BPL ಕಾರ್ಡ್ ಇದ್ದವರಿಗೆ ಜೂನ್ 1ರಿಂದ ಹೊಸ ನಿಯಮ?ಖಡ್ಡಾಯವಾಗಿ ಈ ಕೆಲಸ ಮಾಡದಿದ್ದರೆ ರೇಷನ್ ಸಿಗೋದಿಲ್ಲ..?

ಪಡಿತರ ಸೋರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ತಡೆಯಲು ಆಹಾರ ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದ್ದು ನೈಜ ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಿಸಲು ಮುಂದಾಗಿದೆ.

ಹೀಗಾಗಿ ಜೂನ್ 1 ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ನ್ಯಾಯಬೆಲೆ (ರೇಷನ್) ಅಂಗಡಿಗೆ ಹೋಗಿ ಹೆಬ್ಬೆಟ್ಟಿನ ಗುರುತು ನೀಡಬೇಕಿದೆ. ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಸದಸ್ಯರ ಸಂಖ್ಯೆ ನವೀಕರಣಗೊಳ್ಳದ ಹಿನ್ನೆಲೆಯಲ್ಲಿ ಹೆಚ್ಚಿನ ಆಹಾರ ಧಾನ್ಯ ಪೂರೈಕೆಯಾಗುತ್ತಿದ್ದು, ಈ ಸೋರಿಕೆಯನ್ನು ತಡೆಯುವ ಸಲುವಾಗಿ ಹೊಸ ಯೋಜನೆ ಜಾರಿಗೆ ಮಾಡಲಾಗುತ್ತಿದೆ ಎಂದು ಆಹಾರ ಸರಬರಾಜು ಇಲಾಖೆ ಹೇಳಿದೆ.

ಜೂನ್ ಒಂದರಿಂದ ರೇಷನ್ ಕಾರ್ಡ್ ನಲ್ಲಿ ನೊಂದಾಯಿಸಲ್ಪಟ್ಟಿರುವ ಸದಸ್ಯರೆಲ್ಲರೂ ರೇಷನ್ ಅಂಗಡಿಗೆ ಹೋಗಿ ತಮ್ಮ ಹೆಬ್ಬೆಟ್ಟಿನ ಗುರುತು ನೀಡಿ ರೇಷನ್ ಪಡೆಯಬೇಕಾಗಿದ್ದು, ಇದರಿಂದ ನೈಜ ಫಲಾನುಭವಿಗಳನ್ನು ಪತ್ತೆ ಹಚ್ಚಬಹುದು ಎಂದು, ಈ ನೂತನ ವ್ಯವಸ್ಥೆಯನ್ನು ಆಹಾರ ಸರಬರಾಜು ಇಲಾಖೆ ಜಾರಿ ಮಾಡುತ್ತಿದೆ.

ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡಲಾಗಿದ್ದು, ಇದರ ಆಧಾರದ ಮೇಲೆಯೇ ಆಹಾರ ನೀಡಲಾಗುತ್ತಿದೆ. ಆದರೆ ಬದುಕಿಲ್ಲದವರು, ಮದುವೆಯಾಗಿ ಗಂಡನ ಮನೆಗೆ ಹೋದವರು, ಬೇರೆ ಊರಿನಲ್ಲಿ ಹೋಗಿ ವಾಸಿಸುತ್ತಿರುವವರು.. ಹೀಗೆ ನಾನಾ ಕಾರಣಗಳಿಂದ ರೇಷನ್ ಕಾರ್ಡ್ ನಲ್ಲಿ ಊರಿನಲ್ಲಿ ಇಲ್ಲದ ಹೆಸರುಗಳನ್ನು ತೆಗೆದಿಲ್ಲ. ಅಂದರೆ ಊರಿನಲ್ಲಿ ಇಲ್ಲದವರ ಹೆಸರಿನಲ್ಲಿಯೂ ಸಹ ಆಹಾರ ಧಾನ್ಯವನ್ನು ಪಡೆಯುತ್ತಿದ್ದು ಇದರಿಂದ ಸರ್ಕಾರಕ್ಕೆ ದೊಡ್ಡ ಹೊರೆಯಾಗಿ ಏರಪಟ್ಟಿದೆ.

ಈ ಸೋರಿಕೆಯನ್ನು ತಡೆಯಲು ನಾಗರಿಕ ಆಹಾರ ಸರಬರಾಜು ಇಲಾಖೆ ನೂತನ ವ್ಯವಸ್ಥೆಯನ್ನು ಜಾರಿಗೆ ಮಾಡುತ್ತಿದ್ದು, ಅನಿವಾರ್ಯವಾಗಿ ಪಡಿತರ ಚೀಟಿಯಲ್ಲಿರುವ ಎಲ್ಲಾ ಸಾದಸ್ಯರು ನ್ಯಾಯ ಬೆಲೆ ಅಂಗಡಿಗೆ ಬಂದು ತಮ್ಮ ಹೆಬ್ಬೆಟ್ಟಿನ ಗುರುತು ನೀಡಿದರಷ್ಟೇ ಮಾತ್ರ ಆಹಾರ ಧಾನ್ಯ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಹೀಗಾಗಿ ಹೆಬ್ಬೆಟ್ಟಿನ ಗುರುತು ನೀಡಿದವರಿಗೆ ಮಾತ್ರ ಪಡಿತರ ವಿತರಿಸಲು ಆಹಾರ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಜೂನ್ 1ರಿಂದ ಈ ನೂತನ ವ್ಯವಸ್ಥೆ ಜಾರಿಗೆ ಬರಲಿದ್ದು, ಪಡಿತರ ಚೀಟಿಯಲ್ಲಿ ಇರುವ ಎಲ್ಲಾ ಸದಸ್ಯರು ಹೆಬ್ಬೆಟ್ಟಿನ ಗುರುತು ನೀಡಿದ ನಂತರವೇ, ಎಂದಿನಂತೆ ನಿಮಗೆ ರೇಷನ್ ದೊರೆಯಲಿದೆ.ನಂತರ ಮೊದಲಿನಂತೆ ಪ್ರತಿ ತಿಂಗಳು ಒಬ್ಬ ಸದಸ್ಯರು ಬಂದು ಪಡಿತರ ತೆಗೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.