ತೆಲಗು ಸ್ಟಾರ್ ಅನುಷ್ಕಾ ಶೆಟ್ಟಿಯ ಈ ಪೋಸ್ಟ್ ನೋಡಿ, ರಶ್ಮಿಕಾ ಮೇಲೆ ಉರಿದು ಬಿದ್ದ ಅಭಿಮಾನಿಗಳು ಮಾಡಿದ ಕಾಮೆಂಟ್ಸ್ ಏನ್ ಗೊತ್ತಾ.?

ಮೂಲತಃ ಕರುನಾಡಿನ ಕರಾವಳಿಯವರಾದ, ಈಗ ಟಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಅನುಷ್ಕಾ ಶೆಟ್ಟಿ ತಮ್ಮ ತಾಯಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸುವ ಮೂಲಕ ಕೋಟ್ಯಂತರ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

ಅನುಷ್ಕಾ ಶೆಟ್ಟಿ ಅವರ ತಾಯಿಗೆ ಬರ್ತ್ ಡೇ ವಿಶ್ ಮಾಡೋದಕ್ಕೂ, ಕನ್ನ್ನಡಿಗರ ಮನಸ್ಸು ಗೆಲ್ಲೋದಕ್ಕೂ ಏನು ಸಂಬಂಧ ಅಂತೀರಾ..ಅದಕ್ಕೆ ಇಲ್ಲಿದೆ ಉತ್ತರ. ಈಗಾಗಲೇ ತೆಲುಗಿನ ಸೂಪರ್ ಸ್ಟಾರ್ ನಟರ ಜೊತೆ ಅಭಿನಯಿಸಿ ಸ್ಟಾರ್ ನಟಿಯಾಗಿರುವ ಅನುಷ್ಕಾ ಅವರ ತಾಯಿಗೆ ಹುಟ್ಟು ಹಬ್ಬದ ಶುಭಾಷಯ ಹೇಳಿದ್ದು ಕನ್ನಡದಲ್ಲಿ.

ಅನುಷ್ಕಾ ಶೆಟ್ಟಿ ಅವರ ತಾಯಿಯ ಹುಟ್ಟುಹಬ್ಬವನ್ನು ಇಂದು ಆಚರಿಸುತ್ತಿದ್ದು, ತನ್ನ ತಾಯಿ ಸೇರಿದಂತೆ ಬೇರೆಯವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಆ ಫೋಟೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಫೋಟೋದ ಕೆಳಗಡೆ “ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಮ್ಮಾ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ನೋಡಿದ ಕನ್ನಡಿಗರು ತೆಲುಗು ಸ್ಟಾರ್ ಆಗಿರುವ ನಟಿ ಅನುಷ್ಕಾ ಶೆಟ್ಟಿ ಅವರ ಕನ್ನಡ ಪ್ರೇಮ ಕಂಡು ಕಾಮೆಂಟ್ ಮಾಡುವ ಮೂಲಕ ಮೆಚ್ಚೆಗೆ ಮಹಾಪೂರವೇ ಹರಿದು ಬಂದಿದೆ. ಕೆಲವರು ಈ ಪೋಸ್ಟ್ ಗೆ
ತನ್ನ ತಾಯಿಗೆ ತನ್ನ ಮಾತೃ ಭಾಷೆ ಮೂಲಕ ಶುಭಾಶಯ ಕೋರಿದ ಕನ್ನಡತಿ ಅನುಷ್ಕಾ ಶೆಟ್ಟಿ ಅವರಿಗೆ ಧನ್ಯವಾದಗಳು. ನೀವು ಮನಸು ಮಾಡಿದರೆ ನಿಮಗೆ ಅಪಾರ ಯಶಸ್ಸು, ಜನಪ್ರಿಯತೆ ತಂದು ಕೊಟ್ಟ ತೆಲುಗು ಭಾಷೆಯಲ್ಲಿ ಶುಭಾಶಯ ಹೇಳಬಹುದಿತ್ತು. ಆದರೆ ನೀವು ನಿಮ್ಮ ತಾಯ್ನಾಡು ಹಾಗೂ ತಾಯ್ನುಡಿಯನ್ನು ಮರೆಯಲಿಲ್ಲ. 

ಕನ್ನಡತಿ ಅನುಷ್ಕಾ ಶೆಟ್ಟಿ ನಿಮಗೆ ತುಂಬು ಹೃದಯದ ಗೌರವ ಸಲ್ಲಿಸುತ್ತೇವೆ…ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಬೇರೆ ಕಡೆ ಆಫರ್ ಬಂದ್ಮೇಲೆ ಕನ್ನಡ ಬರಲ್ಲ, ಕನ್ನಡ ಕಷ್ಟ,, ಕನ್ನಡ ಇಷ್ಟ ಇಲ್ಲ ಅನ್ನೋರ ನಡುವೆ….ಬೇರೆ ಕಡೆ ಇದ್ದು,, ಬೇರೆ ಕಡೆ ಮಿಂಚಿ ಎಲ್ಲಾದರೂ ಇರು ಎಂತಾದರೂ ಇರು,, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಸಾರಾಂಶ ಸಾರಿದ ಮಹಾ ವ್ಯಕ್ತಿ ನೀವು ಎಂದು ಕಾಮೆಂಟ್ಸ್ ಮಾಡಿದ್ದಾರೆ.

ಇದೇ ಸಂಧರ್ಭದಲ್ಲಿ ನಟಿ ರಶ್ಮಿಕಾ ಮಂದಣ್ಣನವರ ಮೇಲೆ ಉರಿದು ಬಿದ್ದ ಕನ್ನಡಿಗರು ಮಾಡಿದ ಕಾಮೆಂಟ್ಸ್ ನೋಡಿ…

*ಇವಾಗಿನ್ನೂ ಚಿತ್ರರಂಗಕ್ಕೆ ಕಾಲಿಟ್ಟು ಕನ್ನಡ ಗೊತ್ತಿಲ್ಲ ಅಂತೀಯಲ್ಲ ಕನ್ನಡದಿಂದ ಹೋಗಿ ತೆಲುಗಿನಲ್ಲಿ ಸಕ್ಸಸ್ ಕಂಡು ಹಲವು ವರ್ಷಗಳಾದ್ರೂ ಮಾತೃ ಭಾಷೆಯ ಬಗೆಗೆ ಅಭಿಮಾನ ಹೊಂದಿರೋ ನಮ್ ಅನುಷ್ಕಾನ ನೋಡಿದ್ಮೇಲಾದ್ರೂ ಒಂದ್ ಚೂರಾದ್ರೂ ಸಂಸ್ಕಾರ ಕಲ್ತ್ಕೋ!! ಕನ್ನಡ ಆಮೇಲೆ ತಾನಾಗೇ ಬರುತ್ತೆ.. 

*ಇವ್ರು ನಿಜವಾದ ಕನ್ನಡತಿ….ಕೆಲವರು ಇದರೆ ಕರ್ನಾಟಕದಲ್ಲಿ ಹುಟ್ಟಿ ಕನ್ನಡದಲ್ಲಿ ಸಕ್ಸಸ್ ಕಂಡು ಬೇರೆ ಕಡೆ ಹೋದ ತಕ್ಷಣ ಕನ್ನಡ ಮರೆತು ಹೋಗತ್ತೆ.

*ಎಲ್ಲಿದ್ದೀಯಾ ರಶ್ಮಿಕಾ ಮುದ್ದಣ್ಣ ಅಕ್ಕನ ಕಾಲು ತೊಳೆದು ನೀರು ಕುಡಿ ನಿಮಗೆ ಬುದ್ದಿ ಬರತ್ತೆ.ದಕ್ಷಿಣ ಭಾರತ ಚಿತ್ರರಂಗದ ನಂಬರ್ ಒನ್ ನಟಿ ಕನ್ನಡ ಪ್ರೀತಿ ಅನುಷ್ಕಾ ಶೆಟ್ಟಿ ಎಲ್ಲರೂ ಕನ್ನಡಿಗರು ಸಂತೋಷ ಪಡುವ ವಿಷಯ

*ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಕನ್ನಡ ಮಾತಾಡೋದು ಕಷ್ಟ ಅನ್ನುವ ಕೆಲವು ಅಹಂಕಾರಿಗಳು ಇದನ್ನು ನೋಡಿ ಕಲಿಯಲಿ. ಹಾಗೂ ಕನ್ನಡ ಭಾಷೆಯ ಮೂಲಕ ಚಿತ್ರರಂಗ ಪ್ರವೇಶಿಸಿ ಈಗ ಬಾಲಿವುಡ್ ನಲ್ಲಿ ಫೇಮಸ್ ಆದ ತಕ್ಷಣ ತಮ್ಮ ಹೆಸರನ್ನು ಪಡುಕೋಣೆ ಇಂದ ಪಡುಕೋನ್ ಅಂತ ಮಾಡಿಕೊಂಡು, ತಮ್ಮ ಮೊದಲ ಚಿತ್ರ ಕನ್ನಡದ್ದು ಅಂತ ಎಲ್ಲಿಯೂ ಹೇಳಿಕೊಳ್ಳದೆ ತಮಗೂ ಕನ್ನಡಕ್ಕೂ ಸಂಬಂಧ ಇಲ್ಲ ಎಂದು ವರ್ತಿಸುತ್ತಿರುವವರೂ ಕೂಡ ನಿಮ್ಮಿಂದ ಕಲಿಯಬೇಕು.