ತಾಯಿ ಅಳುವುದನ್ನು ಕೇಳಿ ಎದ್ದು ಕುಳಿತ ಸತ್ತ ಮಗ!ಅಮ್ಮನ ಪ್ರಾರ್ಥನೆಯಿಂದ ಸಾವನ್ನೇ ಗೆದ್ದ..!

ತಾಯಿ ಎಂದರೆ ದೇವರ ಸ್ವರೂಪ. ನಮ್ಮ ಕಣ್ಣಿಗೆ ಕಾಣುವ ದೇವರು ತಾಯಿ ಎಂದು ಹೇಳಲಾಗಿದೆ. ಅದರಂತೆ ತಾಯೊಯೊಬ್ಬರು ಸಾವಿನಂಚಿನಲ್ಲಿದ್ದ ತನ್ನ ಮಗನನ್ನು ಉಳಿಸಿಕೊಂಡಿರುವ ಪವಾಡ ನಡೆದಿದೆ.

ಹೌದು, ಈ ಪವಾಡ ತೆಲಂಗಾಣ ರಾಜ್ಯದ ಸೂರ್ಯಪೇಟೆ ಜಿಲ್ಲೆಯ ಪಿಳ್ಳಲಮರಿ ಎಂಬ ಹಳ್ಳಿಯಲ್ಲಿ ನಡೆದಿದೆ.ಇದೇ ಹಳ್ಳಿಯ ಸಿದ್ದಮ್ಮ ಎಂಬುವವರಿಗೆ ಗಾಂಧಮ್ ಕಿರಣ್‍ ಎಂಬ ಹದಿನೆಂಟು ವರ್ಷದ ಮಗನಿದ್ದು, ಜ್ವರದ ಜೊತೆಗೆ ವಾಂತಿ ಹಾಗೂ ಭೇದಿ ಕೂಡ ಕಾಣಿಸಿಕೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಆದರೆ ಅಲ್ಲಿ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಕಾರಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ಹೋಗುವಂತೆ ಅಲ್ಲಿನ ಡಾಕ್ಟರ್ ಹೇಳಿದ್ದಾರೆ.

ವೈದ್ಯರ ಸೂಚನೆಯಂತೆ ಆ ತಾಯಿ ತನ್ನ ಮಗನನ್ನು ಹೈದರಾಬಾದ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದಾರೆ. ಅಲ್ಲಿ ಕಿರಣ್ ಕೋಮಾಕ್ಕೆ ಹೋಗಿದ್ದ. ಚಿಕಿತ್ಸೆ ನಡೆಸಿದ ವೈದ್ಯರು, ಕಿರಣ್ ಮೆದುಳು ಸತ್ತಿದೆ. ಕೆಲಸ ಮಾಡ್ತಿಲ್ಲ. ಆತ ಬದುಕುವುದಿಲ್ಲ. ಉಸಿರಾಟಕ್ಕೆ ನೆರವಾಗಿದ್ದ ಸಾಧನೆ ತೆಗೆಯುತ್ತೇವೆ. ಮನೆಗೆ ಕರೆದುಕೊಂಡು ಹೋಗಿ ಎಂದು ಅಲ್ಲಿನ ವೈದ್ಯರು ಸಿದ್ಧಮ್ಮನಿಗೆ ಹೇಳಿದ್ದಾರೆ.

ಕಿರಣ್ ತಾಯಿ ಸಿದ್ದಮ್ಮ ಉಸಿರಾಟಕ್ಕೆ ನೆರವಾಗಿದ್ದ ಸಾಧನ ತೆಗೆಯಲು ಒಪ್ಪದೇ, ನಮ್ಮ ಮನೆಯಲ್ಲಿಯೇ ಮಗನ ಪ್ರಾಣ ಬಿಡಲಿ ಎಂದು ಉಸಿರಾಟದ ಸಾಧನ ಹಾಕಿಕೊಂಡೆ ಮನೆಗೆ ತಂದಿದ್ದಾಳೆ. ಇದೇ ವೇಳೆ ಊರಿನಲ್ಲಿ ಕಿರಣ್ ಬದುಕುವುದಿಲ್ಲ ಎಂದು ತಿಳಿದ ಕುಟುಂಬದವರು ಹಾಗೂ ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದರು.

ಮಗನ ಹಾಸಿಗೆ ಪಕ್ಕದಲ್ಲಿ ಕುಳಿತಿದ್ದ ತಾಯಿ ಸಿದ್ದಮ್ಮ ಮಗನನ್ನು ಪದೇ ಪದೇ ಕರೆಯುತ್ತಲೇ ಇದ್ದಳಂತೆ. ಹೀಗೆ ಕೊನೆಯ ಬಾರಿ ತನ್ನ ಮಗನ ಮುಖವನ್ನು ನೋಡುವ ಸಲುವಾಗಿ ಹಾಸಿಗೆಯೇ ಮೇಲೆಯೇ ಕುಳಿತ್ತು ಕಣ್ಣೀರು ಹಾಕಿದ್ದಾಳೆ. ತನ್ನ ತಾಯಿಯ ಅಳು ಕೇಳಿದ ಮಗನ ಕಣ್ಣಿನಲ್ಲಿ ನೀರು ಬರಲು ಶುರುವಾಗಿದೆ. ಕಿರಣ್ ನಿಧಾವಾಗಿ ಉಸಿರಾಡುವುದು ಕೂಡ ಕಂಡು ಬಂದಿದೆ.ತಕ್ಷಣವೇ ಕಿರಣ್ ನನ್ನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೈದರಾಬಾದ್ ನಲ್ಲಿ ಚಿಕಿತ್ಸೆ ನೀಡಿದ್ದ ಡಾಕ್ಟರ್ ರವರನ್ನು ಸಂಪರ್ಕಿಸಿ ಅವರ ಸಲಹೆ ಪಡೆದು ಮೂರು ಇಂಜೆಕ್ಷನ್ ನೀಡಲಾಗಿದೆ. ನಂತರ ಕಿರಣ್ ಉಸಿರಾಡಲು ಶುರು ಮಾಡಿದ್ದು ಚೇತರಿಸಿಕೊಳ್ಳುತ್ತಿರುವ ಕಿರಣ್ ಮಾತನಾಡುತ್ತಿದ್ದಾನೆ ಎಂದು ಹೇಳಲಾಗಿದೆ.