ಕನ್ನಡದ ಟಾಪ್ 5 ಶ್ರೀಮಂತ ಸಿರಿಯಲ್ ನಟಿಯರು ಮತ್ತು ಅವರ ಸಂಭಾವನೆ ಬಗ್ಗೆ ಕೇಳಿದ್ರೆ ನೀವ್ ಶಾಕ್ ಆಗ್ತೀರಾ..!

ಮನೆಯ ಟಿವಿಗಳಲ್ಲಿ ಧಾರವಾಹಿಗಳದ್ದೇ ಖಾರು ಬಾರು.ಮನೆಯಲ್ಲಿರುವ ನಮ್ಮ ಮಹಿಳಾ ಮಣಿಗಳು ಟಿವಿ ಮುಂದೆ ಕೂತ್ರೆ, ಯಾವುದೇ ಸಿರಿಯಲ್ ಬರಲಿ ನೋಡದೆ ಬಿಡುವುದಿಲ್ಲ.ಹಾಗಿದೆ ಧಾರಾವಾಹಿಗಳ ಹವಾ ಇಷ್ಟಕ್ಕೆ ನಿಲ್ಲದೆ ಧಾರವಾಹಿ ನಾಯಕಿ ಪಾತ್ರದಾರಿಗಳದೆ ಫ್ಯಾನ್ಸ್ ಕ್ಲಬ್’ಗಳಾಗುವ ಮಟ್ಟಿಗೆ ಹೋಗಿದೆ.ಹಾಗಾದ್ರೆ ಆ ನಾಯಕಿಯರು ಪಡೆಯುವ ಸಂಬಾವನೆ ಎಷ್ಟು…ಅವರ ಶ್ರೀಮಂತಿಕೆ ಹೇಗಿದೆ ಮಾಹಿತಿಗೆ ಮುಂದೆ ಓದಿ…

ಕನ್ನಡದ ಟಾಪ್ 5 ಶ್ರೀಮಂತ ಸಿರಿಯಲ್ ನಟಿಯರು…

ರಾಜೇಶ್ವರಿ (ಅಗ್ನಿ ಸಾಕ್ಷಿ)

ಇವರು ಜನಪ್ರಿಯ ಧಾರಾವಾಹಿ ‘ಅಗ್ನಿಸಾಕ್ಷಿ’ಯ ವಿಲನ್ ಚಂದ್ರಿಕಾ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.  ರಾಜೇಶ್ವರಿ    ಮೂಲತಃ ಕೊಡಗಿನವರಾಗಿದ್ದು, ಉದಯ ಟಿವಿಯಲ್ಲಿ ಪ್ರಸಾರವಾದ ‘ಪ್ರೇಮ ಪಿಶಾಚಿಗಳು’ ಸೀರಿಯಲ್ಲಿನ ಮೂಲಕ ಕಿರುತೆರೆಗೆ ಕಾಲಿಟ್ಟರು. ಗೆಳತಿಯೊಂದಿಗೆ ಆಡಿಷನ್‌ಗೆ ಹೋದಾಗ ಆಕಸ್ಮಿಕವಾಗಿ ಸಿಕ್ಕ ಈ ಅವಕಾಶದಲ್ಲಿ ಭರ್ಜರಿಯಾಗಿ ಮಿಂಚಿದರು ರಾಜೇಶ್ವರಿ. ಅಲ್ಲಿಂದ ‘ಜೋಕಾಲಿ’ ಧಾರಾವಾಹಿಯಲ್ಲಿ ಅಭಿನಯಿಸಿದರು.

ಇದು ಮುಕ್ತಾಯವಾದ ನಂತರ ಮುಂದೇನು ಎನ್ನುವ ಹೊತ್ತಿಗೆ ‘ಅಗ್ನಿ ಸಾಕ್ಷಿ’ಯ ಚಂದ್ರಿಕಾ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬಂದರು.ಇವರು ಸುಮಾರು ಮೂರು ಕೋಟಿಗೂ ಹೆಚ್ಚು ವ್ಯವಹಾರ ಹೊಂದಿದ್ದಾರೆ.

ರಂಜನಿ ರಾಘವನ್ (ಪುಟ್ಟಗೌರಿ)

ರಂಜನಿ ರಾಘವನ್‌ ಎಂದರೆ ನಿಮಗೆ ಒಮ್ಮೆಲೇ ಗೊತ್ತಾಗಲಿಕ್ಕಿಲ್ಲ. ಬದಲಾಗಿ ಪುಟ್ಟಗೌರಿ ಮದುವೆಯ ಗೌರಿ ಎಂದರೆ ನಿಮಗೆ ಬೇಗನೇ ಗೊತ್ತಾಗುತ್ತದೆ. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿಯಾಗಿ ಮನೆಮಂದಿಯ ಮನಗೆದ್ದಿರುವ ರಂಜನಿ ರಾಘವನ್‌ ಹಿರಿತೆರೆಗೂ ಕಾಲಿಟ್ಟಿದ್ದಾರೆ.
ಇವರು ಸುಮಾರು ಎರಡು ಕೋಟಿಗೂ ಹೆಚ್ಚು ವ್ಯವಹಾರ ಹೊಂದಿದ್ದಾರೆ.

ನೇಹಾಗೌಡ (ಲಕ್ಷಿ ಬಾರಮ್ಮ)

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರವಾಹಿಯ ಗೊಂಬೆ ಎಂಬ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ ನೇಹಾಗೌಡ. ಜನಪ್ರಿಯ ಲಕ್ಷಿ ಬಾರಮ್ಮ ನಾಯಕಿ ಪಾತ್ರದಾರಿಯಾಗಿ ಕಾಣಿಸಿಕೊಂಡಿರುವ ನೇಹಾ ಗೌಡರವರ ಆಸ್ತಿಯ ಬಗ್ಗೆ ಹೇಳಬೇಕಂದ್ರೆ, ಇವರು ಸರಿಸುಮಾರು ನಾಲ್ಕು ಕೋಟಿಗೂ ಹೆಚ್ಚು ಆಸ್ತಿ ಇದೆ ಎಂಬ ಮಾಹಿತಿ ಇದೆ.

ನಂದಿನಿ (ನಾ ನಿನ್ನ ಬಿಡಲಾರೆ)

ಈಗ ತಾನೇ ದಾರವಾಹಿ ಲೋಕದಲ್ಲಿ ಎಂಟ್ರಿ ಕೊಟ್ಟಿರುವ ನಾ ನಿನ್ನ ಬಿಡಲಾರೆ ಸೀರಿಯಲ್ ನಟಿ, ಶ್ರೀಮಂತ ಕುಟುಂಬದಿಂದ  ಬಂದ ಹುಡುಗಿ, ಈಗ ತಾನೇ ಕಿರುತೆರೆಗೆ ಎಂಟರಿ ಕೊಟ್ಟು ತನ್ನ ಅಭಿನಯದಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿ ಎಲ್ಲಾ ಸೇರಿ ಸುಮಾರು ಎರಡು ಕೋಟಿ ವ್ಯವಹಾರ ಹೊಂದಿದ್ದಾರೆ.

ವೈಷ್ಣವಿ ಗೌಡ (ಅಗ್ನಿ ಸಾಕ್ಷಿ)

ಅಗ್ನಿಸಾಕ್ಷಿ ಸೀರಿಯಲ್ ಲೀಡಿಂಗ್ ರೋಲ್’ನಲ್ಲಿ ನಟಿಸಿ ಜನರ ಮನ ಗೆದ್ದಿರುವ  ವೈಷ್ಣವಿ ಗೌಡ. ಇವರು ಕೂಡ ಶ್ರೀಮಂತ ಕುಟುಂಬದಿಂದ ಬಂದಿದ್ದು 3 ಕೋಟಿ ವ್ಯವಹಾರ ಹೊಂದಿರ ಬಹುದು ಎಂದು ಹೇಳಲಾಗಿದೆ.

Leave a Reply