ಪಂಚಮುಖಿ ಆಂಜನೇಯನ ಹಿಂದೆ ಇದೆ ಅದ್ಭುತ ರೋಚಕ ಕತೆ…

ರಾಮಾಯಣದ ಯದ್ಧದಲ್ಲಿ ರಾಮ ರಾವಣರು ಯುದ್ದ ಮಾಡುತ್ತಿರುವಾಗ, ರಾವಣನು ಪಾತಾಳಲೋಕದ ದೊರೆಯಾದ ಅಹಿರಾವಣನ ಸಹಾಯ ಪಡೆಯುತ್ತಾನೆ
ಹನುಮಂತನು ರಾಮ ಲಕ್ಷ್ಮಣರ ರಕ್ಷಣೆಗೆ ನಿಲ್ಲುತ್ತಾನೆ.

ಹನುಮಂತನು ರಾಮ ಲಕ್ಷ್ಮಣರನ್ನು ರಕ್ಷಿಸಲು ಬೃಹತ್ ಆಕಾರ ತಳೆಯುತ್ತಾನೆ, ಅಹಿರಾವಣನು ರಾವಣನ ತಮ್ಮನಾದ ವಿಭೀಷಣನ ವೇಷ ತಳೆದು ರಾಮ ಲಕ್ಷ್ಮಣರನ್ನು ಅಪಹರಿಸಿ ಪಾತಾಳಲೋಕಕ್ಕೆ ಕರೆದೊಯ್ಯುತ್ತಾನೆ.

ಹನುಮಂತನು ಅವರನ್ನು ಹುಡುಕಿಕೊಂಡು ಪಾತಾಳಲೋಕಕ್ಕೆ ಹೋದನು.ಅಲ್ಲಿ ಅವನಿಗೆ ಐದು ದಿಕ್ಕುಗಳಲ್ಲಿ ಇಟ್ಟಿರುವ ಐದು ದೀಪಗಳು ಗೋಚರಿಸಿದವು.ಅಹಿರಾವಣನ ಪ್ರಾಣವು ಆ ಐದು ದೀಪಗಳಲ್ಲಿ ಇದ್ದು ಐದು ದೀಪಗಳನ್ನು ಒಂದೇ ಸಾರಿ ಆರಿಸಿದಾಗ ಮಾತ್ರ ಅವನ‌ಪ್ರಾಣ ಹೋಗುವುದೆಂದು ತಿಳಿಯಿತು.

ಅಹಿರಾವಣನ್ನು ಸಂಹರಿಸಲು ಪಂಚಮುಖಿ ಅವತಾರ ತಾಳಿದನು .ಐದು ಮುಖಗಳಲ್ಲಿ ಉಳಿದ ನಾಲ್ಕು ಮುಖಗಳು ಯಾವುವೆಂದರೆ.ಹಯಗ್ರೀವ, ನರಸಿಂಹ. ಗರುಡ ಹಾಗೂ ವರಾಹ.

ತನ್ನ ಐದು ಮುಖಗಳಿಂದ ಒಟ್ಟಿಗೆ ಐದು ದಿಕ್ಕುಗಳಿಗೂ ಗಾಳಿಯನ್ನು ಊದಿ ಅಲ್ಲಿದ್ದ ಐದು ದೀಪಗಳನ್ನು ಒಟ್ಟಿಗೆ ಆರಿಸಿದನು, ಅಹಿರಾವಣನ ಸಂಹಾರ ಮಾಡಿದನು.ಕಂಬರಾಮಾಯಣದಲ್ಲಿ ಸುಂದರವಾಗಿ ಹೇಳಲಾಗಿದೆ

ಪಂಚಭೂತಗಳಲ್ಲಿ ಒಬ್ಬನಾದ ವಾಯುವಿನ ಪುತ್ರ ಹನುಮಂತ,ಪಂಚಭೂತಗಳಲ್ಲಿ ಒಂದಾದ ಭೂಮಿಯ ಮಗಳು ಸೀತೆಯನ್ನು ಭೇಟಿಯಾಗಲು,
ಪಂಚಭೂತಗಳಲ್ಲಿ ಒಂದಾದ ಆಕಾಶದ ಮೂಲಕ ಪಂಚಭೂತಗಳಲ್ಲಿ ಒಂದಾದ ಸಮುದ್ರವನ್ನು,ದಾಟಿ ಪಂಚಭೂತಗಳಲ್ಲಿ ಒಂದಾದ ಅಗ್ನಿಯ ಮೂಲಕ ಲಂಕೆಯ ದಹನ ಮಾಡಿದನು