ತನ್ನ ತಾಯಿ ಎರಡನೇ ಮದುವೆ ಆಗಿರುವುದಕ್ಕೆ ಮಗನಿಂದ ಭಾವನಾತ್ಮಕ ಪೋಸ್ಟ್.!ವೈರಲ್ ಆಗಿರುವ ಆ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

ಮಗನೊಬ್ಬ ತನ್ನ ತಾಯಿ ಎರಡನೇ ಮದುವೆ ಆಗಿದ್ದಕ್ಕೆ ಶುಭಾಷಯ ಕೋರಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಆ ಪೋಸ್ಟ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಕೇರಳದ ಕೊಲ್ಲಂ ಜಿಲ್ಲೆಯ ಗೋಕುಲ್ ಶ್ರೀಧರ್ ಎಂಬ ಹುಡುಗನೇ ಸಾಮಾಜಿಕ ಜಾಲತಾಣದಲ್ಲಿ ತನ್ನ ತಾಯಿಯ ಮರು ಮದುವೆ ಪೋಸ್ಟ್ ಮಾಡಿರುವ ಹುಡುಗ. ಎಂಜಿನಿಯರ್ ಓದುತ್ತಿರುವ ಈ ಹುಡುಗ ತನ್ನ ತಾಯಿ ಮಾಡಿರುವ ತ್ಯಾಗದ ಬಗ್ಗೆ ನೆನೆದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ.

 ಫೇಸ್ಬುಕ್ ನಲ್ಲಿ ತನ್ನ ತಾಯಿಯ ಮರು ವಿವಾಹವಾದ ಫೋಟೋವನ್ನು ಹಂಚಿಕೊಂಡಿದ್ದು, ಇದು ತನ್ನ ತಾಯಿ ವಿವಾಹವಾಗಿದ್ದು ಎಂದು ಮಲೆಯಾಳಂ ಭಾಷೆಯಲ್ಲಿ ಬರೆದುಕೊಂಡಿದ್ದಾನೆ.

ತಾಯಿಯ ಬಗ್ಗೆ ಮಾಡಿರುವ ಆ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?

ನನ್ನ ಅಮ್ಮ ಮೊದಲನೇ ಮದುವೆಯಿಂದ ಸಾಕಷ್ಟು ನೋಡಿದ್ದರು. ಆ ನೋವಿನಲ್ಲಿಯೂ ನಂಗಾಗಿ ಬದುಕು ನಡೆಸಿಕೊಂಡು ಬಂದು, ನನ್ನ ಯಶಸ್ಸಿಗಾಗಿ ತಮ್ಮ ಜೀವನವನ್ನೇ ಮುಡಾಪಿಗಿಟ್ಟಿದ್ದಾರೆ. ಗೋಕುಲ್ ಶ್ರೀಧರ್ ತನ್ನ ತಾಯಿ ಅನುಭವಿಸಿರುವ ಒಂದು ಘಟನೆಯ ಬಗ್ಗೆ ಹಂಚಿಕೊಂಡಿದ್ದು, ಒಮ್ಮೆ ತನ್ನ ತಾಯಿ ತನ್ನ ಗಂಡನಿಂದ ಹೊಡೆಸಿಕೊಂಡು ತಲೆಯಲ್ಲಿ ರಕ್ತ ಸೋರುತ್ತಿರುವುದನ್ನು ನೋಡಿದೆ…

ಆಗ ನನ್ನ ತಾಯಿಯನ್ನು ಏಕೆ ಇಷ್ಟೊಂದು ಕಷ್ಟವನ್ನು ಸಹಿಸಿಕೊಳ್ಳುತ್ತಿರುವೆ ಎಂದು ತನ್ನ ತಾಯಿಯನ್ನು ಪ್ರಶ್ನೆ ಮಾಡಿದೆ. ಅದಕ್ಕೆ ತನ್ನ ತಾಯಿ, ಈ ಕಷ್ಟವೆನ್ನೆಲ್ಲಾ ನಿನಗಾಗಿ ಸಹಿಸಿಕೊಳ್ಳುತ್ತಿದ್ದೇನೆ ಎಂದು ತಮ್ಮ ಪೋಸ್ಟ್ ನಲ್ಲಿ ಗೋಕುಲ್ ಶ್ರೀಧರ್ ಬರೆದುಕೊಂಡಿದ್ದಾರೆ.

ಕಡೆಗೆ ಮೊದಲ ಪತಿಯ ನೋವನ್ನು ಸಹಿಸಲಾರದೆ ತನ್ನ ತಾಯಿ ತನ್ನ ತಾಯಿಯನ್ನು ಕರೆದುಕೊಂಡು ಆ ಮನೆಯಿಂದ ಹೊರಗಡೆ ಬಂದರು. ಆ ಸಮಯದ್ಲಲಿ ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ತಾನ್ನ ತಾಯಿಗೆ ಮದುವೆ ಮಾಡಬೇಕೆಂದು ಯೋಚಿಸಿದೆ. ಶಿಕ್ಷಕಿಯಾಗಿ ಕೆಲಸ ಮಾಡುತಿದ್ದ ತನ್ನ ತಾಯಿ ಮೊದಲಿಗೆ ಈ ಮರು ಮದುವೆಗೆ ಒಪ್ಪಿರಲಿಲ್ಲ.

ಅಮ್ಮನ ಮರು ಮದುವೆಗಾಗಿ ಅವರ ಸಹದ್ಯೋಗಿಗಳು ಕಡೆಯಿಂದ ಕೂಡ ಮರು ಮದುವೆಯ ಸಂಬಂಧ ಬಂದಿತ್ತು. ನನಗಾಗಿ ತನ್ನ ಕೆಲಸಗಳನ್ನೆಲ್ಲಾ ತ್ಯಾಗ ಮಾಡಿದ್ದ ಅಮ್ಮನನ್ನು ಕೆಲಸದ ನೆಪದಲ್ಲಿ ಬಿಟ್ಟು ಹೋದಲ್ಲಿ ಅವರು ಒಂಟಿಯಾಗಿ ಬಿಡುತ್ತಾರೆ ಎಂದು ಯೋಚಿಸಿ ಅಮ್ಮನಿಗೆ ಬಲವಂತ ಮಾಡಿ ಪುನರ್ ವಿವಾಹಕ್ಕೆ ಮದುವೆಗೆ ಒಪ್ಪಿಸಿದೆ.

ಈಗ ನನ್ನ ತಾಯಿ ಮರು ಮದುವೆ ಆಗಿ ಬಹಳ ಸಂತೋಷದಿಂದ ಇದ್ದಾರೆ ಎಂದು ಗೋಕುಲ್ ಶ್ರೀಧರ್ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ತನ್ನ ತಾಯಿಯ ಮರು ಮದುವೆಯ ನಿರ್ಧಾರಕ್ಕೆ ಬಂಡ ಮಗನ ಬಗ್ಗೆ ನೀವೇನು ಹೇಳುತ್ತೀರಾ..ನಿಮ್ಮ ಅಭಿಪ್ರಾಯ ಏನು ತಿಳಿಸಿ…