ಶಾಕಿಂಗ್ ಸುದ್ದಿ!ತಿಂಗಳಿಗೆ ನೀವೇನಾದ್ರೂ ಇದಕ್ಕಿಂತ ಜಾಸ್ತಿ ಹಣ ಡ್ರಾ ಮಾಡಿದ್ರೆ, ನಿಮ್ಮ ಬ್ಯಾಂಕ್ ಅಕೌಂಟ್ ಬಂದ್!ಏಕೆ ಗೊತ್ತಾ?

ಒಂದು ತಿಂಗಳಿಗೆ ನೀವು ನಿಮ್ಮ ಬ್ಯಾಂಕ್ ಖಾತೆಯಿಂದ 4ಕ್ಕಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಿದ್ದಲ್ಲಿ ನಿಮ್ಮ ಖಾತೆ ಬಂದ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿದ್ದ ಜನಧನ್ ಖಾತೆಗಳು ಸೇರಿ, ಹಲವು ಜೀರೋ ಬ್ಯಾಲೆನ್ಸ್ ಖಾತೆಗಳಿಗೆ ತಿಂಗಳಿಗೆ 4 ಬಾರಿ ಮಾತ್ರ ಹಣ ವಿತ್ ಡ್ರಾ ಅವಕಾಶವಿದೆ ಎಂದು ಹೇಳಲಾಗಿದೆ.

ಬ್ಯಾಂಕ್‌ಗಳು ನೀಡುವ ಶೂನ್ಯ ಬ್ಯಾಲೆನ್ಸ್ ಖಾತೆ ಹಾಗೂ ಶೂನ್ಯ ಶುಲ್ಕದ ಕುರಿತು RBI ಹಲವು ಜಾಹೀರಾತುಗಳನ್ನು ನೀಡುತ್ತಿದೆ. ಆದರೆ, ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆದಾರರು ಒಂದು ತಿಂಗಳಿಗೆ 4ಕ್ಕಿಂತ ಹೆಚ್ಚು ಬಾರಿ ಹಣ ವಿಥ್ ಡ್ರಾ ಮಾಡಿದರೆ ನಿಮ್ಮ ಖಾತೆಗಳು ನಿಷ್ಕ್ರಿಯವಾಗುವ ಸಾಧ್ಯತೆ ಇದೆ.

ಜನ ಧನ ಖಾತೆ ಮತ್ತು ಝೀರೋ ಬ್ಯಾಲೆನ್ಸ್ ಖಾತೆಗೆಳಿಗೆ ತಿಂಗಳಿಗೆ 4 ಬಾರಿ ಮಾತ್ರ ಹಣ ಹಿಂಪಡೆದುಕೊಳ್ಳುವ ಅವಕಾಶವಿರುವುದರಿಂದ, ಬ್ಯಾಂಕ್‌ಗಳು ಇವುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವ ಹಾಗಿಲ್ಲ.

ಹೀಗಾಗಿ  ಕೆಲವು ಬ್ಯಾಂಕ್‌ಗಳು ನಾಲ್ಕಕ್ಕಿಂತ ಹೆಚ್ಚು ಬಾರಿ ಟ್ರಾನ್ಸಾಕ್ಷನ್ ಮಾಡುವ ಅಕೌಂಟ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿವೆ. ಜೊತೆಗೆ ಖಾತೆಯಲ್ಲಿ ಕನಿಷ್ಠ ಶುಲ್ಕವಿಲ್ಲದಿದ್ದರೆ ಅವರ ಮೇಲೆ ದಂಡ ವಿಧಿಸಲಾಗುತ್ತದೆ.

ಆರ್ಥಿಕವಾಗಿ ದುರ್ಬಲವಿರುವವರನ್ನು ಹಾಗೂ ದೇಶದ ಹೆಚ್ಚು ಜನಸಂಖ್ಯೆ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಲಿ ಎಂಬ ಉದ್ದೇಶದಿಂದ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಯನ್ನು ಆರಂಭಿಸಲಾಗಿದೆ. ಹೀಗಾಗಿ, ಎಲ್ಲ ಶುಲ್ಕಗಳಿಂದ ಈ ಕೋಟ್ಯಂತರ ಖಾತೆದಾರರಿಗೆ ವಿನಾಯ್ತಿ ನೀಡಲಾಗಿದೆ.

ಬ್ಯಾಂಕ್‌ಗಳು ಕೇವಲ ಎಟಿಎಂನಲ್ಲಿ ಹಣ ವರ್ಗಾವಣೆ ಮಾತ್ರವಲ್ಲ, ಆರ್‌ಟಿಜಿಎಸ್‌, ಎನ್‌ಇಎಫ್‌ಟಿ, ಶಾಖೆಯಲ್ಲಿ ಹಣ ಹಿಂಪಡೆಯುವುದು, ಇಂಟರ್‌ನೆಟ್‌ ಹಣ ವರ್ಗಾವಣೆ, ಇಎಂಐ ಸೇರಿ ಕೇವಲ 4 ಬಾರಿ ಮಾತ್ರ ಅವಕಾಶ ನೀಡಿದೆ.