ಈ ಕಾಲ ಭೈರವನಿಗೆ ಅಮಾವಾಸ್ಯೆ ಪೂಜೆ ಮಾಡಿಸಿದರೆ ನಿಮ್ಮ ಆಸೆ ನೆರವೇರುವುದು ಶತ ಸಿದ್ಧ…ಮುಖ್ಯಮಂತ್ರಿ ಕುಮಾರಣ್ಣನಿಗೆ ಆದದ್ದು ಇದೇ…

ಈ ಸ್ಥಳ ಖ್ಯಾತ ಶಿವ ಸನ್ನಿಧಾನ. ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿ ನಲ್ಲಿ ಬರುವ ಆಧಿ ಚುಂಚನಗಿರಿ ಶ್ರೀ ಕ್ಷೇತ್ರ…ಇಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಮತ್ತು ಬೆಟ್ಟದಲ್ಲಿ ಗಂಗಾಧರ ಸ್ವಾಮಿ ನೆಲೆ ಗೊಂಡಿದ್ದಾರೆ. ಲಕ್ಷಾಂತರ ಜನ ಭಕ್ತರನ್ನು ಹೊಂದಿರುವ ಈ ದೇವರಿಗೆ..ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ವೂ ಬಹು ದೊಡ್ಡ ಭಕ್ತ ಕುಟುಂಬ…

ಇಲ್ಲಿಯ ದೈವ ಕಾಲಭೈರವನಂತೂ ತುಂಬಾ ಶಕ್ತಿ ದೈವ…ಅದರಲ್ಲೂ ಅಮಾವಾಸ್ಯೆಯ ಸಮಯದಲ್ಲಿ ಕಾಳ ರೂಪಿ..ಅಮವಾಸ್ಯೆ ಅಂದು ಇಲ್ಲಿ ಪೂಜೆ ಅಥವಾ ಹೋಮ ಮಾಡಿದರಂತೂ ಭಕ್ತರ ಸಮಸ್ಯೆ ದೂರವಾಗುವುದು ಶತ ಸಿದ್ಧವಂತೆ…

ನಿಮಗೆ ತಿಳಿದಿರಬಹುದು, ದೆವೇಗೌಡ ಕುಟುಂಬದವರು ಈ ಸಲದ ವಿಧಾನ ಸಭಾ ಚುನಾವಣೆಗೆ ಮುನ್ನ ಇಲ್ಲಿ ಕೋಟಿ ವೆಚ್ಚದಲ್ಲಿ ಪೂಜೆ,ಯಾಗ, ಹೋಮಗಳನ್ನು ಮಾಡಿಸಿದ್ದರು. ತಮ್ಮ ಕುಟುಂಬಕ್ಕೆ ಏನೂ ತೊಂದರೆ ಆಗಬಾರದು ಹಾಗೂ ತಾವು ಅಧಿಕಾರಕ್ಕೆ ಬರಬೇಕು ಎಂದು. ಅದು ಪವಾಡ ಎಂಬಂತೆ ನೆರವೇರಿತು. ಇದು ಒಂದು ಉದಾಹರಣೆ ಅಷ್ಟೇ. ಹೀಗೆ ಅಲ್ಲಿ ಅಮಾವಾಸ್ಯೆಯಂದು ಪೂಜೆ ಮಾಡಿಸುವ ಎಲ್ಲರ ಕಷ್ಟ ನಿವಾರಣೆಯಾಗುತ್ತದೆ ಎಂದು ಹಲವು ಭಕ್ತರು ನಂಬಿದ್ದಾರೆ.

 

ಆದಿ ಚುಂಚನಗಿರಿ ಒಂದು ಸುಂದರವಾದ ಸ್ಥಳ. ದೇವಾಲಯವಂತೂ ಅತಿ ಸುಂದರ. ಈ ದೇವಾಲಯದ ಮೆಟ್ಟಿಲು, ಬೆಟ್ಟದ ಮೇಲೆ ನಿಂತು ಅದ ಪ್ರಕೃತಿ ನೋಡುವುದೇ ಒಂದು ತರದ ಆನಂದ… ಇಲ್ಲಿ ಎಷ್ಟೋ ಚಲನ ಚಿತ್ರಗಳ ಚಿತ್ರೀಕರಣ ನಡೆದಿದೆ. ಇಲ್ಲಿಯ ಪರಿಸರ ಮನೋಹರ. ಈ ಸನ್ನಿಧಾನದಲ್ಲಿ ಪ್ರಸಾದದ ವ್ಯವಸ್ಥೆಯು ಸಹ ಇದೆ. ಇಲ್ಲಿಯ ಶ್ರೀ ಮಠದಲ್ಲಿ ಜಾತಿ ಬೇಧವಿಲ್ಲದೆ ಸಾವಿರಾರು ಮಕ್ಕಳು ಆಶ್ರಯ ಹೊಂದಿ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ.