ಬಿಪಿಎಲ್ ಕಾರ್ಡ್ ಇದ್ದವರಿಗೆ ಹಣ ಕೊಡಲು ಮುಂದಾದ ಸರ್ಕಾರ.!ನಿಮ್ಮಲ್ಲಿ BPL ಕಾರ್ಡ್ ಇದ್ದರೆ ಈ ಮಾಹಿತಿ ನೋಡಿ

ಸರ್ಕಾರಗಳು ನ್ಯಾಯಬೆಲೆ ಅಂಗಡಿ ಮೂಲಕ ಅತೀ ಕಡಿಮೆ ದರದಲ್ಲಿ ಅಕ್ಕಿ ಸಕ್ಕರೆ ಸೇರಿದಂತೆ ಇನ್ನಿತರ ದಿನ ನಿತ್ಯದ ವಸ್ತುಗಳನ್ನು ಬಡವರಿಗೆ ನೀಡುತ್ತಾ ಬಂದಿದೆ. ಆದರೆ ಈಗ ಕೊಡುತ್ತಿರುವ ಅಕ್ಕಿಯ ಬದಲು ಹಣವನ್ನು ಅವರ ಖಾತೆಗೆ ಜಮೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಹೌದು, ಇದುವರೆಗೂ ಕರ್ನಾಟಕದಲ್ಲಿ ಬಿಪಿಎಲ್ ಚೀಟಿದಾರರು ಅಕ್ಕಿಯನ್ನು ಪಡೆಯುತಿದ್ದು ಅದರ ಬದಲು ಹಣವನ್ನೇ ನೇರವಾಗಿ ಫಲಾನುಭವಿಯ ಖಾತೆಗೆ ಜಮೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಛತ್ತೀಸ್ ಗಡ ಸೇರಿದಂತೆ ದಾದರ್ ಮತ್ತು ಪುದುಚೇರಿಯಲ್ಲಿ ಫಲಾನುಭವಿ ಬಿಪಿಎಲ್ ಪಡಿತ ಚೀಟಿದಾರರಿಗೆ ಅಕ್ಕಿಯ ಬದಲು ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದು ಕೇಂದ್ರ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದು, ಇದನ್ನು ಭಾರತದ ಎಲ್ಲಾ ರಾಜ್ಯಗಳಲ್ಲೂ ವಿಸ್ತರಿಸುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಕೊಟ್ಟಿರುವ ಮಾಹಿತಿ ಪ್ರಕಾರ 6.11 ಕೋಟಿ ಜನಸಂಖ್ಯೆಯಿರುವ ಕರ್ನಾಟಕದಲ್ಲಿ 4.43 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯಕ್ಕಾಗಿ ಕೇಂದ್ರ ಸರ್ಕಾರದಿಂದ 26 ಲಕ್ಷ ಎಂಎಂಟಿ ಆಹಾರಧಾನ್ಯವನ್ನು ಕೊದಲಾಗುತ್ತಿದೇ. ಇದರ ಜೊತೆಗೆ ಈಗಾಗಲೇ ಮುನ್ನೂರು ಕೋಟಿ ಸಬ್ಸಿಡಿ ಹಣವನ್ನು ಕರ್ನಾಟಕ ಸರ್ಕಾರಕ್ಕೆ ಪಾವತಿಸಲಾಗಿದ್ದು ಉಳಿದ ಸಬ್ಸಿಡಿ ಹಣವನ್ನು ಸಹ ಪಾವತಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಕೇಂದ್ರ ಸರ್ಕಾರದ ಈ ಯೋಚನೆ ಕಾರ್ಯಗತವಾದಲ್ಲಿ ರೇಶನ್ ಬದಲು ಬಿಪಿಎಲ್ ಕಾರ್ಡ್ ಹೊಂದಿರುವ ಪಡಿತ ಚೀಟಿ ದಾರರಿಗೆ ನೇರವಾಗಿ ಅವರ ಖಾತೆಗೆ ಹಣ ಜೆಮೆ ಆಗಲಿದೆ. ಇದರಿಂದ ನ್ಯಾಯಬೆಲೆ ಅಂಗಡಿಗೆ ಹೋದಾಗ ಅಲ್ಲಿ ಅನುಭವಿಸುವ ಸಮಸ್ಯಗಳು ಸೇರಿದಂತೆ ಎಲ್ಲಾ ರೀತಿಯ ಸಮಸ್ಯಗಳಿಗೆ ಮುಕ್ತಿಯೆಂತೂ ದೊರೆಯಲಿದೆ.

ಆದರೆ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿರುವ ಪುದುಚೇರಿಯಲ್ಲಿ ಬಿಪಿಎಲ್ ಪಡಿತ ಚೀಟಿದಾರರು ಹಣವನ್ನು ಬೇಡ ಎನ್ನುತಿದ್ದು ಮೊದಲು ಕೊಡುತ್ತಿರುವಂತೆ ರೇಶನ್ ಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.