ವಯಸ್ಸು ಕೇವಲ 29 ವರ್ಷ ಓದಿದ್ದು PUC ಮಾತ್ರ.ಆದ್ರೆ ಮಾಡಿದ್ದು ಕೇವಲ ಒಂದೇ ವರ್ಷದಲ್ಲಿ 60 ಕೋಟಿ ವ್ಯವಹಾರ!ಇದೆಲ್ಲಾ ಆಗಿದ್ದು ಹೇಗೆ ಗೊತ್ತಾ?

ಗ್ವಾಲಿಯರ್ ನಲ್ಲಿ ಹುಟ್ಟಿದ ಈಕೆಯ ಹೆಸರು ದೀಪಾಲಿ. ಎಲ್ಲರ ತಂದೆಯಂತೆ ಇವರ ತಂದೆ ದೀಪಾಲಿಯನ್ನು ಮುದ್ದಾಗಿ ಸಾಕುವುದರ ಜೊತೆಗೆ ಚೆನ್ನಾಗಿ ಓದಿಸುತ್ತಿದ್ದರು. ಹಾಗಾಗಿ ತಾನು ಚೆನ್ನಾಗಿ ಓದಿ ಉನ್ನತ ಹುದ್ದೆಗೆ ಆಗಬೇಕು ಅಂದುಕೊಂಡಿದ್ದಳು ದೀಪಾಲಿ.

ಆದರೆ ಆಕೆ ಪಿಯುಸಿ ಓದುತ್ತಿದ್ದ ಸಮಯದಲ್ಲಿ ತಂದೆಯ ಬಿಸಿನೆಸ್ ನಷ್ಟಕ್ಕೆ ಸಿಲುಕಿತ್ತು. ತನ್ನನ್ನು ಓದಿಸುವುದಕ್ಕೆ ಆಗದ ಪರಿಸ್ಥಿತಿಯಲ್ಲಿ ಸಿಲುಕಿದ ತಂದೆಯನ್ನು ಕಂಡು, ದೀಪಾಲಿ ಓದುವುದನ್ನು ನಿಲ್ಲಿಸಿ ಟಿಫನ್ ತಯಾರಿ ಮಾಡಿ ಮಾರುವುದು, ಹಾಸ್ಟೆಲಿಗೆ ಅಡುಗೆ ಮಾಡಿಕೊಡುವಂತಹ ಕೆಲಸ ಮಾಡಿ ಬಂದ ದುಡ್ಡಿನಲ್ಲಿ ಮನೆಯ ನಿರ್ವಹಣೆ ಕೂಡ ಮಾಡುತ್ತಿದ್ದಳು.

ಈ ಎಲ್ಲ ಕೆಲಸಗಳನ್ನು ಮಾಡಿದರೂ ಕೂಡ ಕೈಯಲ್ಲಿ ಒಂದು ರೂಪಾಯಿ ಕೂಡ ನಿಲ್ಲುತ್ತಿರಲಿಲ್ಲ. ಆಗ ದೀಪಾಲಿ ಕೆಲಸ ಹುಡುಕಿಕೊಂಡು ಇಂದೋರ್ ಗೆ ಹೋಗುತ್ತಾಳೆ.ಅಲ್ಲಿ ಒಂದು ದಾಸ್ತಾನು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಅಲ್ಲೇ ಕೆಲಸ ಮಾಡುತ್ತಿರುವ ಸಮಯದಲ್ಲಿ, ಆಕೆಗೆ ಒಂದು ಪ್ಲಾನ್ ಹೊಳೆಯುತ್ತದೆ.

ಪ್ರತೀದಿನ ಮಾರುಕಟ್ಟೆಯ ವ್ಯವಹಾರಗಳನ್ನು ನೋಡುತ್ತಿದ್ದ ದೀಪಾಲಿಗೆ ನಾನ್ಯಾಕೆ ಮಧ್ಯವರ್ತಿ ಕೆಲಸ ಮಾಡಿ ವ್ಯಾಪಾರ ಮಾಡಬಾರದು ಅನ್ನಿಸುತ್ತದೆ. ಅದರಂತೆ ಕಮೋಡಿಟಿ ಮತ್ತು ಗೋಧಿ ವ್ಯಾಪಾರದಲ್ಲಿ ಬ್ರೋಕರ್ ಕೆಲಸ ಶುರು ಹಚ್ಚಿಕೊಳ್ಳುತ್ತಾಳೆ.

ಬರೀ ಗಂಡಸರೇ ಮಾಡುತ್ತಿದ್ದ ಈ ಟ್ರೇಡಿಂಗ್ ಕೆಲಸವನ್ನು ದೀಪಾಲಿ ಶುರು ಮಾಡಿದಾಗ ಎಲ್ಲರೂ ಗೇಲಿ ಮಾಡಲು ಪ್ರಾರಂಭಿಸುತಾಎ. ಆದರೆ ಇದ್ಯಾವುದನ್ನು ಮನಸ್ಸಿಗೆ ಹಾಕಿಕೊಳ್ಳದೆ, ಪಟ್ಟು ಬಿಡದ ಆಕೆ ದಿನೇ ದಿನೇ ತಾನು ಅಂದುಕೊಂಡಿದ್ದನ್ನು ಸಾಧಿಸುತ್ತ ಬಂದಳು.

ನಂತರ ತನ್ನದೇ ಆದ ಟ್ರೇಡಿಂಗ್ ಫಾರ್ಮ್ ಪ್ರಾರಂಭಿಸಿದಳು. ಬರೀ ಒಂದೇ ವರ್ಷದಲ್ಲಿ ೩೦ ವರ್ಷದ ದೀಪಾಲಿ ಬರೋಬರಿ 60ಕೋಟಿ ವ್ಯಾಪಾರವನ್ನು ಮಾಡಿ ಎಲ್ಲರೂ ಬೆರಗಾಗುವಂತೆ ಮಾಡುತ್ತಾರೆ. ಹಾಗೆ ಫುಲ್ ಟೈಮ್ ಟ್ರೇಡಿಂಗ್ ಮಾಡುತ್ತಿರುವ ಮೊದಲ ಭಾರತೀಯ ಮಹಿಳೆ ಎನಿಸಿಕೊಳ್ಳುತ್ತಾಳೆ. ಕೇವಲ ಪಿಯುಸಿ ಓದಿದ್ದರೂ, ಛಲ ಬಿಡದೇ ಮುನ್ನುಗ್ಗಿದ ದೀಪಾಲಿ ಈಗ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾಳೆ.