ಇದ್ದಕಿದ್ದಂತೆ ಮಧ್ಯರಾತ್ರಿ ಹಿರಿಯ ನಟ ದೇವರಾಜ್ ಮನೆಗೆ ಭೇಟಿ ಕೊಟ್ಟ ನಟ ದರ್ಶನ್!ಕಾರಣ ಏನು ಗೊತ್ತಾ?

ನಟ ದರ್ಶನ್ ಅವರು ಗುರುವಾರ ಮಧ್ಯರಾತ್ರಿ ನಟ ದೇವರಾಜ್ ಅವರ ಮನೆಗೆ ಇದ್ದಕ್ಕಿದ್ದಂತೆ ಸರ್ಪ್ರೈಸ್ ಭೇಟಿ ಕೊಟ್ಟಿದ್ದಾರೆ.

ಆದರೆ ದರ್ಶನ್ ಅವರುತಮ್ಮ ಮನೆಗೆ ಬರುವ ಹಿರಿಯ ನಟ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರಿಗೂ ಸಹ ಗೊತ್ತಿರಲಿಲ್ಲ ಎಂದು ಹೇಳಲಾಗಿದೆ. ಸರ್ಪ್ರೈಸ್ ಭೇಟಿಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಿ ಪ್ರಜ್ವಲ್ ದೇವರಾಜ್ ಕುಟುಂಬ ಅಚ್ಚರಿಗೊಂಡಿದೆ.

ಹೀಗೆ ಇದ್ದಕಿದ್ದಂತೆ ನಟ ದರ್ಶನ್ ರವರು ಮಧ್ಯರಾತ್ರಿ ಪ್ರಜ್ವಲ್ ದೇವರಾಜ್ ಅವರ ಮನೆಗೆ ಭೇಟಿ ಕೊಡಲು ಮುಖ್ಯವಾದ ಕಾರಣವೊಂದಿದೆ. ಗುರುವಾರವಷ್ಟೇ ಹಿರಿಯ ನಟ ದೇವರಾಜ್ ಅವರ ಮಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹಾಗಾಗಿ ಶುಭಾಶಯ ಹೇಳುವ ಸಲುವಾಗಿ ದರ್ಶನ್ ರವರು ಸಪ್ರೈಸ್ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ.

ನಟ ದರ್ಶನ್ ರವರು ಹಿರಿಯ ನಟ ದೇವರಾಜ್ ಅವರ ಕುಟುಂಬದ ಜೊತೆಗೆ ತುಂಬಾ ಆತ್ಮೀಯತೆ ಹೊಂದಿದ್ದಾರೆ. ನಟ ದರ್ಶನ್ ಅವರು ಹಿರಿಯ ನಟ ದೇವರಾಜ್ ಅವರ ಜೊತೆಯೂ ಕೂಡ ತಾರಕ್, ಯಜಮಾನ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಟ ಪ್ರಜ್ವಲ್ ದೇವರಾಜ್ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದರು. ಇದಕ್ಕೆ ಖುಷಿ ವ್ಯಕ್ತಪಡಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿಟ್ವೀಟ್ ಸಹ ಮಾಡಿದ್ದರು