ಶಿವ ಸುತ ಗಣೇಶನ ಮಹಿಮೆ ಮತ್ತು ವಿನಾಯಕನ ಕುರಿತ ಶ್ಲೋಕಗಳು…

 ಗಣೇಶ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬ. ಗಣೇಶ ಧರ್ಮ, ಜಾತಿಗಳನ್ನು ಬಿಟ್ಟು ಎಲ್ಲರೂ  ಪೂಜಿಸುವ ದೇವರು.ಮಕ್ಕಳಿಂದ ಹಿಡಿದು,ದೊಡ್ಡವರು ಇಷ್ಟಪಟ್ಟು ಪೂಜಿಸುವ ದೇವರು ಗಣೇಶ. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯ ದಿನ, ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.ಗಣೇಶ ಶಿವ ಮತ್ತು ಪಾರ್ವತಿಯರ ಮಗ.

ಗಣೇಶನ ಸ್ತೋತ್ರ 

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ !                                                                                                                                    ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ !!

ಗಣೇಶನನ್ನು ಕನ್ನಡದಲ್ಲಿ, ಮಲೆಯಾಳಂ ಮತ್ತು ಮರಾಠಿ ಭಾಷೆಗಳಲ್ಲಿ ವಿನಾಯಕ ಎಂದೂ, ತಮಿಳು ಭಾಷೆಯಲ್ಲಿ ವಿನಾಯಗರ್ಪಿಳ್ಳಾಯರ್ ಎಂದೂ , ತೆಲುಗಿನಲ್ಲಿ ವಿನಾಯಕುಡು ಎಂದು ಕರೆಯಲಾಗುತ್ತದೆ. ಗಣೇಶನನ್ನು ವಿದ್ಯಾಧಿದೇವತೆ ಎಂದು ಪರಿಗಣಿಸಲಾಗುತ್ತದೆ. ಗಣೇಶನ ಹೆಸರಿನೊಡನೆ “ಶ್ರೀ” ಎಂಬ ಅಕ್ಷರದೊಂದಿಗೆ ಸಂಬೋಧಿಸಲಾಗುತ್ತದೆ. ಗಣೇಶನ ಭಕ್ತರನ್ನು ಗಾಣಪತ್ಯರು ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ, ಇತರ ದೇಶಗಳಲ್ಲೂ ಗಣೇಶನನ್ನು ಪೂಜಿಸಲಾಗುತ್ತದೆ. ಭಾರತದ ಅನೇಕ ನಗರಗಳಲ್ಲಿ, ವಿಶೇಷವಾಗಿ ಮುಂಬಯಿಯಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

  • ಶಿವ, ವಿಷ್ಣುಮುಂತಾದ ದೇವತೆಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿ ಪುಜೆಯಲ್ಲಿ ಅಗ್ರಸ್ಥಾನ ಪಡೆದ ದೇವತೆ. ಜನಜೀವನದ ಎಲ್ಲ ಶುಭಕಾರ್ಯಗಳಲ್ಲೂ-ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಇತ್ಯಾದಿ-ಮೊದಲ ಪುಜೆ ಯನ್ನು ಇಂದಿಗೂ ಭಾವುಕರು ಗಣಪತಿಗೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ; ಮಿಕ್ಕ ದೇವತಾ ಕಾರ್ಯಗಳನ್ನು ಮಾಡುವಾಗಲೂ ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪುಜೆ ಗಣಪತಿಗೇ ಮೀಸಲು.
  • ಗಣಪತಿಗೆ ಸಿದ್ಧಿವಿನಾಯಕ, ಗಣೇಶ, ಗಜಮುಖ, ಏಕದಂತ, ವಕ್ರತುಂಡ, ಲಂಬೋದರ, ಹೇರಂಬ, ಮೂಷಕವಾಹನ ಮುಂತಾದ ಹೆಸರುಗಳೂ ಇವೆ. ಈ ಒಂದೊಂದು ಹೆಸರೂ ಗಣಪತಿಯ ಒಂದೊಂದು ಗುಣಲಕ್ಷಣವನ್ನು ಸೂಚಿಸುತ್ತದೆ. ಕರ್ನಾಟಕವಷ್ಟೇ ಅಲ್ಲ, ಭಾರತದಲ್ಲೆಲ್ಲ ಊರ ಕೋಟೆಗಳಲ್ಲಿ, ಗಣಪತಿಯ ಮೂರ್ತಿಯನ್ನು ಇಂದೂ ನೋಡಬಹುದು.
  • ಎಲ್ಲ ದೇವಾಲಯ ಗಳಲ್ಲೂ ಶಿವನ ಪರಿವಾರವರ್ಗದಲ್ಲಿ ಗಣಪತಿಯ ಮೂರ್ತಿಯಿದ್ದೇ ಇರುತ್ತದೆ. ಗಣಪತಿ ವಿಶಿಷ್ಟ ಜಾತಿಗಳ ದೇವತೆಯೆನಿಸದೆ ಹಿಂದೂ ಧರ್ಮವನ್ನು ನಂಬುವ ಎಲ್ಲ ಜಾತಿಪಂಥಗಳೂ ಸಮಾನವಾಗಿ ಪುಜಿಸುವ ದೇವತೆಯಾಗಿ ಈಗಲೂ ಮಹಿಮೆ ಪಡೆದಿದ್ದಾನೆ.

ಗಣೇಶನ ಕೆಲವು ಶ್ಲೋಕಗಳು…

ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ…

ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ

ಅಗಜಾನನ  ಪದ್ಮಾರ್ಕಂ ಗಜಾನನ  ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆಯ್

ಗಜಾನನಂ ಭೂತ ಗಾಣಧಿ ಸೇವಿತಂ

ಕಪಿಥ ಜಂಬೋ ಫಲ ಸಾರ ಭಕ್ಷಿತಂ

ಉಮಾಸುತಂ ಶೋಕ ವಿನಾಶಕಾರಣಂ

ನಮಾಮಿ ವಿಘ್ನೇಶ ಪಾದ ಪಂಕಜಂ..

ಏಕದಂತಂ ಮಹಾಕಾಯಂ ತಪ್ತಕಾಜ್ಞ್ಚಂಸಂನಿಭಮ್
ಲಂಬೋದರಂ ವಿಶಾಲಾಕ್ಷo ವಂದೆಹಂ ಗಣನಾಯಕಂ…

ಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂ
ಸರ್ವ ವಿಘ್ನ ಹರಂ ನಿತ್ಯಂ ವಂದೇ ಶ್ರೀ ಕುಂಜರಾನನಂ…

ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ  ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ…