(video)ಬ್ರಿಟನ್‌ ಖ್ಯಾತ ರಿಯಾಲಿಟಿ ಶೋನಲ್ಲಿ ಧೂಳೆಬ್ಬಿಸಿದ ಕೇವಲ 14ವರ್ಷದ ಧಡೂತಿ ದೇಹದ ಭಾರತೀಯ ಬಾಲಕ!

ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲ ಅನ್ನೋದು ನಿಜ. ಇದಕ್ಕೆ ನಿದರ್ಶನವೆಂಬಂತೆ ಭಾರತದ ಹದಿನಾಲ್ಕು ವರ್ಷದ ಬಾಲಕನೊಬ್ಬ ತನ್ನ ವಿಶಿಷ್ಟ ಶೈಲಿಯ ಡಾನ್ಸ್ ಮೂಲಕ ಬ್ರಿಟನ್ ದೇಶದ ಪ್ರಖ್ಯಾತ ರಿಯಾಲಿಟಿ ಶೋ ನಲ್ಲಿ ಸಖತ್ ಆಗಿಯೇ ಪ್ರದರ್ಶನ ನೀಡಿದ್ದಾನೆ.

ಹೌದು, ಮುಂಬೈ ಮೂಲದ 14 ವರ್ಷದ ಈ ಬಾಲಕನ ಹೆಸರು ಅಕ್ಷತ್ ಸಿಂಗ್ ಎಂದು. ತನ್ನ ನೃತ್ಯದ ಮೂಲಕ ಬ್ರಿಟನ್‌‌ ನ ಪ್ರಖ್ಯಾತ ರಿಯಾಲಿಟಿ ಶೋ ಬ್ರಿಟನ್ ಗಾಟ್ ಟ್ಯಾಲೆಂಟ್‌ ನಲ್ಲಿ ಭಾರಿ ಪ್ರದರ್ಶನ ನೀಡಿದ್ದಾನೆ. ಎಪ್ರಿಲ್ ೨೧ರಂದು ನಡೆದ ಈ ಪ್ರಕ್ಯಾತ ರಿಯಾಲಿಟಿ ಶೋನಲ್ಲಿ ತನ್ನ ವಿಶಿಷ್ಟ ಶೈಲಿಯ ನೃತ್ಯದ ಮೂಲಕ ತೀರ್ಪುಗಾರರ ಮನ ಗೆದ್ದಿದ್ದು, ಶ್ಲಾಘನೆಯ ಮಹಾಪೂರ ಪಡೆದುಕೊಂಡಿದ್ದಾನೆ.

ಅಕ್ಷತ್ ಸಿಂಗ್ ನ ಸುಪರ್ ಡಾನ್ಸ್ ವಿಡಿಯೋ…

ಅಕ್ಷತ್ ಸಿಂಗ್ ತಮ್ಮ ನೃತ್ಯವನ್ನು ಬಾಲಿವುಡ್ ನ ಅಗ್ನಿಪತ್ ಚಿತ್ರದ ದೇವ ಶ್ರೀ ಗಣೇಶ ಹಾಡಿನಿಂದ ಶುರು ಮಾಡಿ ಕೊನೆಯದಾಗಿ ಫ್ಯಾಟ್‌ ಪೀಪಲ್ ಕ್ಯಾನ್ ಡ್ಯಾನ್ಸ್ ಹಾಡಿನ ಮೂಲಕ ಅಂತಿಮಗೊಳಿಸಿದ್ದಾನೆ. ಈ ಬಾಲಕನ ಅಮೋಘ ನೃತ್ಯ ಕಂಡು ತೀರ್ಪುಗಾರರು ಎದ್ದು ನಿಂತು ಅಭಿನಂದಿಸಿದ್ದಾರೆ.

ತೀರ್ಪುಗಾರರು ಕೇಳಿದ ಪ್ರಶ್ನೆ ಒಂದಕ್ಕೆ ಉತ್ತರಿಸಿದ ಅಕ್ಷತ್, ನನಗೆ ಜೀವನದಲ್ಲಿ ಎರಡು ಪ್ರಮುಖ ಗುರಿಗಳಿವೆ. ಒಂದು ಎಲ್ಲರನ್ನು ಖುಷಿಯಾಗಿಡುವುದು ಹಾಗೂ ಯಾರಿಗೂ ಯಾವುದು ಅಸಾಧ್ಯವಲ್ಲ ಎನ್ನುವುದನ್ನು ಎಲ್ಲರಿಗೂ ತೋರಿಸುವುದು ಎಂದಿದ್ದಾನೆ.