ನೀರಿಗೆ ಇವುಗಳನ್ನು ಹಾಕಿ ಸ್ನಾನ ಮಾಡುವುದರಿಂದ ಅದೃಷ್ಟವೋ ಅದೃಷ್ಟ…ವೈಜ್ಞಾನಿಕವಾಗಿಯೂ ಇದು ಅತ್ಯುತ್ತಮ..

ಸಾಮಾನ್ಯವಾಗಿ ನಮ್ಮ ಆಚರಣೆ ಪದ್ಧತಿಯ ಹಿಂದೆ ಒಂದಿಲ್ಲೊಂದು ವ್ಯೈಜ್ಞಾನಿಕ ಕಾರಣಗಳು ಅಡಗಿರುತ್ತವೆ. ಅಂತೆಯೇ ನಾವು ಸ್ನಾನ ಮಾಡುವ ನೀರಿಗೆ ಕೆಲವೊಂದು ವಸ್ತುಗಳನ್ನು ಹಾಕಿ ಸ್ನಾನ ಮಾಡಿದರೆ ಶುಭ ವಾಗುತ್ತದೆ. ಇದು ಕೇವಲ ನಂಬಿಕೆಯಲ್ಲ ಸತ್ಯ ಕೂಡ. ಇದರ ಹಿಂದೆ ವೈಜ್ಞಾನಿಕ ಉಪಯೋಗಗಳು ಸಹ ಅಡಗಿವೆ.

ಹಾಲು ಸ್ನಾನದ ನೀರಿಗೆ ಸ್ವಲ್ಪ ಹಾಲು ಬೆರಸಿ ಸ್ನಾನ ಮಾಡುವುದರಿಂದ ಶುಭವಾಗುತ್ತದೆ. ದೇಹದ ಚರ್ಮ ಚೇತನ ಗೊಳ್ಳುತ್ತದೆ. ಇದರಿಂದ ಧನಾಗಮನವೂ ಆಗುತ್ತದೆ. ಮತ್ತು ಮೈ ಮನಸಿಗೆ ಹಗುರತೆಯ ಅನುಭವ ಉಂಟಾಗಿ ದಿನವೆಲ್ಲಾ ಚೆನ್ನಾಗಿರುತ್ತದೆ.ದೇಹಕ್ಕೆ ಇದು ಪುಷ್ಟಿ ನೀಡುತ್ತದೆ.

ಏಲಕ್ಕಿ ಸ್ನಾನದ ನೀರಿಗೆ ಏಲಕ್ಕಿಯನ್ನು ಹಾಕಿ ಸ್ನಾನ ಮಾಡುವುದರಿಂದಲೂ ಇಂತಹದೇ ಉಪಯೋಗಗಳಿವೆ. ಏಲಕ್ಕಿ ಪರಿಮಳ ಬೀರುತ್ತದೆ. ಈ ಪರಿಮಳದಿಂದ ತ್ವಚೆ ಆರೋಗ್ಯವಾಗುತ್ತದೆ.

ಎಳ್ಳು ನೀರಿಗೆ ಎಳ್ಳನ್ನು ಬೆರಸಿ ಸ್ನಾನ ಮಾಡುವುದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತಾರೆ ಎಂದು ಹೇಳಲಾಗಿದೆ. ಹೀಗೆ ಮಾಡುವುದರಿಂದ ದೇಹದ ಆರೋಗ್ಯ ವೃದ್ದಿಯಾಗುವುದಲ್ಲದೆ ಶುಭ ಫಲಗಳು ದೊರಕುತ್ತವೆ. ಮತ್ತು ಅಂದು ಕೊಂಡ ಕಾರ್ಯ ನೆರವೇರಿ ದಾರಿದ್ರ್ಯ ನಾಶವಾಗುತ್ತದೆ.

ತುಪ್ಪ, ಎಳನೀರು ನೀರಿಗೆ ತುಪ್ಪ ಇಲ್ಲವೇ ಎಳನೀರು ಬೆರಸಿ ಸ್ನಾನ ಮಾಡುವುದು ತುಂಬಾ ಶ್ರೇಷ್ಠ. ಇದರಿಂದ ನಮ್ಮ ದೇಹದ ತ್ವಚೆಗೆ ಪೋಷಣೆ ದೊರಕುತ್ತದೆ. ಚರ್ಮದ ರೋಗಗಳು ನಿವಾರಣೆಯಾಗುತ್ತವೆ. ಮತ್ತು ಋಣಾತ್ಮಕ ಭಾವಗಳು ದೂರವಾಗಿ ಶುಭ ಉಂಟಾಗುತ್ತದೆ. ಆದರೆ ಇವನ್ನೆಲ್ಲ ಬಿಸಿ ನೀರಿನಲ್ಲಿ ಹಾಕಿ ಸ್ನಾನ ಮಾಡುವುದು ಸೂಕ್ತವಾಗಿದೆ.