ಸ್ಯಾಂಡಲ್ವುಡ್ ನಲ್ಲಿ ಮಿಂಚಿ ಮರೆಯಾದ ನಟಿ ಕಲ್ಪನಾ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಗೊತ್ತಾ?ಆ ದಿನ ರಾತ್ರಿ ಅಲ್ಲಿ ನಡೆದಿದ್ದೇನು?

ಕನ್ನಡ ಚಿತ್ರರಂಗದಲ್ಲಿ ಮಿನುಗು ತಾರೆ ಎಂದು ಖ್ಯಾತರಾಗಿದ್ದ ನಟಿ ಕಲ್ಪನಾ ದಿವಂಗತರಾಗಿ ೪೦ ವರ್ಶಗಳೇ ಕಳೆದಿವೆ. ಅತೀ ಕಡಿಮೆ ಅವಧಿಯಲ್ಲಿ ಅದ್ಭುತ ಸಾಧನೆ ಮಾಡಿ ಬಾರದ ಲೋಕಕ್ಕೆ ಹೊರಟು ಹೋಗಿರುವ ನಟಿ ಕಲ್ಪಾರವರ ನೆನಪು ಇಂದಿಗೂ ಕನ್ನಡಿಗರಲ್ಲಿ ಹಚ್ಚ ಹಸಿರಾಗಿ ಉಳಿದಿದ್ದಾರೆ.

ನಟಿ ಕಲ್ಪನಾರವರು 1943 ಜುಲೈ 18ರಂದು ಮಂಗಳೂರಿನಲ್ಲಿ ಜನಿಸಿದರು. 1963ರಲ್ಲಿ ಅವರ ಮೊದಲ ಚಿತ್ರ ಸಾಕುಮಗಳು ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆಗಿನ ಕಾಲದ ಘಾಟಾನುಘಟಿ ಕವಿಗಳಾದ ಶಿವರಾಮ ಕಾಂರಂತರವರು ಸೇರಿದಂತೆ ಹಲವಾರು ಮೇರುಸಾಹಿತಿಗಳ ಕಡೆಯಿಂದ ಇವರ ಅಮೋಘ ಅಭಿನಯಕ್ಕೆ ಮೆಚ್ಚುಗೆ ಕೂಡ ಸಿಕ್ಕಿತ್ತು.

ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಕನ್ನಡ ೬೯ ಸೇರಿದಂತೆ ಬರೋಬ್ಬರಿ ೭೮ ಚಿತ್ರಗಳ್ಲಲಿ ನಟಿಸಿದ್ದಾರೆ ನಟಿ ಕಲ್ಪನಾ. 1978ರಲ್ಲಿ ತೆರೆಗೆ ಬಂದ ಮಲೆಯ ಮಕ್ಕಳು ಈ ನಟಿಯ ಕಡೆಯ ಚಿತ್ರವಾಗಿತ್ತು. ಕನ್ನಡದ ಮೇರು ನಟ ರಾಜ್ಕುಮಾರ್ ಸೇರಿದಂತೆ ಹಲವಾರು ನಟರ ಜೊತೆಯಲ್ಲಿ ಅಭಿನಯಿಸಿ ತಮ್ಮ ಪ್ರತಿಭೆ ತೋರಿದರು ನಟಿ ಕಲ್ಪನಾ.

ಮೊದಲ ಬಾರಿಗೆ ಫಿಲಂಫೇರ್ ಪ್ರಶಸ್ತಿ ಪಡೆದ ಮೊದಲ ಕನ್ನಡ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಕಲ್ಪನಾ ಮೊಟ್ಟಮೊದಲ ಬಾರಿಗೆ ರಾಜ್ಯಸರ್ಕಾರದಿಂದ ‘ಅತ್ತ್ಯುತ್ತಮ ನಟಿ’ ಪ್ರಶಸ್ತಿ ಪಡೆದ ಮೊದಲ ನಟಿ ಸಹ ಆಗಿದ್ದಾರೆ. ಇದರ ಜೊತೆಗೆ ಮೂರೂ ಬಾರಿ ಶ್ರೇಷ್ಠ ನಟಿ ಗೌರವ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. ರಾಜಕುಮಾರ್ ಜೊತೆ ನಟಿಸಿದ್ದ ‘ಬಂಗಾರದ ಹೂವು’, ‘ಮಣ್ಣಿನಮಗ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಗಳನ್ನು ಸಹ ತಮ್ಮದಾಗಿಸಿಕೊಂಡಿದ್ದರು.

ಇಂತಹ ಕನ್ನಡದದ ಮೇರು ಕಲಾವಿದೆ ಮೇ 12, 1979 ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಕನ್ನಡ ಚಿತ್ರರಂಗಕ್ಕೆ ಅಷ್ಟೇ ಅಲ್ಲದೇ ಕನ್ನಡಿಗರಿಗೂ ಕೂಡ ದುರ್ದೈವದ ಸಂಗತಿಯಾಗಿತ್ತು.

ನಟಿ ಕಲ್ಪನಾ ಗೋಡಗೇರಿ ಬಸವರಾಜ್ ನಾಟಕ ಕಂಪನಿಯ ನಾಟಕಕ್ಕಾಗಿ ಸಂಕೇಶ್ವರಕ್ಕೆ ಆಗಮಿಸಿದ್ದರು. ಇದೇ ವೇಳೆ ಗೋಡಗೇರಿ ಬಸವರಾಜ್ ಮತ್ತು ನಟಿ ಕಲ್ಪನಾ ನಡುವೆ ಮನಸ್ತಾಪ ಏರ್ಪಟ್ಟು ಬೇಸರದಿಂದ ತಾವು ವಾಸ್ತವ್ಯವಿದ್ದ ಗೋಟೂರು ಗ್ರಾಮದ ಪ್ರವಾಸಿ ಮಂದಿರದಲ್ಲೇ ಆತ್ಮಹತ್ಯ ಮಾಡಿಕೊಂಡರೂ ಎಂದು ಹೇಳಲಾಗುತ್ತದೆ.

ನಟಿ ಕಲ್ಪನಾ ಸಾವಿನ ಬಗ್ಗೆ ಹಲವಾರು ಅನುಮಾನಗಳಿದ್ದವು..

*ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಸುಮಾರು ೨-೩೦ರ ವೇಳಗೆ ಸಂಕೇಶ್ವರದಲ್ಲಿ ‘ಕುಮಾರ ರಾಮ’ ನಾಟಕ ನಡೆದಿತ್ತು. ಅದರಲ್ಲಿ ಗುಡಗೇರಿ ಬಸವರಾಜು ಕುಮಾರ ರಾಮನಾಗಿದ್ದರೆ ಕಲ್ಪನಾ ಮಲತಾಯಿಯ ಪಾತ್ರದಲ್ಲಿದ್ದರು. ನಾಟಕದಲ್ಲಿ ಭಾಗವಹಿಸುವಾಗಲೇ ಕಲ್ಪನಾ ಅನ್ಯಮನಸ್ಕರಾಗಿದ್ದರು. ನಾಟಕದಲ್ಲಿ ಕುಮಾರ ರಾಮ ತನಗೆ ‘ಹಸಿವಾಗಿದೆ’ ಎಂದಾಗ ‘ರೊಟ್ಟಿ ತಿನ್ನು’ ಎಂದು ಹೇಳುವ ಬದಲು ‘ಹುಲ್ಲು ತಿನ್ನು’ ಎಂದು ಹೇಳಿದ್ದರು. ಜನ ಬಿದ್ದು ಬಿದ್ದು ನಕ್ಕರು.

*ಇದರಿಂದ ಅವಮಾನಿತನಾದ ಬಸವರಾಜ ‘ ಹೌದು ನಾನು ಹಸು, ಹಲ್ಲು ಕೊಡು’ ಎಂದು ಹೇಳುತ್ತಾ ವೇದಿಕೆಯ ತುಂಬಾ ಓಡಾಡಲು ಆರಂಭಿಸಿದರು. ಜನ ಇನ್ನಷ್ಟು ಕೇಕೆ ಹಾಕಲು ಆರಂಭಿಸಿದಾಗ ಅಪಮಾನಗೊಂಡ ಬಸವರಾಜ್ ನಾಟಕವನ್ನು ಅಲ್ಲಿಗೇ ನಿಲ್ಲಿಸಿದರು. ಪರದೆ ಬಿದ್ದ ನಂತರ ನೇರವಾಗಿ ಕಲ್ಪನಾರ ಕಡೆ ಧಾವಿಸಿ ಕೆನ್ನೆಗೆ ಹೊಡೆದರು. ಇದರಿಂದ ವಿಚಲಿತರಾದ ಅವರು ವೇಷ ಕೂಡ ಬದಲಾಯಿಸದೆ ನೇರವಾಗಿ ಗೋಟೂರು ಪ್ರವಾಸಿ ಧಾಮಕ್ಕೆ ಬಂದು ಆತ್ಮ ಹತ್ಯೆ ಮಾಡಿಕೊಂಡರು ಎಂದು ಹೇಳಲಾಗುತ್ತದೆ.

ಆತ್ಮಹತ್ಯೆಯಿಂದ ಸಾವನಪ್ಪಿದ ನಂತರ ನಟಿ ಕಲ್ಪನಾರವರ ಸಮಾಧಿಯನ್ನು ಬೆಂಗಳೂರು ಕೋಣನಕುಂಟೆ ಕ್ರಾಸ್‌ನಿಂದ ಎರಡನೇ ಸ್ಟಾಪ್ ಗುಬ್ಲಾಳದಲ್ಲಿ ಮಾಡಲಾಗಿದೆ.