1 ತಿಂಗಳು ಮೆಂತ್ಯೆ ನೆನೆಸಿದ ನೀರನ್ನು ಕುಡಿಯೋದ್ರಿಂದ ಸಿಗೋ ಅದ್ಭುತ ಪ್ರಯೋಜನಗಳನ್ನ ತಿಳಿದ್ರೆ…

ಮೆಂತ್ಯೆ ಆರೋಗ್ಯಕ್ಕೆ ತುಂಬಾ ಅತ್ಯುತ್ತಮವಾದದ್ದು. ಇದು ನಮ್ಮ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿ ಕೆಲಸ ಮಾಡಲು ಉಪಕಾರಿಯಾಗಿದೆ. ಹೊಟ್ಟೆಯಲ್ಲಿನ ಉರಿಯುವುದು ಸಮಸ್ಯೆಗಳನ್ನು ಪರಿಹಾರ ಮಾಡುವುದಲ್ಲದೆ ಇನ್ನೂ ಹತ್ತು ಹಲವು ಉಪಯೋಗಗಳನ್ನು ಹೊಂದಿದೆ.

ದಿನವೂ ಒಂದು ಲೋಟ ನೆನೆಸಿದ ಮೆಂತ್ಯ ನೀರನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ಒಂದೆರಡಲ್ಲ… ಮೊದಲು ಮೆಂತ್ಯ ನೀರನ್ನು ಹೇಗೆ ಮಾಡುವುದು ಎಂಬುದನ್ನು ತಿಳಿಯೋಣ.

*ಒಂದು ಕಪ್ ನೀರಿಗೆ ಒಂದು ಚಮಚದಷ್ಟು ಮೆಂತ್ಯವನ್ನು ಹಾಕಿ ಒಂದು ರಾತ್ರಿ ನೆನೆಸಿಡಿ. ನಂತರ ಮುಂಜಾನೆ ಎದ್ದು ಈ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರ ಪ್ರಯೋಜನ ಸಿಗಬೇಕಾದರೆ 1 ತಿಂಗಳುಗಳ ಕಾಲ ಹೀಗೆ ಮೆಂತ್ಯೆ ನೆನೆಸಿದ ನೀರನ್ನು ಕುಡಿಯಬೇಕು.

ಹಾಗಾದರೆ ಮೆಂತ್ಯೆ ನೆನೆಸಿದ ನೀರನ್ನು ಕುಡಿಯುವುದರಿಂದ ಸಿಗುವ ಆ ಅದ್ಭುತ ಆರೋಗ್ಯದ ಪ್ರಯೋಜನಗಳು ಏನು ಎಂಬುದನ್ನು ತಿಳಿಯೋಣ…

*ದೇಹದ ತೂಕ ಕಡಿಮೆಯಾಗುತ್ತದೆಮೆಂತ್ಯೆ ನೆನೆಸಿದ ನೀರನ್ನು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಮೆಂತ್ಯವನ್ನು ತಿನ್ನುವುದರಿಂದ ಅಥವಾ ಮೆಂತ್ಯ ನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುವುದು ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಆದ್ದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ದಿನವೂ ಮೆಂತ್ಯವನ್ನು ನೆನೆಸಿದ ನೀರನ್ನು ಕುಡಿಯಬಹುದು.

*ಜೀರ್ಣ ಕ್ರಿಯೆಗೆ ಅತ್ಯುತ್ತಮಮೆಂತ್ಯೆ ನೀರಿನಲ್ಲಿರುವ ಉರಿಯೂತ ಶಮನಕಾರಿ ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ನೆರವಾಗುತ್ತದೆ. ಹೊಟ್ಟೆಯಲ್ಲಿನ ಉರಿಯನ್ನು ಇದು ಶಮನಗೊಳಿಸುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯವಾಗಿ ಕೆಲಸ ನಿರ್ವಹಿಸಲು ಸಹಕಾರಿಯಾಗುತ್ತದೆ.

*ರಕ್ತದೊತ್ತಡ ನಿಯಂತ್ರಣ ಮೆಂತ್ಯೆ ದಲ್ಲಿ ಗ್ಲಾಕ್ಟೋಮ್ಮನ್ ಮತ್ತು ಪೊಟ್ಯಾಷಿಯಂಗಳು ಇವೆ. ಇವು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ. ಆದ್ದರಿಂದ ಮೆಂತ್ಯ ನೀರಿನ ಸೇವನೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ.

*ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆಮೆಂತ್ಯೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತೆಗೆದುಹಾಕುವುದು ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ಇದರೊಂದಿಗೆ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಕಾಪಾಡುವುದು.

*ಸಂಧಿವಾತ ನಿವಾರಣೆಮೆಂತ್ಯೆ ಆಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿದೆ. ಆದ್ದರಿಂದ ಇದು ಸಂಧಿವಾತದ ನೋವನ್ನು ನಿವಾರಿಸುತ್ತದೆ.

*ಕ್ಯಾನ್ಸರ್ ಕಾಯಿಲೆ ತಡೆಗಟ್ಟುತ್ತದೆ ಮೆಂತ್ಯೆ ದೇಹದ ವಿಷಕಾರಿ ಅಂಶಗಳನ್ನು ತೆಗೆದು ಹಾಕುತ್ತದೆ. ಅದರಲ್ಲೂ ಕರುಳಿನಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕುತ್ತದೆ. ಇದರಿಂದ ಕ್ಯಾನ್ಸರ್ ಬರುವುದು ತಡೆಗಟ್ಟುತ್ತದೆ. ಹೇಗೆ ಮೆಂತ್ಯ ಕರುಳಿನ ಕ್ಯಾನ್ಸರ್ ನ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

*ಮಧುಮೇಹ ನಿಯಂತ್ರಣಮೆಂತ್ಯೆದಲ್ಲಿ ಎನ್ನುವ ಪ್ರಮುಖ ನಾರಿನಂಶವು ರಕ್ತದ ಸಕ್ಕರೆ ಅಂಶವು ಹೀರಿಕೊಳ್ಳುವ ದನ್ನೂ ತಗ್ಗಿಸುವುದು .ಇದರಿಂದ ಮಧುಮೇಹ ತಡೆಯಬಹುದಾಗಿದೆ.

*ಕಿಡ್ನಿಯ ಕಲ್ಲಿನ ನಿವಾರಣೆ ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಮೆಂತ್ಯ ನೆನೆಸಿದ ನೀರನ್ನು ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲುಗಳು ಕರಗಿ ದೇಹದಿಂದ ಹೊರ ಬರುತ್ತವೆ.

ಇಷ್ಟು ಮಾತ್ರವಲ್ಲ ಇದರಿಂದ ಇನ್ನೂ ಅನೇಕ ಅನೇಕ ಪ್ರಯೋಜನಗಳಿವೆ. ನೀವು ಸಹ ಒಂದು ತಿಂಗಳುಗಳ ಕಾಲ ಮೆಂತ್ಯ ನೀರನ್ನು ಕುಡಿದು ನೋಡಿ ನಿಮ್ಮ ಆರೋಗ್ಯದಲ್ಲಿ ಉತ್ತಮ ಬದಲಾವಣೆ ಆಗುವುದನ್ನು ಗಮನಿಸಿ.