ಕೋಳಿಗಳಲ್ಲಿ ನಿಫಾ ವೈರಸ್?ಎಷ್ಟು ಸತ್ಯ?ಎಷ್ಟು ಸುಳ್ಳು?ಹೆಚ್ಚಿನ ಮಾಹಿತಿಗೆ ಮುಂದೆ ನೋಡಿ…

ನಿಫಾ ವೈರಸ್‌ ಆತಂಕ ಎಲ್ಲೆಡೆ ಕಾಡಿದೆ. ಜನರು ಹಣ್ಣುಗಳನ್ನು ಕೊಂಡು ತಿನ್ನಲು ಭಯಪಡುತ್ತಿದ್ದಾರೆ. ಆದರೆ ವೈದ್ಯರು ಈ ಸಾಂಕ್ರಾಮಿಕ ರೋಗದ ಬಗ್ಗೆ ತುಂಬಾ ಆತಂಕ ಪಡುವ ಅಗತ್ಯವಿಲ್ಲ, ಆಹಾರವನ್ನು ಸರಿಯಾಗಿ ಬೇಯಿಸಿ ತಿನ್ನಿ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಸಲಹೆ ನೀಡಿದ್ದಾರೆ.

ಪ್ರಾಣಿಗಳಿಂದ ಮನುಷ್ಯರಿಗೆ, ಮನುಷ್ಯರಿಂದ ಪ್ರಾಣಿಗಳಿಗೆ ಹರಡುವ ಸಾಂಕ್ರಾಮಿಕ ರೋಗವಾಗಿರುವ ನಿಫಾ ವೈರಸ್’ಗೆ  ಕೇರಳದಲ್ಲಿ ಈಗಾಗಲೇ ಕೆಲವು ಜನರ ಬಲಿಯಾಗಿದೆ.

ಆದರೆ ಈಗ ನಿಫಾ ವೈರಸ್ ಬ್ರಾಯ್ಲರ್ ಕೋಳಿಗಳ ಮೂಲಕ ಹರಡುತ್ತಿದೆ ಎಂಬ ನಕಲಿ ಸಂದೇಶವೊಂದು ವಾಟ್ಸ್ಆ್ಯಪ್‍ನಲ್ಲಿ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೋಯಿಕ್ಕೋಡ್ ಡಿಎಂಒ ಅವರ ನಕಲಿ ಮುದ್ರೆ ಬಳಸಿರುವ ಪತ್ರವೊಂದರಲ್ಲಿ ಬ್ರಾಯ್ಲರ್ ಕೋಳಿಗಳಿಂದ..ನಿಫಾ ವೈರಸ್ ಬ್ರಾಯ್ಲರ್ ಕೋಳಿಗಳ ಮೂಲಕ ಹರಡುತ್ತಿದೆ ಎಂಬ ನಕಲಿ ಸಂದೇಶವೊಂದು ವಾಟ್ಸ್ಆ್ಯಪ್‍ನಲ್ಲಿ ಹರಿದಾಡುತ್ತಿದೆ.

ಕೋಯಿಕ್ಕೋಡ್ ಡಿಎಂಒ ಅವರ ನಕಲಿ ಮುದ್ರೆ ಬಳಸಿರುವ ಪತ್ರವೊಂದರಲ್ಲಿ ಬ್ರಾಯ್ಲರ್ ಕೋಳಿಗಳಿಂದ ನಿಫಾ ಹರಡುತ್ತಿದೆ ಎಂಬ ಸಂದೇಶ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಇದು ಕೇವಲ ವದಂತಿ ಎಂದು ಹೇಳಲಾಗುತ್ತಿದೆ..

ಹಾಗಾಗಿ ಯಾವುದೇ ವಿಷಯದ ಸತ್ಯವನ್ನು ಹರಿಯದೇ, ಸುಳ್ಳು ವದಂತಿ ಹಬ್ಬಿಸಿ, ಜನರಲ್ಲಿ ಭೀತಿ ಹುಟ್ಟಿಸುವುದು ಕಾನೂನಿನ ಪ್ರಕಾರ ಅಪರಾಧ. ಆದ್ದರಿಂದ ಯಾವುದೇ ಸಂದೇಶದ ಸತ್ಯ ಅಸತ್ಯಗಳನ್ನು ಹರಿಯದೇ ಸಂದೇಶ ರವಾನೆ ಮಾಡಬೇಡಿ.