ನೀವು ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ದಿನಾಲು ನಿಂಬೆ ಜ್ಯೂಸು ಕುಡಿಯುತ್ತೀರಾ!ಹಾಗಾದ್ರೆ ತಪ್ಪದೆ ಇದನ್ನ ನೋಡಿ…

ಈಗಿನ ಬದಲಾಗುತ್ತಿರುವ ಜೀವನಶೈಲಿ ನಮ್ಮ ದೇಹದ ತೂಕವನ್ನು ಏರಿಸ್ತಿದೆ. ತೂಕ ನಿಯಂತ್ರಣಕ್ಕೆ ವ್ಯಾಯಾಮ, ಯೋಗ, ಜಿಮ್ ಜೊತೆ ಆಹಾರದಲ್ಲಿ ನಿಯಂತ್ರಣ ಬಹಳ ಮುಖ್ಯ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಸೇವನೆ ಮಾಡಿದರೆ ತೂಕ ಕಡಿಮೆಯಾಗುತ್ತದೆ ಎನ್ನುವುದನ್ನು ಕೇಳಿರುತ್ತೇವೆ. ಅನೇಕರು ಇದರ ಪಾಲನೆ ಕೂಡ ಮಾಡುತ್ತಿದ್ದಾರೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬುದು ಅನೇಕರಿಗೆ ತಿಳಿದಿಲ್ಲ. ನಿಂಬೆ ನೀರನ್ನು ಅತಿ ಹೆಚ್ಚು ಸೇವನೆ ಮಾಡುವುದರಿಂದ ದೇಹದಲ್ಲಿ ವಿಟಮಿನ್ ಸಿ ಹೆಚ್ಚಾಗುತ್ತದೆ. ಇದರಿಂದ ಎಸಿಡಿಟಿ ಸಮಸ್ಯೆ ಕಾಡುತ್ತದೆ.

ನೀವು ಪ್ರತಿದಿನ ನಿಂಬೆ ನೀರನ್ನು ಸೇವನೆ ಮಾಡುತ್ತಿದ್ದರೆ ನೆನಪಿರಲಿ, ದಿನದಲ್ಲಿ ಎರಡು ಕಪ್ ಗಿಂತ ಹೆಚ್ಚು ನಿಂಬೆ ನೀರಿನ ಸೇವನೆ ಮಾಡಬೇಡಿ. ನಿಂಬೆ ಹಣ್ಣಿನಲ್ಲಿ ಸಿಟ್ರಸ್ ಆಮ್ಲವಿರುತ್ತದೆ. ಅದು ಹಲ್ಲುಗಳಿಗೆ ಹಾನಿಯುಂಟು ಮಾಡುತ್ತದೆ. ನಿಂಬೆ ನೀರು ಸೇವನೆ ಮಾಡುವಾಗ ಸ್ಟ್ರಾ ಬಳಸುವುದು ಒಳ್ಳೆಯದು. ನಿಂಬೆ ನೀರನ್ನು ಅತಿ ಹೆಚ್ಚು ಸೇವನೆ ಮಾಡುವುದರಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಂಬು ನೀರಿನಲ್ಲಿ ಆಕ್ಸ್ಲೆಟ್ ಅಂಶ ಹೆಚ್ಚಿರುತ್ತದೆ.

ಅದು ದೇಹದಲ್ಲಿ ಕ್ರಿಸ್ಟಲ್ ಉತ್ಪಾದನೆಗೆ ಕಾರಣವಾಗುತ್ತದೆ. ಇದರಿಂದ ಕಲ್ಲು ಬೆಳೆಯುವ ಸಾಧ್ಯತೆ ಹೆಚ್ಚಿರುತ್ತದೆ. ಎಸಿಡಿಟಿ ಸಮಸ್ಯೆಯಿರುವವರು ನಿಂಬು ನೀರಿನ ಸೇವನೆ ಮಾಡದಿರುವುದು ಒಳ್ಳೆಯದು. ಊಟದ ನಂತರ ಜೀರ್ಣಕ್ರಿಯೆ ಸರಿಯಾಗಿ ಆಗಲಿ ಎನ್ನುವ ಕಾರಣಕ್ಕೆ ಅನೇಕರು ನಿಂಬೆ ನೀರಿನ ಸೇವನೆ ಮಾಡ್ತಾರೆ. ಆದ್ರೆ ಇದು ಹೊಟ್ಟೆ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಆಹಾರದ ಜೊತೆ ನಿಂಬೆರಸ ಬೆರೆಸಿ ಸೇವನೆ ಮಾಡುವುದು ಒಳ್ಳೆಯದು.