ಶಿವನಂತೆ ಕಂಡರೂ ಶಿವನಲ್ಲ!ಹಾಗಾದ್ರೆ ಯಾರಿದು???ಇಲ್ಲಿದೆ ರೋಚಕ ಕತೆ ಮುಂದೆ ನೋಡಿ ತಿಳಿಯಿರಿ…

ಒಮ್ಮೆ ದೇವಲೋಕದ ಅಧಿಪತಿಯಾದ ದೇವೇಂದ್ರನಿಗೆ ಪ್ರಥಮ ಪೂಜ್ಯನಾದ ಗಣೇಶನಿಂದ ತಕ್ಷಣ ಕೈಲಾಸಕ್ಕೆ ಬರುವಂತೆ ಸಂದೇಶ ಬರುತ್ತದೆ.ಇದರಿಂದ ಕೊಪೋದ್ರಿಕ್ತನಾದ ದೇವೇಂದ್ರ ತಾನು ಹೋಗದೆ ತನ್ನ ಸಾರಥಿಯಾದ ಮಾಥಲಿಯನ್ನು ಕೈಲಾಸಕ್ಕೆ ಕಳುಹಿಸುತ್ತಾನೆ.ದೇವೇಂದ್ರನ ಸಾರಥಿ ಮಾತಲಿ ಕೈಲಾದದಲ್ಲಿ ಗಣೇಶನ ಮುಂದೆ ದೇವೇಂದ್ರನ ಪರವಾಗಿ ದೇವೆಂದ್ರನು ನನ್ನನ್ನು ಕಳುಹಿಸಿದ್ದಾನೆ ಎಂದು ಗಣೇಶನಲ್ಲಿ ನಿವೇದನೆ ಮಾಡಿಕೊಳ್ಳುತ್ತಾನೆ.

ಇದರಿಂದ ಸ್ವಲ್ಪವೂ ಕೋಪಗೊಳ್ಳದ ಗಣೇಶನು, ಮಾತಲಿಗೆ ಹೇಳುತ್ತಾನೆ. ನಾನು ಈ ವಿಷಯವನ್ನು ದೇವೆಂದ್ರನಲ್ಲಿಯೇ ಹೇಳಬೇಕಾಗಿದೆ.ಹಾಗಾಗಿ ನೀವು ಹೋಗಿ ಸ್ವತಹ ದೇವೆಂದ್ರನೆ ಇಲ್ಲಿಗೆ ಬರುವಂತೆ ಹೇಳಿ ಎಂದು ಮಾತಲಿಗೆ ಆದೇಶ ನೀಡುತ್ತಾನೆ.

ಸ್ವರ್ಗ ಲೋಕಕ್ಕೆ ಹಿಂದುರುಗಿದ ಮಾತಲಿ ಗಣೇಶನ ಆದೇಶವನ್ನು ಇಂದ್ರನಿಗೆ ತಿಳಿಸುತ್ತಾನೆ. ಇದರಿಂದ ಇನ್ನೂ ಕೊಪೋದ್ರಿಕ್ತನಾದ ದೇವೇಂದ್ರ ಈ ವಿಷಯವನ್ನು ನಾನು ಮಹಾದೇವನಲ್ಲಿಯೇ ಚರ್ಚಿಸುತ್ತೇನೆ ಎಂದು ಆವೇಶದಿಂದಲೇ ಕೈಲಾಸದ ಕಡೆ ಹೊರಡಲು ತಯಾರಾಗುತ್ತಾನೆ.ಇದನ್ನು ನೋಡಿದ ದೇವೇಂದ್ರನ ಪತ್ನಿ ಶಚಿದೇವಿ ಪ್ರಥಮ ಪೂಜ್ಯ ಗಣೇಶನ ವಿರುದ್ದ ಹೋಗುವುದು ಉಚಿತವಲ್ಲ ಎಂದು ಹೇಳಿದರೂ ಕೇಳದ ದೇವೇಂದ್ರ ಕೈಲಾಸದ ಕಡೆಗೆ ಹೆಜ್ಜೆ ಹಾಕುತ್ತಾನೆ.

ಇದನ್ನು ಕಂಡು ಶಚಿದೇವಿ ದೇವ ಗುರು ಬೃಹಸ್ಪತಿಯಲ್ಲಿ ದೇವೆಂದ್ರನನ್ನು ತಡೆಯುವಂತೆ ಕೇಳಿಕೊಳ್ಳುತ್ತಾಳೆ.ನಂತರ ಬೃಹಸ್ಪತಿ ದೇವೆಂದ್ರನನ್ನು ಹಿಂಬಾಲಿಸುತ್ತಾನೆ. ಇದೆಲ್ಲವನ್ನು ಅರಿತಿದ್ದ ಮಹಾದೇವ ದೇವೇಂದ್ರನ ಅಹಂಕಾರವನ್ನು ಹಿಳಿಸಲು, ದೇವೇಂದ್ರನ ಪರೀಕ್ಷೆ ಮಾಡುವ ಸಲುವಾಗಿ ಅಘೋರಿಯ ರೂಪ ತಾಳಿ ಕೈಲಾಸದ ದಾರಿಯಲ್ಲಿ ಅಡ್ಡವಾಗಿ ಮಲಗುತ್ತಾನೆ.

ಇತ್ತಕಡೆ ಕೊಪೋದ್ರಿಕ್ತದಿಂದ ಬರುತ್ತಿದ್ದ ದೇವೇಂದ್ರ, ಅಡ್ಡಲಾಗಿ ಮಲಗಿದ್ದ ಅಘೋರಿಯನ್ನು ಹೇ ಅಘೋರಿ ನಾನು ದೇವಲೋಕದ ಅಧಿಪತಿ ಇಂದ್ರ.ನನಗೆ ದಾರಿಯನ್ನು ಬಿಡು ಎಂದು ಗದರುತ್ತಾನೆ.ಇದನ್ನು ನೋಡಿದ ಬೃಹಸ್ಪತಿ ದೇವೇಂದ್ರ ಶಂಕರ ವಾಸ್ ಮಾಡುವ ಕೈಲಾಸದ ದಾರಿ.ಇಲ್ಲಿ ಭಕ್ತರು ಶಿವನ ದರ್ಶನ ಮಾಡಲು ಹೋಗುವಾಗ ಆಯಾಸವಾಗಿ ಹೀಗೆ ಮಲಗುವುದು ಸಾಮಾನ್ಯ.ನೀನು ಅವರನ್ನು ಎಬ್ಬಿಸುವುದು ಬೇಡ. ನೋಡು ಆ ಕಡೆ ಹೋಗಲು ನಮಗೆ ದಾರಿಯಿದೆ ಹೋಗೋಣ ಬಾ ಎಂದರೂ ಕೇಳದ ಅಹಂಕಾರಿ ದೇವೇಂದ್ರ ಆ ಅಘೋರಿಯನ್ನು ತನ್ನ ಕಟೋರ ಮಾತುಗಳಿಂದ ನಿಂದಿಸುತ್ತಾನೆ.

ಆದರೂ ಆ ಅಘೋರ ದಾರಿ ಬಿಡುವುದಿಲ್ಲ.ಆಗ ಇನ್ನಷ್ಟೂ ಕೋಪಗೊಂಡ ಇಂದ್ರ ತನ್ನ ವಾಹನವಾದ ಹೈರಾವತವನ್ನು ಕರೆದು ಆ ಅಘೋರಿಯನ್ನು ದಾರಿಯಿಂದ ಎತ್ತಿ ಬಿಸಾಡುವಂತೆ ಆದೇಶ ನೀಡುತ್ತಾನೆ. ತನ್ನ ಮಾಲಿಕನ ಆದೇಶಕ್ಕೆ ಅನುಸಾರವಾಗಿ ಅದು ಆ ಅಗೊರಿಯನ್ನು ಎತ್ತಿ ಬಿಸಾಡಲು ಆ ಅಘೋರಿಯತ್ತ ಹೋಗುತ್ತದೆ.ಅದು ಹತ್ತಿರ ಹೋಗುತ್ತಿದ್ದಂತೆ ಅದು ಅಘೋರಿಯಲ್ಲ ಭಗವಾನ್ ಮಹಾದೇವನು ಎಂದರಿತು ಕಣ್ಣೀರು ಸುರಿಸಿ ಪಕ್ಕಕ್ಕೆ ಹೋಗುತ್ತದೆ.

ಇದರಿಂದ ಮತ್ತಷ್ಟೂ ಕುಪಿತನಾದ ದೇವೇಂದ್ರ ಹೈರಾವತ ಹೊಡೆಯಲು ಮುಂದಾಗುತ್ತಾನೆ.ತಕ್ಷಣವೇ ಅದನ್ನು ತಡೆದ ಅಘೋರಿ ಮಲೆ ತನ್ನ ಆಯುಧವಾದ ವಜ್ರಾಯುಧವನ್ನು ಆ ಅಘೋರಿಯ ಮೇಲೆ ಪ್ರಯೋಗಿಸುತ್ತಾನೆ.ಇದರಿಂದ ಕುಪಿತನಾದ ಅಘೋರಿ ರೂಪಿ ಶಿವ ತನ್ನ ನಿಜ ರೂಪದಲ್ಲಿ ರುದ್ರ ಭಯನ್ಕರನಾಗಿ ಪ್ರಕಟವಾಗುತ್ತಾನೆ. ಇದನ್ನು ಕಂಡ ದೇವೇಂದ್ರ ಇವನು ಅಘೋರಿಯಲ್ಲ ಮಹಾದೇವ ಎಂದರಿತು ಅದುರಿ ಅಲ್ಲಾಡಿ ಹೋಗುತ್ತಾನೆ.

ತಾನು ಪ್ರಯೋಗಿಸಿದ ವಾಜ್ರಾಯುಧವನ್ನು ಹಿಂದಕ್ಕೆ ತೆಗೆದುಕೊಂಡು ಶಿವನಲ್ಲಿ ಕ್ಷಮೆ ಕೇಳುತ್ತಾನೆ. ಇಂದ್ರನ ಅಹಂಕಾರಕ್ಕೆ ಕೋಪಗೊಂಡಿದ್ದ ಶಿವ ಇಂದ್ರನನ್ನೇ ಸರ್ವನಾಶ ಮಾಡಬೇಕೆಂದು ತನ್ನ ಮೂರನೆ ಕಣ್ಣನ್ನು ತೆಗೆದು ಇಂದ್ರನ ಮೇಲೆ ಬೆಂಕಿ ಉಂಡೆಯನ್ನು ಬಿಡುತ್ತಾನೆ.ಇದರಿಂದ ಹೆದರಿದ ಇಂದ್ರ ಅಲ್ಲಿಂದ ಪಲಾಯನವಾಗುತ್ತಾನೆ. ಆದರೂ ಶಿವನ ಮೂರನೆ ಕಣ್ಣಿಂದ ಬಂದ ಆ ಬೆಂಕಿ ಉಂಡೆ ಇಂದ್ರನನ್ನು ಬಿಡದೆ ಹಿಂಬಾಲಿಸುತ್ತದೆ.

ಆಗ ಬ್ರಹ್ಮ ಮತ್ತು ನಾರಾಯಣನರು ಶಿವನಲ್ಲಿ ಕೇಳಿಕೊಳ್ಳುತ್ತಾರೆ.ಮತ್ತೆ ಇಂದ್ರನು ಇದರಿಂದ ತಪ್ಪಿಸಿಕೊಳ್ಳಲಾರದೆ ಮತ್ತೆ ಶಿವನಲ್ಲಿಗೆ ಬಂದು ರಕ್ಷಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಶಿವನ ಕಣ್ಣಿಂದ ಬಂದ ಬೆಂಕಿಯುಂಡೆ ಹಾಗೆಯೇ ಉಳಿಯುತ್ತದೆ.ಕಡೆಗೆ ಬ್ರಹ್ಮನು ಅದನ್ನು ಸಮುದ್ರದಲ್ಲಿ ಮುಳುಗಿಸಿದಾಗ ಅದು ಒಂದು ಶಿಶುವಿನ ರೂಪ ತಾಳುತ್ತದೆ.

ಬ್ರಹ್ಮನು ಪ್ರೀತಿಯಿಂದ ಶಿಶುವನ್ನು ನೇವರಿಸುತ್ತಿದ್ದಾಗ ಅದು ಬ್ರಹ್ಮನ ಗಡ್ದವನ್ನೇಹಿಡಿದು ಎಳೆಯುತ್ತದೆ.ಆಗ ಬ್ರಹ್ಮನು ನೋವಿನಿಂದ ಎರಡು ಹನಿ ಕಣ್ಣೀರು ಸುರಿಸುತ್ತಾನೆ.ಮತ್ತು ಅದು ಆ ಮಗುವಿನ ತಲೆಯ ಮೇಲೆ ಬೀಳುತ್ತದೆ. ಇದರಿಂದಾಗಿ ಆ ಮಗುವಿಗೆ ಜಲಂಧರ ಎನ್ನುವ ಹೆಸರಾಯಿತು.