ಮೇಕೆ ಹಾಲಿನಲ್ಲಿ ಈ ಎರಡು ಮಿಕ್ಸ್ ಮಾಡಿ ಕುಡಿದ್ರೆ ಏನಾಗುತ್ತೆ ಗೊತ್ತಾ?ಹಲವಾರು ರೋಗಗಳಿಗೆ ರಾಮಬಾಣ ಮೇಕೆ ಹಾಲು..

ಈಗಂತೂ 40 ರಿಂದ 45ವರ್ಷ ವಯಸ್ಸು ಆಗುತ್ತಿದ್ದಂತೆ ತುಂಬಾ ಜನರಿಗೆ ಮೊಣಕಾಲು (ಮಂಡಿ) ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಒಮ್ಮೆ ಈ ಮಂದಿ ನೋವು ಬಂದರೆ ಮುಗಿಯಿತು. ಕೂತರೂ ನೋವೇ, ಎದ್ದರೂ ನೋವೇ. ಅದರ ನೋವು ಅನುಭವಿಸಿದವರಿಗೇ ಗೊತ್ತು.

ಈ ಮೊಣಕಾಲು ನೋವು ಬಂದರೆ ಸಾಮಾನ್ಯವಾಗಿ ವಾಸಿಯಾಗುವುದಿಲ್ಲ. ಎಷ್ಟೇ ಔಷಧಗಳನ್ನು ತೆಗೆದುಕೊಂಡರೂ ಕೇವಲ ಆ ಸಮಯಕ್ಕೆ ನೋವು ಕಡಿಮೆಯಾಗುತ್ತೆ ಒರತು, ಶಾಶ್ವತವಾಗಿ ಇದಕ್ಕೆ ಪರಿಹಾರ ಸಿಗುವುದು ಕಷ್ಟ.

ಅತೀ ಹೆಚ್ಚಾಗಿ 40-45 ವಯಸ್ಸು ಆದಮೇಲೆ ತುಂಬಾ ಜನರಿಗೆ ಮೊಣಕಾಲು ನೋವು ಕಾಣಿಸಿಕೊಳ್ಳುತ್ತವೆ. ಫ್ಲೋರೈಡ್ ಸಮಸ್ಯೆ ಇದ್ದಾರೆ ಎಲ್ಲಾ ವಯೋಮಾದವರಲ್ಲೂ ಮೊಣಕಾಲು ನೋವು, ಕೀಲುಗಳ ನೋವಿನ ಸಮಸ್ಯೆ ಕಾಣಿಸುತ್ತದೆ.

ಬಿಡದಂತೆ ಕಾಡುವ ಈ ಮೊಣಕಾಲಿನ ನೋವಿಗೆ ಸಾಂಪ್ರದಾಯಿಕ ಪದ್ದತಿಯಲ್ಲಿ ತುಂಬಾ ಜನರಿಗೆ ತಿಳಿಯದ ಪರಿಷ್ಕಾರವಿದೆ. ಅದೇ ಮೇಕೆಯ ಹಾಲು. ಇಷ್ಟಕ್ಕೂ ಮೇಕೆ ಹಾಲು ಹೇಗೆ ಸೇವಿಸಿದರೆ ಮೊಣಕಾಲು ನೋವು ಕಡಿಮೆಯಾಗುತ್ತದೆ ಎಂದು ಮುಂದೆ ತಿಳಿಯೋಣ ಬನ್ನಿ…

ಮೇಕೆ ಹಾಲಿನ ಮದ್ದು ತಯಾರಿಸಿಕೊಳ್ಳುವ ಬಗೆ…

ಒಂದು ಗ್ಲಾಸ್ ಮೇಕೆ ಹಾಲು ತೆಗೆದಿಟ್ಟುಕೊಳ್ಳಿ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದು ಗ್ಲಾಸ್ ಪ್ರಮಾಣದಲ್ಲಿ ಉಗುರು ಬೆಚ್ಚಗಿನ ಮೇಕೆ ಹಾಲಿನಲ್ಲಿ ಒಂದು ಸ್ಪೂನ್ ಎಳ್ಳುಪುಡಿ,ಸಣ್ಣ ಬೆಲ್ಲದ ಚೂರು ಸೇರಿಸಿ ಕುಡಿಯಬೇಕು.

ಇದರ ಅದ್ಭುತ ಪ್ರಯೋಜನಗಳು…

*ಹೀಗೆ ತಾಯರಿಸಿಕೊಂಡ ಮೇಕೆ ಹಾಲಿನ ಮದ್ದನ್ನು ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ಕುಡಿಯುತ್ತಿದ್ದರೆ ಒಂದು ತಿಂಗಳಲ್ಲಿ ಮೊಣಕಾಲಿನ ನೋವು ಕಡಿಮೆಯಾಗುವುದು ನಿಮ್ಮ ಅನುಭವಕ್ಕೆ ಬರುತ್ತದೆ.

*ಮೇಕೆ ಹಾಲಿನಲ್ಲಿ ಹೇರಳವಾದ ಕ್ಯಾಲ್ಸಿಯಂ, ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿದ್ದು ಈ ಔಷಧೀಯ ಗುಣಗಳು ಮಂಡಿ ನೋವನ್ನು ಕಡಿಮೆ ಮಾಡುತ್ತವೆ ಎಂದು ಸಂಶೋಧನೆಗಳು ಹೇಳಿವೆ.

*ಇದರ ಜೊತೆಗೆ ಮೇಕೆ ಹಾಲಿನಲ್ಲಿ ವಿಟಮಿನ್ ಡಿ ಹಾಗೂ ಇತರೆ ಪೋಷಕಾಂಶಗಳು ದೇಹಕ್ಕೆ ಸಮೃದ್ಧವಾಗಿ ಸಿಗುತ್ತವೆ. ಕರಗಿದ ಕಾರ್ಟಿಲೆಜ್ ಪುನರ್ ಉತ್ಪತ್ತಿಯಾಗುತ್ತದೆ. ಹಾಗಾಗಿ ಈ ಮೇಕೆ ಹಾಲು ಮಂದಿ ನೋವಿಗೆ ತುಂಬಾ ಉಪಯುಕ್ತ.

*ಮಂಡಿ ನೋವು ಮಾತ್ರವಲ್ಲದೇ ಮಾರಕ ಡೆಂಘಿ ರೋಗ ಸೇರಿದಂತೆ ಹೊಟ್ಟೆ ಸಮಸ್ಯೆ, ಅಜೀರ್ಣ ಸಮಸ್ಯೆ ಹಾಗೂ ಚಿಕ್ಕ ಮಕ್ಕಳ ಸಮಸ್ಯೆಗಳಿಗೆ ಉಪಯುಕ್ತವಾಗಿದೆ. ಎಲ್ಲಾ ವಯೋಮಾನದವರು ಸೇವಿಸಬಹುದಾದಂತ ಈ ಮೇಕೆ ಹಾಲು ಹಲವಾರು ಖಾಯಿಲೆಗಳಿಗೆ ರಾಮಬಾಣವಾಗಿದೆ.