ಐದು ಲಕ್ಷ ಉಚಿತವಾಗಿ ಸಿಗುವ ಈ ಆರೋಗ್ಯ ಯೋಜನೆಗೆ ಇವರು ಅರ್ಹರಲ್ಲ!ಹಾಗಾದ್ರೆ ಈ ಲಿಸ್ಟ್ ನಲ್ಲಿ ನೀವು ಇದ್ದೀರೋ ಇಲ್ಲವೋ?

ಪ್ರಧಾನಿ ನರೇಂದ್ರ ಮೋದಿಯವರು 72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಆರೋಗ್ಯ ಕ್ಷೇತ್ರಕ್ಕಾಗಿ ಆಯುಷ್ಮಾನ್ ಭಾರತ್ ಎಂಬ ಒಂದು ದೊಡ್ಡ ಕೊಡುಗೆಯನ್ನು ಸಾಮಾನ್ಯ ಜನರಿಗೆ ಘೋಷಿಸಿದ್ದರು.ಪ್ರಧಾನಿಗಳ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಇದು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಾ ಕವಚ ಯೋಜನೆಯಾಗಿದ್ದು ದೇಶದ ಎಲ್ಲಾ ಸಾಮಾನ್ಯ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂದು ಈ ದೊಡ್ಡ ಯೋಜನೆಯನ್ನು ದೇಶದ ಜನರಿಗೆ ಅರ್ಪಿಸಿದ್ದಾರೆ.

ಆದೆ ದೇಶದ ಬಡಜನರಿಗೆ ಅನುಕೂಲವಾಗಲೆಂದು ಈ ದೊಡ್ಡ ಯೋಜನೆಯನ್ನು ಮೋದಿಯವರು ಜಾರಿಗೆ ತಂದಿದ್ದರೂ, ಬಡವರಿಗೆ ಮೀಸಲಾಗಿರುವ ಈ ಯೋಜನೆಗೆ ಅರ್ಹತೆ ಇಲ್ಲದವರು ಸಹ ಫಲಾನುಭವಿಗಳಾಗಿದ್ದಾರೆಂದು ಹೇಳಲಾಗಿದೆ.ಹಾಗಾಗಿ ಈ ಯೋಜನೆಗೆ ತಕ್ಕ ಅರ್ಹತೆ ಇರುವ ಫಲಾನುಭವಿಗಳನ್ನು ಗುರುತಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಇಂತಹವರು ಈ ಯೋಜನೆಗೆ ಅರ್ಹರಾಗುವುದಿಲ್ಲ

ಮನೆಯಲ್ಲಿ ಬೈಕ್ ಸೇರಿದಂತೆ ಫ್ರಿಡ್ಜ್ ಗಳನ್ನು ಹೊಂದಿದ್ದು, ತಿಂಗಳಿಗೆ ಹತ್ತು ಸಾವಿರಕ್ಕಿಂತ ಹೆಚ್ಚು ಆಧಾಯ ಹೊಂದಿದ್ದರೆ ಮೋದಿಯವರು ಜಾರಿಗೆ ತಂದಿರುವ ಈ ಯೋಜನೆಯ ಸೌಲಭ್ಯಗಳು ಸಿಗುವುದಿಲ್ಲ.ಇದರ ಜೊತೆಯಲ್ಲಿ ತೆರಿಗೆದಾರರು, ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಕೊಠಿಡಿಗಳನ್ನು ಹೊಂದಿರುವವರು, ಲ್ಯಾಂಡ್ ಲೈನ್ ಫೋನ್ ಸಂಪರ್ಕ ಹೊಂದಿರುವವರು, ಕಿಸಾನ್ ಕ್ರೆಡಿಟ್ ಕಾರ್ಡ್’ಗಳನ್ನು ಹೊಂದಿರುವವರು, ಸರ್ಕಾರಿ ಅಧಿಕಾರಿಗಳು, ಶಾಸಕರು ಮತ್ತು ಸಂಸದರನ್ನು ಈ ಯೋಜನೆಗೆ ಅರ್ಹರಾಗುವುದಿಲ್ಲ.

ದೇಶದ 10 ಕೋಟಿ ಕುಟುಂಬಗಳ ಜನರು ಈ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಪಡೆಯಲಿದ್ದು, ಬಡವರಿಗೆ ಗುಣಮಟ್ಟದ ಚಿಕಿತ್ಸೆ ಪಡೆಯಲು ಸರ್ಕಾರ ವಾರ್ಷಿಕ ಸುಮಾರು ರೂ.12 ಸಾವಿರ ಕೋಟಿ ವೆಚ್ಚ ಮಾಡಲಿದೆ. ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಈ ಯೋಜನೆಯ ಫಲವನ್ನು ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯ ಫಲಾನುಭವಿಗಳೂ ಸಹ ಪಡೆಯಲಿದ್ದಾರೆ.

 

ಯಾರೆಲ್ಲಾ ಈ ಯೋಜನೆಗೆ ಅರ್ಹರು?

ಕೂಲಿ ಕಾರ್ಮಿಕರು, ನೈರ್ಮಲ್ಯ ಕೆಲಸಗಾರರು, ಬೀದಿ ವ್ಯಾಪಾರಿಗಳು, ಭದ್ರತಾ ಸಿಬ್ಬಂದಿಗಳು, ಕಲ್ಲು ಹೊರುವವರು,ಚಿಂದಿ ಆಯುವವರು, ದೇಶೀಯ ಕಾರ್ಮಿಕರು ಸೇರಿದಂತೆ ಭಿಕ್ಷುಕರು ಸಹ ಈ ಯೋಜನೆಗೆ ಅರ್ಹ ಫಲಾನುಭವಿಗಳಾಗುತ್ತಾರೆ.