ರಾಮನಗರದಲ್ಲಿ ದರ್ಶನ್ ಹಾಡು ಬ್ಯಾನ್ ಮಾಡಿದಕ್ಕೆ, ಮೊದಲ ಬಾರಿಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದು ಏನ್ ಗೊತ್ತಾ.?

ಇತ್ತೀಚೆಗಷ್ಟೇ ಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ರಾಮನಗರದಲ್ಲಿ ನಡೆದಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ರವರ ಹಾಡುಗಳನ್ನು ಆಡಿಲ್ಲ ಎಂಬುದು ದೊಡ್ಡ ಸುದ್ದಿಯಾಗಿದ್ದು, ಇದರ ಬಗ್ಗೆ ದರ್ಶನ್ ಹಾಗೂ ಯಶ್ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

ಆದರೆ ಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ನಡೆದ ಈ ಸಂಗೀತ ಕಾರ್ಯಕ್ರಮದಲ್ಲಿ, ಈ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಜೆಡಿಎಸ್ ಕಾರ್ಯಕರ್ತರು. ಆ ಕಾರಣದಿಂದಲೇ ಯಶ್ ದರ್ಶನ್ ರವರ ಆಡುಗಳನ್ನು ಆಡದಂತೆ ವಿಜಯ ಪ್ರಕಾಶ್ ಅವರಿಗೆ ತಾಕೀತು ಮಾಡಿದ್ದರು ಎನ್ನಲಾಗಿದೆ.

ರಾಮನಗರವು ಕುಮಾರಸ್ವಾಮಿಯವರ ಸ್ವಕ್ಷೇತ್ರ ಆಗಿರುವ ಕಾರಣ, ದರ್ಶನ್ ಮತ್ತು ಯಶ್ ಅವರ ಹಾಡುಗಳನ್ನು ಹಾಡದಂತೆ ಬ್ಯಾನ್ ಮಾಡಲಾಗಿದೆ ಎಂಬುದು ಚರ್ಚೆಗೆ ಕಾರಣವಾಗಿತ್ತು. ಇದೇ ಸಮಯದಲ್ಲಿ ಮಂಡ್ಯ ಲೋಕಸಭಾ ಚುನಾವಣೆಯ ಸೇಡಿನಿಂದಲೇ ಹೀಗೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ಇದರ ಬಗ್ಗೆ ದರ್ಶನ್ ಆಗಲಿ ಅಥವಾ ನಟ ನಿಖಿಲ್ ಕುಮಾರಸ್ವಾಮಿ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ನಿಖಿಲ್ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟಿದ್ದು, ನಮ್ಮ ತಂದೆಯವರು ಕೂಡ ಸಿನಿಮಾದಿಂದ ಬಂದವರೇ. ಅವರು ರಾಜಕೀಯಕ್ಕೆ ಬರುವ ಮುನ್ನ ಸಿನಿಮಾರಂಗದಲ್ಲಿ ಹಂಚಿಕೆದಾರರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಹೀಗಾಗಿ ಅವರ ಹಾಡನ್ನು ಆಡಬೇಡಿ, ಇವರ ಹಾಡನ್ನು ಹಾಡಬೇಡಿ ಎಂಬ ಸಣ್ಣತನವನ್ನು ನಾವು ಮಾಡಿಲ್ಲ. ಅಂತಹ ಗುಣ ನಮ್ಮದಲ್ಲ. ಅವರ ಹಾಡನ್ನು ಆಡಬೇಡಿ ಎಂದು ನಾವು ಹೇಳಿದ್ದೇವೆ ಎಂಬ ಸುದ್ದಿ ಹೇಗಾಯಿತು ಎಂಬುದು ನನಗೆ ತಿಳಿದಿಲ್ಲ. ಈ ರೀತಿ ಯಾರಿಗೂ ಆಗಲೇಬಾರದು. ಏಕೆಂದರೆ ಈ ರೀತಿಯ ಸುದ್ದಿಗಳಿಂದ ಕನ್ನಡ ಚಿತ್ರರಂಗ ಕೂಡ ಬೆಳೆಯುವುದಿಲ್ಲ ಎಂದು ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.