ಈ ಮಹಾತಾಯಿಗೆ ತಾನು ಹೆತ್ತ ಮಗುವನ್ನು ಸ್ಪರ್ಶ ಮಾಡಲು ಬರೋಬ್ಬರಿ 12ವರ್ಷ ಬೇಕಾಯಿತು!ಈ ಕರುಣಾಜನಕ ಕತೆಯನೊಮ್ಮೆ ಓದಿ…

ತನ್ನ ಮಕ್ಕಳೆಂದರೆ ಹಡೆದ ತಾಯಿಗೆ ಎಲ್ಲಿಲ್ಲದ ಪ್ರೀತಿ. ತನ್ನ ಮಕ್ಕಳ ಪ್ರೀತಿಯಲ್ಲಿ ಇಡೀ ಜಗತ್ತನ್ನೇ ಮರೆಯುತ್ತಾಳೆ ತಾಯಿ. ತನ್ನ ಮಕ್ಕಳನ್ನು ಅಪ್ಪಿ ಮುತ್ತಿಟ್ಟಾಗ ಆ ತಾಯಿಗೆ ಸಿಗುವ ಸಂತೋಷ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ತಾಯಿಗೆ ಮಕ್ಕಳೇ ಸರ್ವಸ್ವ. ಉಳಿದೆಲ್ಲವೂ ಶೂನ್ಯ.

ತನ್ನ ಮಕ್ಕಳ ಆಟ, ಓಟ, ತುಂಟಾಟದ ಜೊತೆ ಸಮಯ ಕಲೆಯಿರುವ ತಾಯಿಗೆ ಜಗತ್ತಿನ ಪರಿವೆ ಇರುವುದಿಲ್ಲ. ಅಷ್ಟೊಂದು ಪ್ರೀತಿ. ಆದರೆ ಇಲ್ಲೊಬ್ಬ ತಾಯಿ ತಾನು ಹೆತ್ತ ಮಗುವನ್ನು ಸ್ಪರ್ಶ ಮಾಡಲು ಬರೋಬ್ಬರಿ 12 ವರ್ಷವೇ ಬೇಕಾಯಿತು.

ಹೌದು, ತಾನು ಹೆತ್ತ ಮಗು ಜೀವಂತವಾಗಿ ನೋಡಲು ಬಯಸಿದ್ದ ತಾಯಿ ೧೨ ವರ್ಷಗಳ ಕಾಲ ಮಗುವನ್ನು ಮುಟ್ಟಲೇ ಇಲ್ಲ. ಆ ತಾಯಿಯ ಮಗುವಿನ ಹೆಸರು ಡೇವಿಡ್ ಎಂದು. ಅಮೆರಿಕಾದ ಟೆಕ್ಸಾಸ್ ನಲ್ಲಿ ವಾಸವಾಗಿದ್ದ ಈ ಡೇವಿಡ್ ಒಂದು ಭಯಾನಕ ಕಾಯಿಲೆಗೆ ತುತ್ತಾಗಿದ್ದ. ಆತನನ್ನು ಯಾರಾದ್ರು ಮುಟ್ಟಿದ್ರೆ, ಸ್ಪರ್ಶ ಮಾಡಿದವರು ಸಾಯುವ ಸಾಧ್ಯತೆಗಳಿದ್ದವು. ಹಾಗಾಗಿ ತಾಯಿ ಕೂಡ ತನ್ನ ಮಗನನ್ನು ಸ್ಪರ್ಶ ಮಾಡಲಿಲ್ಲ.

ಆ ಮಗುವಿಗಿದ್ದ ಭಯಾನಕ ಕಾಯಿಲೆ ಕಾರಣ ಆ ಮಗುವನ್ನು ಮುಟ್ಟಿದರೆ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡಿ, ಅವರೂ ಸಾಯುವ ಸಾಧ್ಯತೆ ಇದೆ ಎಂದು ಡಾಕ್ಟರ್ ಹೇಳಿದ್ದರು. ಡೇವಿಡ್ ಅಣ್ಣನಿಗೂ ಕೂಡ ಇದೇ ರೀತಿಯ ಕಾಯಿಲೆಯಿದ್ದು ಅವನು ಕೇವಲ ೮ ತಿಂಗಳು ಮಾತ್ರ ಬದುಕಿದ್ದ. ಆದ್ದರಿಂದ ನಾಸಾ ವಿಜ್ಞಾನಿಗಳು ಡೇವಿಡ್ ಗಾಗಿ ಡಾಕ್ಟರ್ ಬಬಲ್ ಎಂದು ಕರೆಯುವ ಕವಚವನ್ನು ಸಿದ್ದಪಡಿಸಿದ್ದರು.ಬರೋಬ್ಬರಿ ೧೨ ವರ್ಷ ಇದರ ಒಳಗಡೆ ಡೇವಿಡ್ ಜೀವನ ನಡೆಸುತಿದ್ದ.

ಡೇವಿಡ್ ಗಿರುವ ಈ ಕಾಯಿಲೆಯನ್ನು ಗುಣಪಡಿಸುವ ಸಲುವಾಗಿ ಬೋನ್ ಮ್ಯಾರೋ ಕಸಿ ಮಾಡುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದರಂತೆ.1971ರಲ್ಲಿ ಜನಿಸಿದ್ದ ಡೇವಿಡ್ ಗೆ 1984 ರಲ್ಲಿ ಬೋನ್ ಮ್ಯಾರೋ ಕಸಿ ಮಾಡಲಾಗಿತ್ತು. ಆದರೆ ಇದೇ ಸಮಯದಲ್ಲಿ ರಕ್ತವಾಂತಿಯಾಗಿ ಡೇವಿಡ್ ಸಾವನಪ್ಪಿದ್ದ. ಅಲ್ಲಿಯವರೆಗೂ ಮಗನನ್ನು ಬಬಲ್ ಒಳಗಡೆ ಇಟ್ಟು ರಕ್ಷಣೆ ಮಾಡಿದ್ದ ಆ ಮಹಾತಾಯಿ ಸತ್ತ ನಂತರವೇ ತನ್ನ ಮಗನನ್ನು ಸ್ಪರ್ಶ ಮಾಡಿದ್ದಳು.