ಈ ಅಕ್ಷಯ ತೃತೀಯದಂದು ಅದೃಷ್ಟ ಐಶ್ವರ್ಯ ನಿಮ್ಮದಾಗಿಸಿಕೊಳ್ಳಲು ತಪ್ಪದೇ ಅತೀ ಕಡಿಮೆ ಖರ್ಚಿನ ಈ ಸಿಂಪಲ್ ಕೆಲಸಗಳನ್ನು ತಪ್ಪದೇ ಮಾಡಿ…

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯವನ್ನು ಅಕ್ಷಯ ತೃತೀಯವೆಂದು ಕರೆಯಲಾಗುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಈ ಅಕ್ಷಯ ತೃತೀಯಕ್ಕೆ ವಿಶೇಷವಾದ ಪ್ರಾಮುಖ್ಯತೆಯಿದೆ. ಮೇ 7 ಮಂಗಳವಾರದಂದು ಅಕ್ಷಯ ತೃತೀಯ ಬಂದಿದ್ದು, ಯಾವುದೇ ಶುಭ ಕಾರ್ಯಗಳನ್ನು ಮಾಡಲು ಈ ದಿನ ಅತ್ಯಂತ ಶುಭವಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಶುಭ ಕೆಲಸಗಳಾದ ಗೃಹ ಪ್ರವೇಶ, ಮದುವೆ ಕಾರ್ಯ ಸೇರಿದಂತೆ ಮುಂಜಿಯಂತಹ ಕಾರ್ಯಗಳನ್ನು ಈ ದಿನ ಮಾಡುವುದು ಅತ್ಯಂತ ಶುಭ ಕರ ಎಂದು ಹೇಳಲಾಗಿದೆ.

*ಈ ಶುಭದಿನದಂದು ಹೊಸ ಉದ್ಯೋಗವನ್ನು ಶುರುಮಾಡುವುದರೊಂದಿಗೆ, ಹೊಸ ಬಟ್ಟೆ, ಬಂಗಾರ ಧರಿಸುವುದು ಮಂಗಳಕರ ಎಂದು ಹೇಳಲಾಗಿದೆ.

*ಈ ಅಕ್ಷಯ ತೃತೀಯದಂದು ಗಂಗೆ ಸ್ನಾನ ಮಾಡಿ , ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಪಾಪ ಕಳೆದುಹೋಗುತ್ತದೆ ಎಂಬ ನಂಬಿಕೆ ಸಹ ಇದೆ.

*ಈ ಶುಭಾಕರವಾದ ಅಕ್ಷಯ ತೃತೀಯದಂದು ದಾನಕ್ಕೆ ವಿಶೇಷ ಮಹತ್ವವಿದ್ದು, ಕರ್ಬೂಜ, ಫ್ಯಾನ್, ಛತ್ರಿ ಸೇರಿದಂತೆ ದೇಹಕ್ಕೆ ತಂಪು ನೀಡುವ ವಸ್ತುಗಳನ್ನು ದಾನ ಮಾಡಬೇಕು.

*ಅದೃಷ್ಟ ಒದಗಿ ಬರಲು ಈ ಶುಭದಿನದಂದು ಶಂಖ, ನವಿಲು ಗರಿಯನ್ನು ಖರೀದಿ ಮಾಡಿದರೆ ಒಳ್ಳೆಯದು.

*ಬಂಗಾರ, ಬೆಳ್ಳಿ ಖರೀದಿ ಮಾಡುವವರು ಅದನ್ನು ಮೊದಲು ದೇವಿ ಲಕ್ಷ್ಮಿ ಮುಂದಿಟ್ಟು ಪೂಜೆ ಮಾಡಿದ ನಂತ್ರ ಧರಿಸುವುದು ಒಳ್ಳೆಯದು.