ನೀರನ್ನು ನೀವು ಹೀಗೆ ಕುಡಿಯುವುದರಿಂದ ಈ ಜನ್ಮದಲ್ಲಿ ಯಾವುದೇ ಕಾಯಿಲೆಗಳು ಬರುವುದಿಲ್ಲ…

ನೀರನ್ನು ಎಷ್ಟು ಕುಡಿಯಬೇಕು ಯಾವಾಗ ಕುಡಿಯಬೇಕು ಮತ್ತು ಹೇಗೆ ಕುಡಿಯಬೇಕು ಎಂದು ತಿಳಿದುಕೊಂಡರೆ ನಮಗೆ ಬರುವ ಶೇಕಡ 90ರಷ್ಟು ಕಾಯಿಲೆಗಳಿಂದ ನಾವು ದೂರ ಇರಬಹುದು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯವಾಗುತ್ತದೆ. ಅದಕ್ಕೂ ಮೊದಲು ಹೆಚ್ಚು ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನು ಎಂಬುದನ್ನು ತಿಳಿದುಕೊಳ್ಳೋಣ…

 • ನೀರು ನಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಿಸುತ್ತದೆ.
 • ನಮ್ಮ ಮೆದುಳು ಶೇಕಡ 75ರಷ್ಟು ನೀರಿನಿಂದ ಆಗಿದೆ.
 • ಆಹಾರವೂ ಶಕ್ತಿಯಾಗಿ ಬದಲಾಗಲು ನೆರವಾಗುತ್ತದೆ.
 • ವಿಷಭರಿತ ಮತ್ತು ಬೇಡವಾದ ವಸ್ತುಗಳನ್ನು ದೇಹದಿಂದ ಹೊರಹಾಕಲು ನೀರು ಸಹಾಯಕ.
 • ಅಗತ್ಯ ಪೋಷಕಾಂಶಗಳು ದೇಹದಲ್ಲಿ ಕರೆಗಲೂ ನೆರವಾಗುತ್ತದೆ
 • ಉಸಿರಾಟ ಕ್ರಿಯೆ ಉತ್ತಮವಾಗಿ ನಡೆಯಲು ನೀರು ಅತ್ಯಗತ್ಯ
 • ತಲೆ ನೋವಿಗೆ ಒಂದು ಅದ್ಭುತ ಪರಿಹಾರ
 • ವ್ಯಕ್ತಿಯು ಅತ್ಯಂತ ಚಟುವಟಿಕೆಯಿಂದಿರಲು ಸಾಕಾರ
 • ನೀರು ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ
 • ಹೆಚ್ಚು ನೀರು ಕುಡಿಯುವುದರಿಂದ ತರುಣ ರಾಗಿ ಮತ್ತು ಆರೋಗ್ಯವಾಗಿ ಕಾಣುತ್ತಾರೆ.
 • ಕಾನ್ಸರ್ ತಡೆಗಟ್ಟುತ್ತದೆ.
 • ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಹೀಗೆ ಹೆಚ್ಚು ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ಹೇಳುತ್ತಾ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಆದರೆ ನೀರನ್ನು ಹೇಗೆ ಕುಡಿಯಬೇಕು, ಎಷ್ಟು ಕುಡಿಯಬೇಕು, ಯಾವಾಗ ಕುಡಿಯಬೇಕು ಎಂಬುದು ತುಂಬಾ ಮುಖ್ಯವಾದದ್ದು ಇದನ್ನೇ ನಾವು ವಾಟರ್ ತೆರಪಿ ಅಥವಾ ನೀರಿನ ಚಿಕಿತ್ಸೆ ಎಂದು ಕರೆಯುತ್ತೇವೆ.

ಹಾಗಾದರೆ ಇದರ ಬಗ್ಗೆ ತಿಳಿಯೋಣ ಬನ್ನಿ…

ಬೆಳಗ್ಗೆ ಎದ್ದ ತಕ್ಷಣ ಒಂದು ಲೀಟರ್ ನೀರನ್ನು ಕುಡಿಯಬೇಕು…

ಬೆಳಗ್ಗೆ ಎದ್ದ ತಕ್ಷಣ ಸ್ವಲ್ಪ ಬಾಯನ್ನು ತೊಳೆದುಕೊಂಡು ಒಂದು ಲೀಟರ್ ನೀರನ್ನು ಕುಡಿಯಿರಿ. ಒಂದು ಲೀಟರ್ ನೀರನ್ನು ಕುಡಿಯಲು ಸಾಧ್ಯವಾಗದೇ ಹೋದರೆ ನಿಮಗೆ ಎಷ್ಟು ಆಗುತ್ತದೆಯೋ ಅಷ್ಟನ್ನಾದರೂ ಕುಡಿಯಿರಿ.
ಹೀಗೆ ಮಾಡುವುದರಿಂದ ಬಾಯಲ್ಲಿರುವ ಅಲ್ಕನಿಟಿ ದೂರವಾಗುತ್ತದೆ. ನಮ್ಮ ದೇಹದ ಒಳಗಡೆ ಇರುವ ಜೀರ್ಣಾಂಗ ವ್ಯವಸ್ಥೆಯ ಅಂಗಗಳು ಶುದ್ದಾಗೊಳ್ಳುತ್ತವೆ. ದೇಹದಲ್ಲಿ ಟಾಕ್ಸಿಕ್ ಪದಾರ್ಥಗಳು ಇದ್ದರೆ ಅವು ಸಹ ದೇಹದಿಂದ ಹೊರಗೆ ಬರುತ್ತವೆ.ಬಾಯಲ್ಲಿ ಇರುವ ರೋಗಾಣುಗುಳು ಮಾಯಾಮಾಯವಾಗುತ್ತವೆ. ನಮ್ಮ ಶರೀರದ ಎಲ್ಲಾ ಅಂಗಗಳೂ ಚೆನ್ನಾಗಿ ಕಾರ್ಯ ನಿರ್ವಹಿಸಲು ಉಪಯೋಗವಾಗುತ್ತದೆ.

ನಿಂತು ನೀರು ಕುಡಿಯಬೇಡಿ ಎಂದಿಗೂ ಸಹ ನಿಂತುಕೊಂಡು ನೀರನ್ನು ಕುಡಿಯಬೇಡಿ.

ನೀವು ಗಮನಿಸಿರಬಹುದು..ನಮ್ಮ ಹಿರಿಯರು ಹೇಳುತ್ತಾರೆ ಕುಳಿತು ನೀರು ಕುಡಿಯಿರಿ ಎಂದು. ಇದು ಸತ್ಯ ನಾವು ಯಾವಾಗಲೂ ಕುಳಿತುಕೊಂಡು ನೀರನ್ನು ಕುಡಿಯಬೇಕು. ನಿಂತುಕೊಂಡು ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೈ ಕಾಲು ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ ಜಾಸ್ತಿಯಾಗುತ್ತದೆ. ಅಲ್ಲದೆ ಇಂತಹ ಎಷ್ಟೋ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅದರಿಂದ ನಿಂತು ನೀರು ಕುಡಿಯದೇ ಕುಳಿತುಕೊಂಡೆ ಯಾವಾಗಲೂ ನೀರನ್ನು ಕುಡಿಯಿರಿ.

ಬಿಸಿನೀರು ಆಹಾರವನ್ನು ಸೇವಿಸಿದ 40 ನಿಮಿಷದ ಬಳಿಕ ಬಿಸಿ ನೀರು ಕುಡಿಯಿರಿ. ಹೀಗೆ ಮಾಡುವುದರಿಂದ ನಾವು ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಮತ್ತು ಜೀರ್ಣ ಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳು ಬರುವುದನ್ನು ತಡೆಯುತ್ತದೆ. ತಿಂಡಿ ತಿಂದ ನಂತರ, ಊಟ ಮಾಡಿದ ನಂತರ ಅಥವಾ ಯಾವಾಗಲೂ ನಾವು ಆಹಾರವನ್ನು ಸೇವಿಸಿದ 40 ನಿಮಿಷದ ಬಳಿಕ ಬಿಸಿ ನೀರನ್ನು ಕುಡಿಯುವುದು ತುಂಬಾ ಉತ್ತಮವಾದದ್ದು.

ಹೀಗೆ ವಾಟರ್ ತೆರೆಪೀ ಅಥವಾ ನೀರಿನ ಚಿಕಿತ್ಸೆಯನ್ನು ಮಾಡಿಕೊಳ್ಳುವುದರಿಂದ ನಮಗೆ ಬರಬಹುದಾದ ಶೇಕಡ 90ರಷ್ಟು ರೋಗಗಳು ದೂರವಾಗುತ್ತವೆ. ಯಾವುದೇ ಕಾಲದಲ್ಲೂ ನೀರನ್ನು ಹೀಗೆ ಕುಡಿಯಬೇಕು. ಆದರೆ ನೆನಪಿರಲಿ..ಒಂದೇ ಬಾರಿ ತುಂಬಾ ನೀರನ್ನು, ನಿಮಗೆ ಸಾಧ್ಯವಾಗದಷ್ಟು ನೀರನ್ನು ಕುಡಿಯಲು ಹೋಗಬೇಡಿ ಇದರಿಂದ ನಿಮ್ಮ ಲಿವರ್ ಬ್ಲಾಸ್ಟ್ ಆಗುವ ಸಾಧ್ಯತೆಗಳು ಹೆಚ್ಚು. ಒಬ್ಬ ಮನುಷ್ಯ ದಿನಕ್ಕೆ ಮೂರರಿಂದ ಐದು ಲೀಟರ್ ನೀರು ಕುಡಿಯುವುದು ಒಳಿತು. ಒಂದು ಬಾರಿ ನಿಮಗೆ ಎಷ್ಟು ನೀರನ್ನು ಕುಡಿಯಲು ಸಾಧ್ಯವಾ ಅಷ್ಟೇ ನೀರನ್ನು ಕುಡಿಯಿರಿ ನಿಮಗೆ ಸಾಧ್ಯವಾಗದಷ್ಟು ನೀರನ್ನು ಕುಡಿಯಲು ಹೋಗಬೇಡಿ.