ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಸೋನು ಪಾಟೀಲ್ ಗೆ ಗಾಯಕ ನವೀನ್ ಕೊಟ್ಟ ಮರೆಯಲಾರದ ಗಿಪ್ಟ್ ಏನ್ ಗೊತ್ತಾ?

ಕನ್ನಡದ ಖಾಸಗಿ ವಾಹಿನಿಯಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಸಂಚಿಕೆ ಆರರಲ್ಲಿ ಕಳೆದ ಶನಿವಾರ ನಡೆದ ವಾರದ ಕತೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಎಂದಿನಂತೆ ಬಿಗ್ ಮನೆಯ ಸ್ಪರ್ಧಿಯಾಗಿದ್ದ ಸೋನು ಪಾಟೀಲ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ಮಾಮೂಲಿಯಂತೆ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದ ಕೊನೆಯಲ್ಲಿ ಕಿಚ್ಚ ಸುದೀಪ್ ರವರು ಸೋನು ಪಾಟೀಲ್ ಎಲಿಮಿನೇಟ್ ಆಗಿದ್ದಾರೆ ಎಂದು ಘೋಷಣೆ ಮಾಡುತ್ತಲೇ ಬಿಗ್ ಮನೆಯ ಎಲ್ಲಾ ಸಹ ಸ್ಪರ್ಧಿಗಳು ಸೋನು ಪಾಟಿಲ್ ರವರನ್ನು ಬಿಗ್ ಬಾಸ್ ಮನೆಯ ಮುಖ್ಯ ದ್ವಾರದ ಮೂಲಕ ಬೀಳ್ಕೊಟ್ಟಿದ್ದಾರೆ.

ಇದೇ ವೇಳೆ ಗಾಯಕ ಮತ್ತು ಸಹ ಸ್ಪರ್ಧಿಯಾಗಿರುವ ನವೀನ್ ಸಜ್ಜುರವರಿಗೆ ಸೋನು ಗಿಪ್ಟ್ ಒಂದನ್ನು ಕೊಟ್ಟಿದ್ದಾರೆ.ನಿಮಗೆಲ್ಲಾ ಗೊತ್ತಿರುವಂತೆ ಈ ಹಿಂದೆ ನಡೆದ ಕೆಲವೊಂದು ಟಾಸ್ಕ್ ಗಳಲ್ಲಿ ಸೋನು ಮನೆಯ ಎಲ್ಲರ ಮುಂದೆಯೇ ಐ ಲವ್ ಯು’ ಅಂತ ಹೇಳುವುದರ ಮುಖಾಂತರ ಮನೆಯವರೆಲ್ಲಾ ಇವರ ಬಗ್ಗೆ ಗುಸು ಗುಸು ಅಂತ ಮಾತನಾಡುವ ಹಾಗೆ ಮಾಡಿದ್ದರು.

ಮನೆಯವರ ಇವೆಲ್ಲಾ ಮಾತುಗಳಿಂದ ಬೇಸತ್ತಿದ್ದ ಸೋನು ಪಾಟೀಲ್ ನೀನು ನನಗೆ ಸ್ನೇಹಿತನಾಗಿ ಮಾತ್ರ ಇಷ್ಟ ಅಷ್ಟೇ. ಲವ್ ಮಾಡಿದ್ರೆ ನಾನು ನಿನ್ನನ್ನೇ ಲವ್ ಮಾಡುತ್ತೇನೆ ಎಂದು ಹೇಳಿ ಏನ್ ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದು ಸವಾಲು ಸಹ ನವೀನ್ ಗೆ ಹಾಕಿದ್ದರು.

ಈಗ ಬಿಗ್ ಮನೆ ಬಿಟ್ಟು ಹೋಗುವ ಸಮಯದಲ್ಲಿ ಸೋನು ಪಾಟಿಲ್ ನವೀನ್ ಸಜ್ಜುರವರಿಗೆ ಉಡುಗೊರೆಯೊಂದನ್ನು ಕೊಟ್ಟರು.ಇದೇ ವೇಳೆ ನವೀನ್ ತನ್ನ ರೂಮಿಗೆ ಹೋಗಿ ತನ್ನ ಬ್ಯಾಗ್ ನಲ್ಲಿದ್ದ ಜರ್ಕಿನ್ ನನ್ನು ತಂದು ಸೋನುರವರಿಗೆ ಗಿಪ್ಟ್ ಆಗಿ ಕೊಟ್ಟರು.ಸಂತೋಷದಿಂದ ನವೀನ್ ಕೊಟ್ಟ ಉಡುಗೊರೆಯನ್ನು ತೆಗೆದುಕೊಂಡ ಸೋನು ನಾನು ನಿನ್ನನ್ನು ತಬ್ಬಿಕೊಳ್ಳಬೇಕು ಎಂದಾಗ ನವೀನ್ ಸಂತೋಷದಿಂದ ನಗು ಮೊಗದೊಂದಿಗೆ ತಬ್ಬಿಕೊಂಡರು.