ಗೌತಮ ಬುದ್ಧನ ಕಾಲದ ಈ ಮಹಾನ್ ತತ್ವ ಜ್ಞಾನಿ ಹೇಳಿರೋ ಈ 10 ಮಾತುಗಳು ನಿಮ್ಮ ಜೀವನದ ದಿಕ್ಕನೇ ಬದಲಾಯಿಸುತ್ತವೆ…

ಕನ್ಫ್ಯೂಷಿಯಸ್ ಗೌತಮ ಬುದ್ಧನ ಕಾಲದಲ್ಲೆ ಮಹಾನ್ ಜ್ಞಾನಿಯೂ, ಚಿಂತಕರು ಆಗಿದ್ದರು. ಈ ಮಹಾನ್ ಚಿಂತಕ ಹೇಳಿರುವ ಹತ್ತು ಮಾತುಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಮಹಾನ್ ಜ್ಞಾನಿಯಾಗಿದ್ದ ಕನ್ಫ್ಯೂಷಿಯಸ್ ಸಮಾಜದಲ್ಲಿ ಜನರ ಸಂಬಂಧ ಹೇಗಿರಬೇಕು.ಅವರ ನೀತಿಗಳು ಹೇಗಿರಬೇಕು ಅನ್ನೋ ಹಲವಾರು ವಿಷಯಗಳ ಬಗ್ಗೆ ತುಂಬಾ ಸರಳವಾಗಿ ನಮಗೆಲ್ಲ ತಿಳಿಸಿ ಹೋಗಿದ್ದಾರೆ.

ಹಾಗಾದ್ರೆ ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುವ ಮಹಾನ್ ಚಿಂತಕ ಕನ್ಫ್ಯೂಷಿಯಸ್ ಅವರ ಆ ಹತ್ತು ನುಡಿಮುತ್ತುಗಳು ಏನೆಂದು ನೋಡೋಣ ಬನ್ನಿ…

*ಯಾರನ್ನಾದರೂ ಸರಿ ದ್ವೇಷಿಸಲು ಹೋಗಬೇಡಿ. ನೀವು ಬೇರೆಯವರನ್ನು ದ್ವೇಷಿಸಲು ಶುರುಮಾಡಿದಾಗ ಅವರು ನಿಮ್ಮನ್ನು ಸೋಲಿಸಿದಂತೆ ಅಂತ ಅಂದುಕೊಳ್ಳಿ.

*ತಮ್ಮ ಅಜ್ಞಾನವೇನೆಂದು ತಿಳಿದು ಜ್ಞಾನಕ್ಕಾಗಿ ಯಾರು ಹುಡುಕುತ್ತಿರುವವರೋ ಅಂತಹವರಿಗೆ ಮಾತ್ರ ನಿಮ್ಮಲ್ಲಿರುವ ಜ್ಞಾನವನ್ನು ಕೊಡಿ. ನಾನು ಜ್ಞಾನಿ ಎಂದು ಹೇಳಿಕೊಳ್ಳುವವರಿಗೆ ಅದನ್ನು ಕೊಡಲು ಹೋಗಬೇಡಿ.

*ನೀವು ಅಂದುಕೊಂಡ ಗುರಿಯನ್ನು ನೀವು ಮುಟ್ಟುವುದಕ್ಕೆ ಆಗದಿದ್ದಾಗ, ಗುರಿಯನ್ನು ಮಾತ್ರ ಬದಲಾಯಿಸಬೇಡಿ. ಆದರೆ ಗುರಿಗಾಗಿ ನೀವು ಇಡುವ ಹೆಜ್ಜೆಯನ್ನು ಮಾತ್ರ ಬದಲಾಯಿಸಿ.

*ನಮ್ಮ ಕೋಪ ನಮ್ಮನ್ನೇ ಸುಡುತ್ತದೆ ಎಂಬ ಗಾದೆ ಮಾತಿನಂತೆ, ಯಾರೇ ಮೇಲಾಗಲಿ ತುಂಬಾ ಕೋಪ ಮಾಡಿಕೊಳ್ಳುವುದಕ್ಕೆ ಮುಂಚೆ ಆ ಕೋಪದಿಂದ ಮುಂದೆ ಆಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯದೆ ಯೋಚನೆ ಮಾಡಿ.

*ಅಧಮನಾದವನು ಸದಾ ಬೇರೆಯವರಲ್ಲಿ ಏನನ್ನಾದರೂ ಹುಡುಕುತ್ತಾ ಇರುತ್ತಾನೆ. ಆದರೆ ಉತ್ತಮ ನಾದವನು ತನ್ನಲ್ಲಿ ಹುಡುಕುತ್ತಾನೆ

*ನೀವು ಯಾವಾಗಲೂ ಚಿಕ್ಕ ಲಾಭಗಳ ಬಗ್ಗೆ ಯೋಚನೆ ಮಾಡುತ್ತಿದ್ದರೆ ದೊಡ್ಡ ಕೆಲಸಗಳು ಎಂದಿಗೂ ಆಗೋದಿಲ್ಲ ಎಂಬುದನ್ನು ಮರೆಯಬೇಡಿ.

*ನಿಮಗೆ ನಿಲ್ಲುವ ಯೋಚನೆ ಇಲ್ಲದೆ ಹೋದರೆ ನೀವು ಎಷ್ಟು ನಿಧಾನವಾಗಿ ನಡೆದರೂ ಪರವಾಗಿಲ್ಲ. ಆದರೆ ನಿಲ್ಲುವ ಮನಸ್ಸನ್ನು ಮಾತ್ರ ಮಾಡಬೇಡಿ.

*ಯಾವತ್ತೂ ನಿಮ್ಮನ್ನು ನಿಮ್ಮ ಯಾವುದೇ ಕೆಲಸದಲ್ಲಿ ಮೀರಿಸಲಾರದವರು ಇದ್ದರೆ, ಅಂತಹವರ ಜೊತೆ ಸ್ನೇಹ ಮಾಡಿಕೊಳ್ಳಬೇಡಿ. ಬದಲಾಗಿ ನಿಮ್ಮನ್ನು ಯಾವುದೇ ಕ್ಷೇತ್ರದಲ್ಲಿ ಮೀರಿಸುವವರು ಇದ್ದರೆ, ಅಂತಹವರ ಜೊತೆ ಸ್ನೇಹ ಸಂಪಾದನೆ ಮಾಡಿ. ಇದರಿಂದ ನೀವು ಬೇಗ ಮುಂದೆ ಬರುತ್ತೀರಾ.

*ನಮ್ಮ ಬೆನ್ನ ಹಿಂದೆ ಮಾತನಾಡಿಕೊಳ್ಳುವ ಎಷ್ಟೋ ಮಂದಿ ಇರುತ್ತಾರೆ. ಇದರ ಅರ್ಥ ನೀವು ಅವರಿಗಿಂತ ಮುಂದೆ ಇದ್ದೀರಿ ಎಂದು ಯೋಚಿಸಿ.

*ನೀವು ಎಲ್ಲಿಗಾದರೂ ಹೋಗಿ, ಆದರೆ ಸಂಪೂರ್ಣ ಮನಸ್ಸಿನಿಂದ ಹೋಗಿ. ನಿಮ್ಮಲ್ಲಿ ಯಾವುದೇ ಅನುಮಾನವಿದ್ದರೂ ಆ ಸ್ಥಳಕ್ಕೆ ಹೋಗಬೇಡಿ.