ನಟ ಅಂಬರೀಶ್ ನಡೆಸಿದ ಸಂಧಾನದಲ್ಲಿ ಕ್ಷಮೆ ಕೇಳಿದ್ದು ಯಾರು ಗೊತ್ತಾ?ಅರ್ಜುನ್ ಸರ್ಜಾ ಮತ್ತು ಶ್ರುತಿ ಏನ್ ಹೇಳಿದ್ರು ಗೊತ್ತಾ?

ಕೆಲವು ದಿನಗಳಿಂದ ಚಂದನವನದಲ್ಲಿ ಮೀಟೂ ಬಿರುಗಾಳಿಯೇ ಎದ್ದಿತ್ತು. ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮಾಡಿದ ಆರೋಪ ಇಡೀ ಸ್ಯಾಂಡಲ್ ವುಡ್ ನ್ನೇ ಶೇಕ್ ಮಾಡಿತ್ತು.

ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ರವರು ಸಂಧಾನ ಸಭೆ ನಡೆಸಿದ್ದಾರೆ.ಆರೋಪ ಮಾಡಿರುವ ಶ್ರುತಿ ಹರಿಹರನ್ ಬಗ್ಗೆ ವಿಶಾರಿಸಿದ್ದು ನಿಮಗೆ ಯಾವುದೇ ಅನ್ಯಾಯವಾಗಿದ್ದರೆ ಮೊದಲು ನಮ್ಮ ಮುಂದೆ ತರಬೇಕಿತ್ತು. ಇಲ್ಲಿ ಯಾರಿಗೂ ಕೂಡ ಅನ್ಯಾಯ ಆಗಿಲ್ಲ.ಇಲ್ಲಿ ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ.

ನಿನಗೆ ಅರ್ಜುನ ಸರ್ಜಾರವರಿಂದ ಒಂದು ವೇಳೆ ತಪ್ಪಾಗಿದ್ದರೆ ಆಗಲೇ ತಿಳಿಸಬೇಕಿತ್ತು. ಭಯಬಿಳುವುದಕ್ಕೆ ನೀನೇನು ಚಿಕ್ಕ ಹುಡುಗಿಯಲ್ಲ.ಇದರಿಂದ ನಮ್ಮ ಚಿತ್ರರಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಎಂದು ಹೇಳಿದ್ದಾರೆ.

ನಂತರ ಶ್ರುತಿ ಮಾಡಿರುವ ಆರೋಪದ ಬಗ್ಗೆ ಅರ್ಜನು ಸರ್ಜಾರವರನ್ನು ಅಂಬರೀಶ್ ರವರು ವಿಚಾರಣೆ ಮಾಡಲಾಗಿ ನಾನು ಅವರ ಜೊತೆಯಲ್ಲಿ ಯಾವುದೇ ರೀತಿಯ ಕೆಟ್ಟದಾಗಿ ನಡೆದುಕೊಂಡಿಲ್ಲ.ಅವರನ್ನು ಡಿನ್ನರ್ ಗಾಗಿ ಆಗಲಿ ರೆಸಾರ್ಟ್ ಗೆ ಆಗಲಿ ಕರೆದಿಲ್ಲ. ಇಷ್ಟು ವರ್ಷಗಳಿಂದ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಾನು ನಟಿಸಿಕೊಂಡು ಬರುತ್ತಿದ್ದೇನೆ.ಯಾವ ನಟಿಯೂ ಕೂಡ ನನ್ನ ಮೇಲೆ ಯಾವುದೇ ರೀತಿಯ ಆಪಾದನೆ ಮಾಡಿಲ್ಲ. ಆ ರೀತಿಯ ಮನುಷ್ಯ ನಾನಲ್ಲ.

ಶ್ರುತಿಯವರು ಮಾಡಿರುವ ಆರೋಪದಿಂದ ನಮ್ಮ ಕುಟುಂಬದ ಮರ್ಯಾದೆ ಆಳಾಗಿದೆ.ನಾನು ಈಗಾಗಲೇ 5 ಕೋಟಿ ಮಾನನಷ್ಟ ಮೊಕದ್ದೊಮ್ಮೆ ಹುಡಿದ್ದೇನೆ.ಯಾವುದೇ ಕಾರಣಕ್ಕೂ ಕೇಸ್ ಹಿಂದೆ ಪಡೆಯುವುದಿಲ್ಲ.ಅವರು ಬಹಿರಂಗವಾಗಿ ಕ್ಷಮ ಯಾಚನೆ ಮಾಡಲೇಬೇಕು.ಅವರು ಕ್ಷಮೆ ಯಾಚೆಸಿದ್ರೆ ಮಾತ್ರ ನನಗೆ ನೆಮ್ಮದಿ ಸಿಗುತ್ತೆ.

ಅವರು ಮಾಡಿರುವ ಇಲ್ಲಸಲ್ಲದ ಆರೋಪದಿಂದ ನನಗೆ ನನ್ನ ಕುಟುಂಬಕ್ಕೆ ತುಂಬಲಾರದಷ್ಟು ಡ್ಯಾಮೇಜ್ ಆಗಿದೆ.ಇದಕ್ಕೆ ಹೊಣೆ ಯಾರು.ಅವರು ಸಾರ್ವಜನಿಕವಾಗಿ ಬಹಿರಂಗವಾಗಿ ಕ್ಷಮೆ ಕೇಳಲೇಬೇಕು ಎಂದು ಹೇಳಿದ್ದಾರೆ. ಶ್ರುತಿ ಕೂಡ ಅವರಿಂದ ನನಗೆ ಕಿರುಕುಳ ಆಗಿದೆ.ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಅಂಬರೀಶ್ ಮುಂದೆ ಹೇಳಿದ್ದಾರೆ. ಹೀಗಾಗಿ ಸಂಧಾನ ವಿಪಲವಾಗಿದೆ.