ಚಿಕ್ಕಣ್ಣ ನನ್ನ ಗಂಡನಾಗಿದ್ರೆ ತುಂಬಾ ಖಷಿಯಾಗಿರುತಿದ್ದೆ ಎಂದ ಫೇಮಸ್ ನಟಿ!ಇಂಡಿಯನ್ ಆರ್ಮಿ ಕೂಡ ಹೈಜಾಕ್ ಮಾಡಿದ್ದರಂತೆ ಚಿಕ್ಕಣ್ಣನನ್ನ.!?

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮ, ನಟ ರಮೇಶ್ ಅರವಿಂದ್ ರವರ ನೇತೃತ್ವದಲ್ಲಿ ಮೂಡಿಬರುತ್ತಿರುವ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಸಾಧಕರ ಸೀಟ್ ನಲ್ಲಿ ಕುಳಿತು ತಮ್ಮ ಜೀವನಾದ ಸಿಹಿ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ.

ಇಂದು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿಯಾಗಿರುವ ಹಾಸ್ಯ ನಟ ಚಿಕ್ಕಣ್ಣ, ಮೊದ್ಲು ಮಾಡುತ್ತಿದ್ದದ್ದು ಗಾರೆ ಕೆಲಸ ಎಂದರೆ ನೀವು ನಂಬಲೇಬೇಕು. ಗಾರೆ ಕೆಲಸ ಮಾಡಿಕೊಂಡಿದ್ದ ಚಿಕ್ಕಣ್ಣ ಇಂದು ಕನ್ನಡ ಚಿತ್ರರಂಗದಲ್ಲಿ ಬೆಳೆದು ನಿಂತಿರುವುದು ದೊಡ್ಡ ಸಾಧನೆಯೇ ಸರಿ.

ಇದೇ ಕಾರ್ಯಕ್ರಮದಲ್ಲಿ ನಟ ಚಿಕ್ಕಣ್ಣನವರಿಗೆ ಸರ್ಪ್ರೈಸ್ ಸಿಕ್ಕಿದ್ದು, ಹಾಸ್ಯ ನಟ ಚಿಕ್ಕಣ್ಣ ಈಗ ಪೂರ್ಣ ಪ್ರಮಾಣದ ನಾಯಕರಾಗಿ ನಟಿಸಲಿರುವ ಚಿತ್ರವನ್ನು ಮಂಜು ಮಾಂಡವ್ಯ ನಿರ್ದೇಶನ ಮಾಡಲಿದ್ದು,ಉಮಾಪತಿ ಎನ್ನುವವರು ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ನಟ ಚಿಕ್ಕಣ್ಣನವರ ಜೊತೆ ಹೆಚ್ಚಾಗಿ ಒಡನಾಟ ಹೊಂದಿರುವ ಪ್ರೊಡ್ಯೂಸರ್ ಉಮಾಪತಿಯವರು ಹೆಬ್ಬುಲಿ ಚಿತ್ರೀಕರಣದ ಸಮಯದಲ್ಲಿ ನಡೆದ ಕೆಲವು ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಹೆಬ್ಬುಲಿ ಚಿತ್ರದ ಶೂಟಿಂಗ್ ನಡೆಯುತ್ತಿರಬೇಕಾದ್ರೆ ಭಾರತೀಯ ಸೇನೆಯವರು ಎಂಟರ್ಟೈನ್ಮೆಂಟ್ ಗಾಗಿ ಚಿಕ್ಕಣ್ಣನವರನ್ನು ಹೈಜಾಕ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಜೊತೆಗೆ ಚಿತ್ರತಂಡದೊಂದಿಗೆ ಮಾಡುತ್ತಿದ್ದ ಹಾಸ್ಯ ಪ್ರಸಂಗಗಳು ನಟಿ ಅಮಲಾ ಪೌಲ್ ಗೂ ಇಷ್ಟವಾಗಿತ್ತು. ಅವರಿಗೆ ಕನ್ನಡ ಬರಲ್ಲ, ಚಿಕ್ಕಣ್ಣನಿಗೆ ಇಂಗ್ಲಿಷ್ ಬರೋದಿಲ್ಲ. ಆದರೂ ಅವರ ಕಾಮಿಡಿಯನ್ನು ಅಮಲಾ ಪೌಲ್ ತುಂಬಾ ಇಷ್ಟ ಪಡುತ್ತಿದ್ದರು ಎಂದು ಹೇಳಿದ್ದಾರೆ.

ಚಿಕ್ಕಣ್ಣ ನನ್ನ ಗಂಡ ಆದ್ರೆ ತುಂಬಾ ಖುಷಿಯಾಗಿರುತ್ತಿದ್ದೆ ಎಂದು ತಮಾಷೆಯಾಗಿ ಹೇಳುತ್ತಿದ್ದ ನಟಿ, ಚಿಕ್ಕಣ್ಣನವರನ್ನು ಕಿಡ್ನಾಪ್ ಮಾಡುವ ಅವಕಾಶ ಸಿಕ್ಕರೆ ಕಿಡ್ನಾಪ್ ಮಾಡುತ್ತಿದ್ದೆ ಎಂದು ಅಮಲಾ ಪೌಲ್ ಹೇಳುತ್ತಿದ್ದರು ಎಂದು ನಿರ್ಮಾಪಕ ಉಮಾಪತಿಯವರು ಹೇಳಿದ್ದಾರೆ.