ಮಾಲೀಕ ಸತ್ತು 4 ತಿಂಗಳಾದ್ರೂ, ಒಂದು ತುತ್ತು ಅನ್ನ ಹಾಕಿದ್ದ ನಿಯತ್ತಿಗೆ ಈ ನಾಯಿ ಏನ್ ಮಾಡಿದೆ ಗೊತ್ತಾ.!

ಮಾಲೀಕ ಸತ್ತು ನಾಲ್ಕು ತಿಂಗಳಾದ್ರೂ ಆಸ್ಪತ್ರೆಯನ್ನು ಬಿಟ್ಟು ಹೋಗುತ್ತಿಲ್ಲ ಈ ನಾಯಿ. ಕಾರಣ ತಿಳಿದರೆ ನಿಮಗೆ ಅಚ್ಚರಿ ಆಗದೆ ಇರೋದಿಲ್ಲ.ನಾಯಿ ನಿಯತ್ತಿನ ಪ್ರಾಣಿ ಎಂದು ಹೇಳಲಾಗುತ್ತದೆ ಇದಕ್ಕೆ ನಿದರ್ಶನವೆಂಬಂತೆ ಅನೇಕ ನಾಯಿಯ ನಿಯತ್ತಿನ ಬಗ್ಗೆ ಅನೇಕ ಉದಾಹರಣೆಗಳನ್ನು ಕೇಳಿದ್ದೇವೆ.ಹಾಗೆಯೇ ಈ ಒಂದು ಘಟನೆ ಕೂಡ ನಾಯಿಯ ನೆತ್ತಿಗೆ ಒಂದು ನಿದರ್ಶನವಾಗಿದೆ

ನಾಲ್ಕು ತಿಂಗಳ ಹಿಂದೆ ತನ್ನ ಮಾಲೀಕ ಸಾವನ್ನಪ್ಪಿದ್ದರೂ, ಆಸ್ಪತ್ರೆಯಿಂದ ವಾಪಸ್ ಹೋಗದೆ ನಾಯಿ ಅಲ್ಲೇ ಕಾಲ ಕಳೆಯುತ್ತಿರುವ ಘಟನೆ ಬ್ರೆಜಿಲ್ ದೇಶದಲ್ಲಿ ನಡೆದಿದೆ. ಬ್ರೆಜಿಲ್ ನ ಬೀದಿಯಲ್ಲಿ ನಾಯಿಯ ಮಾಲೀಕರಾದ ನಿರಾಶ್ರಿತ ವ್ಯಕ್ತಿಯೊಬ್ಬನ ಮೇಲೆ ಕೊಲೆಯ ಪ್ರಯತ್ನ ನಡೆದಿತ್ತು. ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ನಾಯಿಯೂ ಕೂಡ ಆಸ್ಪತ್ರೆಯ ಆಂಬುಲೆನ್ಸ್ ಹಿಂದೆ ಓಡಿ ಬಂದಿದೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಸಾವನ್ನಪ್ಪಿದ್ದರೂ ಕೂಡ ನಾಯಿ ಮಾತ್ರ ಆಸ್ಪತ್ರೆಯಿಂದ ಕದಲುತ್ತಿಲ್ಲ. ಸೇವಾ ಸಂಸ್ಥೆಯೊಂದು ಆ ನಾಯಿಗೆ ಆಶ್ರಯ ಕಲ್ಪಿಸಲು ಸಾಕಷ್ಟು ಬಾರಿ ಪ್ರಯತ್ನ ಮಾಡಿ ವಿಫಲವಾಗಿದೆ. ಹೊಸ ಮಾಲೀಕನ ಮನೆಯಿಂದ ಕೂಡ ತಪ್ಪಿಸಿಕೊಂಡು ಬಂದ ನಾಯಿ ಅದೇ ಆಸ್ಪತ್ರೆ ಮುಂದೆ ತನ್ನ ಮೊದಲಿನ ಮಾಲಿಕನಿಗೋಸ್ಕರ ಆಸ್ಪತ್ರೆಯ ಮುಂಬಾಗ ಕಾಯುತ್ತಲೇ ಇದೆ.

ಆಸ್ಪತ್ರೆಯ ಹಣಕಾಸು ನಿರ್ದೇಶಕರ ಪ್ರಕಾರ ಆ ನಾಯಿಯ ಮಾಲೀಕರಾದ ವ್ಯಕ್ತಿಗೆ 59 ವರ್ಷವಾಗಿದ್ದು, ಅವರಿಗೆ ಚಾಕುವಿನಿಂದ ಇರಿಯಲಾಗಿತ್ತು.ಈ ಕೊಲೆ ಪ್ರಯತ್ನ ನಡೆದಾಗಿನಿಂದ ಆ ನಾಯಿ ಮಾಲೀಕನ ಜೊತೆಯಲ್ಲೇ ಆಸ್ಪತ್ರೆಗೆ ಬಂದಿದೆ. ಮಾಲೀಕ ಸತ್ತಿದ್ದರೂ ಆ ನಾಯಿ ಎಲ್ಲೂ ಹೋಗದೆ ಪ್ರತೀದಿನ ಆಸ್ಪತ್ರೆ ಹೊರಗಡೆ ಕುಳಿತು ಕೊಳ್ಳುತ್ತದೆ. ಆಗಾಗ ಊಟ ಮತ್ತು ನೀರಿಗಾಗಿ ಮಾತ್ರ ಅತ್ತ ಇತ್ತ ಓಡಾಡುತ್ತದೆ.

ಆ ನಾಯಿ ಯಾವಾಗಲೂ ಆಸ್ಪತ್ರೆ ಮುಂದೆ ಹಾಕಲಾಗಿರುವ ಹೊದಿಕೆಯ ಮೇಲೆ ಬಂದು ಕುಳಿತುಕೊಳ್ಳುತ್ತದೆ ಎಂದು ಆಸ್ಪತ್ರೆಯವರು ಹೇಳುತ್ತಾರೆ. ನಾಯಿಯ ನಿಯತ್ತು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಕೂಡ ಮಾನವೀಯತೆಯಿಂದ ಆ ನಾಯಿಗೆ ಊಟ ತಿಂಡಿ ಕೂಡ ಕೊಟ್ಟಿದ್ದಾರೆ. ಶಾಂತ ಸ್ವಭಾವ ಹೊಂದಿರುವ ಈ ನಾಯಿ ಪದೇ ಪದೇ ಆಸ್ಪತ್ರೆಯ ಒಳಗಡೆ ಇಣುಕಿ ನೋಡುವುದನ್ನು ಕಂಡರೆ ಮಾಲೀಕ ಅದಕ್ಕಾಗಿ ಕಾಯುತ್ತಿದ್ದಾನೆ ಎಂಬಂತೆ ಅನಿಸುತ್ತದೆ ಎಂದು ಆಸ್ಪತ್ರೆಯವರು ಹೇಳಿಕೊಂಡಿದ್ದಾರೆ