ತಾನೇ ಹೆತ್ತ ಕಂದಮ್ಮನನ್ನು ಸಾಯಿಸಲು ಹೋದ ತಾಯಿ.!ಒಂದು ಕಾಲಿಲ್ಲದ ನಾಯಿ ಮಾಡಿದ್ದೇನು ಗೊತ್ತಾ.?

ಹೆತ್ತ ತಾಯಿ ತನ್ನ ಮಗುವನ್ನು ಮಣ್ಣಿನಲ್ಲಿ ಮುಚ್ಚಿ ಸಾಯಿಸಲು ಪ್ರಯತ್ನ ಪಟ್ಟಾಗ ನಾಯಿಯೊಂದು ಆ ಮಗುವನ್ನು ರಕ್ಷಿಸಿರುವ ಘಟನೆ ಉತ್ತರ ಥೈಲ್ಯಾಂಡ್ ನಲ್ಲಿ ನಡೆದಿದೆ.

ಹೌದು ತಾಯಿಯೊಬ್ಬರು ತಾನು ಹೆತ್ತ ಕಂದಮ್ಮನನ್ನು ಮಣ್ಣಿನಲ್ಲಿ ಹೂತಿಟ್ಟು ಹೋಗಿದ್ದರು. ಆದರೆ ಒಂದು ಕಾಲಿಲ್ಲದ ಅಂಗವಿಕಲ ನಾಯಿಯೊಂದು ಆ ಮಗುವನ್ನು ರಕ್ಷಿಸಿ ಹೀರೋ ಆಗಿರುವ ಘಟನೆ ಉತ್ತರ ಥೈಲ್ಯಾಂಡ್‍ನ
ನಾಖೋನ್ ರಾಟ್‍ಛಾಸಿಮಾ ಎಂಬ ಗ್ರಾಮದಲ್ಲಿ ನಡೆದಿದೆ.

15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ತಾಯಿಯಾಗಿದ್ದು ಅದನ್ನು ತನ್ನ ತಂದೆ ತಾಯಿಗಳಿಂದ ಮುಚ್ಚಿಡಲು ನವಜಾತ ಶಿಶುವನ್ನು ಮಣ್ಣಿನಲ್ಲಿ ಹೂತಿಟ್ಟು ಬಂದಿದ್ದಾಳೆ. ಆದರೆ ನಾಯಿ ಹೂತಿಟ್ಟಿದ್ದ ಮಗುವಿನ ವಾಸನೆ ಹಿಡಿದು ಮಣ್ಣನ್ನು ತೊಡುತ್ತಾ ಗುಂಡಿ ತೆಗೆಯಲು ಆರಂಭಿಸಿದೆ.

ಹೀಗೆ ವಿಚಿತ್ರವಾಗಿ ನಾಯಿ ಮಾಡುತ್ತಿರುವುದನ್ನು ಅದರ ಮಾಲೀಕ ಗಮನಿಸಿ, ಹತ್ತಿರ ಹೋಗಿ ನೋಡಿದಾಗ ಆತನಿಗೆ ಆ ಸ್ಥಳದಲ್ಲಿ ಮಗುವಿನ ಕಾಲು ಕಾಣಿಸಿಕೊಂಡಿದೆ. ತಕ್ಷಣವೇ ಸುತ್ತಮುತ್ತಲ ಹಳ್ಳಿಯ ಜನರನ್ನು ಕರೆದು ಆಗತಾನೆ ಹುಟ್ಟಿದ ಗಂಡು ಮಗುವನ್ನು ಮಣ್ಣಿನಿಂದ ಹೊರತೆಗೆದಿದ್ದಾರೆ.

ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದಾರೆ. ಆ ಮಗುವನ್ನು ಶುಚಿಗೊಳಿಸಿ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಮಗುವಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಮಗು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.

ಹೀಗೆ ಮಣ್ಣಿನಲ್ಲಿ ಹುಟ್ಟಿದ ಮಗುವನ್ನು ರಕ್ಷಿಸಿ ಹೀರೋ ಆಗಿರುವ ನಾಯಿಯ ಬಗ್ಗೆ ಮಾತನಾಡಿರುವಮಾಲೀಕ ಒಂದು ದಿನ ಪಿಂಗ್ ಪಾಂಗ್ ನಾಯಿಗೆ ಕಾರೊಂದು ಡಿಕ್ಕಿ ಹೊಡೆದು ತನ್ನ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದೆ. ಹುಟ್ಟಿದಾಗಿನಿಂದಲೂ ನಾನೇ ಸಾಕಿ ಬೆಳೆಸಿದ್ದೇನೆ.

ತುಂಬಾ ನಿಷ್ಠೆಯಿಂದ ಇರುವ ಈ ನಾಯಿ ಹಸುಗಳನ್ನು ಕರೆದುಕೊಂಡು ತೋಟದ ಕಡೆ ಹೋದಾಗ ಕೂಡ ನನಗೆ ಸಹಾಯ ಮಾಡುತ್ತದೆ. ಹಾಗಾಗಿ ನಾಯಿ ನನಗಷ್ಟೇ ಅಲ್ಲದೆ ಊರಿನ ಜನಾ ಕೂಡ ತುಂಬಾ ಇಷ್ಟಪಡುತ್ತಾರೆ ಎಂದು ಮಾಲೀಕ ಹೇಳಿದ್ದಾರೆ.

ಮಗುವನ್ನು ಹೂತಿಟ್ಟಿರುವ ಅವರ ಬಗ್ಗೆ ಮಾಹಿತಿ ತಿಳಿದುಕೊಂಡ ಪೊಲೀಸರು ಮಗುವಿನ ತಾಯಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಈ ಮಗು ನನ್ನದೇ ಎಂದು ಒಪ್ಪಿಕೊಂಡಿದ್ದಾಳೆ.ನಾನು ಮದುವೆ ಇಲ್ಲದೇ ಗರ್ಭಿಣಿ ಆಗಿರುವುದು ಮನೆಯಲ್ಲಿ ಗೊತ್ತಾದರೆ ನನಗೆ ಹೊಡೆಯುತ್ತಾರೆ ಎಂಬ ಭಯದಿಂದ ಈ ರೀತಿ ಮಣ್ಣಿನಲ್ಲಿ ಹೂತಿಟ್ಟಿರುವುದಾಗಿ ಅಪ್ರಾಪ್ತ ಹುಡುಗಿ ಪೊಲೀಸರಿಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಮನುಷ್ಯರಿಗೆ ಮನುಷ್ಯರೇ ಆಗದ ಇಂತಹ ಕಾಲದಲ್ಲಿ ನಾಯಿ ಮಣ್ಣಿನಲ್ಲಿ ಹೂತಿಟ್ಟ ಮಗುವಿನ ರಕ್ಷಣೆ ಮಾಡಿರುವುದು ಅಚ್ಚರಿಯಾಗಿದೆ. ಅದಕ್ಕೆ ಹೇಳುವುದು ನಾಯಿ ನಿಯತ್ತಿನ ಪ್ರಾಣಿ ಎಂದು