ತಮ್ಮ ಸಾವಿನ ಸಮೀಪಕ್ಕೆ ಹೋಗಿ ಬಂದಿದ್ದ ಬುಲೆಟ್ ಪ್ರಕಾಶ್ ರವರು!ಅವರೇ ಹೇಳಿದ್ದ ಕಣ್ಣೀರಿನ ಮನಕಲುಕುವ ಕತೆ…

ಕನ್ನಡ ಚಿತ್ರರಂಗದ ಅದ್ಭುತ ಕಾಮಿಡಿ ಮಾಡುವ ನಟರ ಸಾಲಿನಲ್ಲಿ ಬುಲೆಟ್ ಪ್ರಕಾಶ್ ಅವರು ಕೂಡ ಬರುತ್ತಾರೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಸೇರಿದಂತೆ, ದರ್ಶನ್, ಸುದೀಪ್, ಪುನೀತ್ ರಾಜಕುಮಾರ್ ಹಾಗೂ ಇನ್ನೂ ಹಲವು ಕನ್ನಡದ ಟಾಪ್ ಹೀರೋಗಳ ಜೊತೆ ಬುಲೆಟ್ ಪ್ರಕಾಶ್ ಅವರು ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಬುಲೆಟ್ ಪ್ರಕಾಶ್ ಅವರು ಸಿನಿಮಾಗಳಲ್ಲಿ ತುಂಬಾ ಬ್ಯುಸಿ ಇದ್ದ ಕಾರಣ ತಮ್ಮ ಆರೋಗ್ಯದ ಕಡೆ ಗಮನ ಕೊಡದೆ, ಸುಮಾರು 150 ಕೆಜಿ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಹೀಗೆ ತೂಕ ಜಾಸ್ತಿ ಆಗಿದ್ದ ಕಾರಣ ನೀವು ಸಣ್ಣ ಆಗಿ ಎಂದು ಡಾಕ್ಟರ್ ಸಲಹೆ ನೀಡಿದ್ದರು. ವೈದ್ಯರ ಸಲಹೆ ಮೇರೆಗೆ ಬುಲೆಟ್ ಪ್ರಕಾಶ್ ರವರು ಸಣ್ಣ ಆಗಲು, ತಾವು ಇಷ್ಟಪಟ್ಟು ಸೇವಿಸುತ್ತಿದ್ದ ಮಾಂಸಾಹಾರ ಬಿಟ್ಟು ವಾಕಿಂಗ್ ಮಾಡಲು ಶುರು ಮಾಡಿದರು.

ಹೀಗೆ ಬುಲೆಟ್ ಪ್ರಕಾಶ್ ಅವರು ಸಣ್ಣ ಆಗಲು, ವಿವಿಧ ರೀತಿಯ ವರ್ಕೌಟ್ ಮಾಡುತ್ತಿರುವ ಸಮಯದಲ್ಲಿ ಇವರಿಗೆ ಇನ್ಫೆಕ್ಷನ್ ಕಾರಣದಿಂದ ಜಾಂಡಿಸ್ ಕಾಯಿಲೆ ಬಂತು. ಸಾಮಾನ್ಯವಾಗಿ ಮನುಷ್ಯನಿಗೆ ಜಾಂಡಿಸ್ ಕಾಯಿಲೆಯ ಲೆವೆಲ್ ಮೂರರಿಂದ ನಾಲ್ಕು ಪಾಯಿಂಟ್ ಅಷ್ಟು ಇದ್ದರೇನೇ ಮನುಷ್ಯ ಬದುಕಬಲ್ಲ. ಆದರೆ ಬುಲೆಟ್ ಪ್ರಕಾಶ್ ರನ್ನು ಟೆಸ್ಟ್ ಮಾಡಿದ ವೈದ್ಯರು ನೋಡಿದಾಗ ಸುಮಾರು 5 ರಿಂದ 7 ಪಾಯಿಂಟ್ ರಷ್ಟು ಜಾಂಡೀಸ್ ಬಂದಿತ್ತು.

ಇದನ್ನು ನೋಡಿದ ವೈದ್ಯರುಗಳಿಗೆ ಶಾಕ್ ಆಗಿದ್ದು, ನಿಮ್ಮ  ಜಾಂಡೀಸ್ ಲೆವೆಲ್ ಹೆಚ್ಚಾಗಿದ್ದು, ನಿಮಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ, ನೀವು ಮನೆಗೆ ಹೋಗಿ ಎಂದು ಹೇಳಿಬಿಟ್ಟಿದ್ದರು. ಇದರಿಂದ ದುಡ್ಡು ದಿಗ್ಭ್ರಾಂತರಾದ ಬುಲೆಟ್ ಪ್ರಕಾಶ್ ಅವರು ಇನ್ನೇನು ಬಿಲ್ ಕಟ್ಟಿ ಡಿಚಾರ್ಜ್ ಆಗಬೇಕು ಅನ್ನೋ ಸಮಯದಲ್ಲಿ ಅವರಿಗೆ ಯಾವುದೋ ಅಗೋಚರ ಶಕ್ತಿ ತಡೆದಿದೆ.

ನಂತರ ಗಟ್ಟಿ ತೀರ್ಮಾನ ಮಾಡಿದ ಬುಲೆಟ್ ಪ್ರಕಾಶ್ ವೈದ್ಯರುಗಳ ಜೊತೆ ಮಾತನಾಡಿ ನಾನು ಮನೆಗೆ ಹೋಗುವುದಿಲ್ಲ! ನನಗೆ ಚಿಕಿತ್ಸೆ ನೀಡಿ ಏನಾದರೂ ಆಗಲಿ ಎಂದು ಹಟ ಹಿಡಿದರು. ಇದಕ್ಕೆ ಒಪ್ಪಿದ ವೈದ್ಯರು ಮತ್ತೆ ಟ್ರೀಟ್ಮೆಂಟ್ ಶುರು ಮಾಡಿದ್ರು. ವೈದ್ಯರು ಬುಲೆಟ್ ಪ್ರಕಾಶ್ ಅವರಿಗೆ ಚಿಕಿತ್ಸೆ ಶುರುಮಾಡಿದ ಸಮಯದಲ್ಲಿ ಜಾಂಡೀಸ್ ಲೆವೆಲ್ ಸುಮಾರು ಐದು ಪಾಯಿಂಟು ರಷ್ಟಿತ್ತು. ನಂತರ ಅದು 20 ರ ಲೆವೆಲ್ಲಿಗೆ ಹೋಗಿಬಿಟ್ಟಿತ್ತು.

ಇನ್ನೇನು ಬುಲೆಟ್ ಪ್ರಕಾಶ್ ರವರು ಬದುಕುತ್ತಾರೋ ಇಲ್ಲವೋ ಎಂಬ ಅನುಮಾನ ಕಾಡುತ್ತಿತ್ತು. ಅದೃಷ್ಟವಶಾತ್ ಇದು ದೇವರ ಅನುಗ್ರಹವೋ ಏನೋ ಬುಲೆಟ್ ಪ್ರಕಾಶ್ ರವರ ಜಾಂಡೀಸ್ ಲೆವೆಲ್, ದಿನೇ ದಿನೇ ಕಡಿಮೆಯಾಗಿ ಅವರು ಆರೋಗ್ಯದಲ್ಲಿ ಚೇತರಿಸಿಕೊಂಡರು. ಇದೀಗ ಬುಲೆಟ್ ಪ್ರಕಾಶ್ ಅವರ ಜಾಂಡೀಸ್ ಸಂಪೂರ್ಣವಾಗಿ ಗುಣವಾಗಿದ್ದು, ಹೀಗೆ ತಾವು ಸಾವಿನ ಸಮೀಪಕ್ಕೆ ಹೋಗಿ ಬಂದ ಕಥೆಯನ್ನು ಹಾಸ್ಯ ನಟ ಬುಲೆಟ್ ಪ್ರಕಾಶ್ ರವರು ಕಣ್ಣೀರು ಹಾಕುತ್ತ ಹೇಳಿದ್ದಾರೆ.