ತಾಳಿ ಕಟ್ಟಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಪರೀಕ್ಷೆ ಬರೆದ ನವ ವಧು!ಇದಕ್ಕಾಗಿ ನವ ವರ ಮಾಡಿದ್ದೇನು ಗೊತ್ತಾ?

ನಮ್ಮಲ್ಲಿ ಮದುವೆ ಅಂದ್ರೆ ಆ ಸಂಭ್ರಮವೇ ಬೇರೆ. ಅದರಲ್ಲೂ ಹೆಣ್ಣುಮಕ್ಕಳ ತಮ್ಮ ಮದುವೆ ದಿನ ಅವರ ಆನಂದಕ್ಕೆ ಮಿತಿಯೇ ಇರುವುದಿಲ್ಲ. ಇಂತಹ ತನ್ನ ಜೀವನದ ವಿಶೇಷ ಸಂಧರ್ಭದಲ್ಲಿ ಯಾವ ಹೆಣ್ಣು ಮಕ್ಕಳು ನಾನು ಪರೀಕ್ಷೆ ಬರೆಯಬೇಕು, ಮತ್ತೆ ಇನ್ನೇನೋ ಮಾಡಬೇಕು ಎಂಬ ರಿಸ್ಕ್ ತೆಗೆದುಕೊಳ್ಳಲು ಹೋಗುವುದಿಲ್ಲ.

ಆದರೆ ಕೆಲವೇ ಕೆಲವು ಹೆಣ್ಣುಮಕ್ಕಳು ಮಾತ್ರ ಈತರದ ನಿರ್ಧಾರ ಮಾಡುತ್ತಾರೆ. ಹೌದು, ತನ್ನ ಮದುವೆಯ ಸಂಭ್ರಮದಲ್ಲಿದ ನವ ವಧು ವರ್ಷ ಪೂರ್ತಿ ಓದಿದ್ದು ವೇಸ್ಟ್ ಆಗಬಾರದೆಂಬ ಕಾರಣಕ್ಕೆ, ಗಟ್ಟಿ ನಿರ್ಧಾರ ಮಾಡಿ ತಾನು ಮದುವೆಯ ಹಸೆ ಮನೆ ಏರಿದ ಕೇವಲ ಕೆಲವೇ ಸಮಯದಲ್ಲಿ ತಾನು ಓದುತ್ತಿದ್ದ ಬಿಕಾಂ ಪದವಿಯ ಪರೀಕ್ಷೆ ಬರೆದು ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ.

ನವ ವಧು ವರರಾದ ಹಾಸನದ ಗಂಡಸಿ ನಿವಾಸಿಯಾದ ವರ ನವೀನ್ ಮತ್ತು ಅದೇ ಹಾಸನದ ಜಯನಗರದಲ್ಲಿ ವಾಸ ಮಾಡುತ್ತಿದ್ದ ವಧು ಶ್ವೇತಾ ಮಾಡುವೆ ೧೮ನೇ ತಾರೀಖು ಭಾನುವಾರದಂದು ಹಾಸನದಲ್ಲಿ ನೆರವೇರಿತ್ತು.ಮಹೂರ್ತ ಕಾರ್ಯ ಬೆಳಿಗ್ಗೆ 7.45ರಿಂದ 8.45 ಗಂಟೆಗೆ ಆಯ್ತು. ತಾಳಿ ಕಟ್ಟಿದ ಕಾರ್ಯ ಮುಗಿದಿದ್ದೇ ತಡ ನವ ವಧು ಶ್ವೇತಾ ಎಲ್ಲರೂ ಮೆಚ್ಚುವಂತಹ ಕೆಲಸವೊಂದನ್ನು ಮಾಡಿದ್ರು.

ಬಿಕಾಂ ಪದವಿಯ ಅಂತಿಮ ವರ್ಷ ಓದುತ್ತಿದ್ದ ಶ್ವೇತಾ, ಮದುವೆಯ ದಿನವೇ ಪರೀಕ್ಷೆ ಬಿದ್ದಿದರಿಂದ, ತನ್ನ ಮದುವೆಯ ಜೊತೆಗೆ ಪರೀಕ್ಷೆ ಕೂಡ ಬರೆದು ಎಲ್ಲರಿಗೂ ಸ್ಪುರ್ತಿಯಾಗಿದ್ದಾಳೆ.ಇದಕ್ಕೆ ಮದುವೆಯಾದ ಗಂಡ ಕೂಡ ಸಪೋರ್ಟ್ ಕೊಟ್ಟಿದ್ದಾನೆ.

ಕಳೆದ ಮೇ ತಿಂಗಳಿನಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದ ನವೀನ್ ಹಾಗೂ ಶ್ವೇತಾ ನವೆಂಬರ್ 18ಕ್ಕೆ ತಮ್ಮ ಮದುವೆಯ ದಿನಾಂಕ ಫಿಕ್ಸ್ ಮಾಡಿಕೊಂಡಿದ್ದರು.ಶ್ವೇತಾರವರ ಪರೀಕ್ಷೆ ಕೂಡ ನವೆಂಬರ್ 3ಕ್ಕೆ ನಡೆಯಬೇಕಿತ್ತು. ಆದರೆ ಉಪಚುನಾವಣೆ ಹಿನ್ನಲೆಯಲ್ಲಿ ಪರೀಕ್ಷಾ ದಿನಾಂಕವನ್ನ ನವೆಂಬರ್ 18ಕ್ಕೆ ಮುಂದೂಡಲಾಗಿತ್ತು.ಹೀಗಾಗಿ ಎರಡೂ ಕುಟುಂಬದವರು ಮದುವೆಯ ಶಾಸ್ತ್ರಗಳನ್ನು ಬೇಗ ಮುಗಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದರು.

ತಾನು ಪರೀಕ್ಷೆ ಬರೆಯಲು ಸಪೋರ್ಟ್ ಆಗಿ ನಿಂತ ತನ್ನ ಗಂಡ ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸಿರುವ ಶ್ವೇತಾ ನಿದ್ದೆಗೆಟ್ಟು ಓದಿದ್ದು ಪರೀಕ್ಷೆ ಚೆನ್ನಾಗಿ ಬರೆದಿದ್ದೇನೆ.ಡಿಸ್ಟಿಂಕ್ಷನ್ ಬರುವ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.ತನ್ನ ಜೀವನದ ವಿಶೇಷ ಗಳಿಗೆಯಾದ ಮದುವೆ ಸಂದರ್ಭದಲ್ಲೂ ಚೆನ್ನಾಗಿ ಓದಿ ಪರೀಕ್ಷೆ ಬರೆದಿರುವ ಈಕೆಯ ದಿಟ್ಟತನ ಎಲ್ಲರಿಗೂ ಸ್ಪೂರ್ತಿ…