಿಸಿದರು.

ಆದರೆ ಆ ದೇವಾಲಯ ಅಷ್ಟು ಚೆನ್ನಾಗಿ ಕಾರ್ಯ ಸ್ಥಿತಿಯಲ್ಲಿ ಇರಲಿಲ್ಲ. ಇದನ್ನು ಕಂಡ ಮಹಾಲಕ್ಷ್ಮಿಯ ಮಹಾ ಭಕ್ತೆ ಕಮಲಮ್ಮನವರು ಗ್ರಾಮದ ಜನರನ್ನು ಒಪ್ಪಿಸಿ ಮಹಾಲಕ್ಷ್ಮಿಯ ದೇವಸ್ಥಾನವನ್ನು ಪುನರುತ್ಥಾನ ಗೊಳಿಸಿದರು.. 1952ರಲ್ಲಿ ಈ ದೇವಾಲಯ ಕಮಲಮ್ಮ ನವರಿಂದ ಪುನರ್ ನಿರ್ಮಾಣ ಗೊಂಡಿತ್ತು…ಆನಂತರ ಆ ದೇವಸ್ಥಾನದ ವ್ಯವಸ್ಥಾಪಕರೂ ಸಹ ಅವರೇ ಆಗಿ ಕಾರ್ಯ ನಿರ್ವಹಿಸಿದರು.

ಕಮಲಮ್ಮನವರು ಗೊರವನಹಳ್ಳಿಗೆ ಬಂದಿದ್ದು 1925 ರಲ್ಲಿ. ಈಗಲೂ ಸಹ ಅಲ್ಲಿ ಕಮಲಮ್ಮನವರ ಮಹಾ ಭಕ್ತಿಗೆ ಸಾಕ್ಷಿ ಎಂಬಂತೆ ಅವರ ಕುರುಹುಗಳಿವೆ. ಕಮಲಮ್ಮ ನವರನ್ನು ಮಹಾಲಕ್ಷ್ಮಿಯ ಮಹಾ ಭಕ್ತೆ ಎಂದೇ ಪ್ರಸಿದ್ಧರಾಗಿದ್ದಾರೆ.

ಈ ದೇವಾಲಯದಲ್ಲಿ.. ಎಲ್ಲಾ ಭಕ್ತರಿಗೂ ದೇವಿಯ ದರ್ಶನ ಮಾಡುವ ವ್ಯವಸ್ಥೆ ಇದೆ.. ಮಧ್ಯಾಹ್ನದ ಸಮಯದಲ್ಲಿ ಅನ್ನ ಪ್ರಸಾದವನ್ನು ಕೊಡಲಾಗುತ್ತದೆ. ಇಲ್ಲಿ ಕಲ್ಯಾಣ ಮಂಟಪವಿದ್ದು ಅದಕ್ಕೆ ಅಗತ್ಯವಾದ ಹಣವನ್ನು ಪಾವತಿಸಿ ಇದನ್ನು ಉಪಯೋಗಿಸಿಕೊಳ್ಳಬಹುದಾಗಿದೆ.

ಈ ದೇವಾಲಯವು ಬೆಂಗಳೂರಿನಿಂದ 80 ಕಿಲೋಮೀಟರ್ ದೂರದಲ್ಲಿದೆ. ಬೆಳಗ್ಗೆಯಿಂದ ಹಿಡಿದು ರಾತ್ರಿಯವರೆಗೂ ದೇವಿಯ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಈ ದೇವಾಲಯದ ಸಮೀಪದಲ್ಲಿ ಇನ್ನು ಹಲವಾರು ಪ್ರವಾಸಿ ಸ್ಥಳಗಳಿದ್ದು ಎಲ್ಲರೂ ಒಮ್ಮೆ ಭೇಟಿ ನೀಡಬಹುದಾಗಿದೆ.