ಈ WWE ಸೂಪರ್‌ಸ್ಟಾರ್‌ಗಳ ಪಾರ್ಟ್-ಟೈಂ ಕೆಲಸಗಳ ಬಗ್ಗೆ ನಿಮ್ಗೆ ಗೊತ್ತಾ..?ಇದನ್ನು ಒಮ್ಮೆ ಓದಿ..

ಯುವಜನರಲ್ಲಿ ತುಂಬ ಜನಪ್ರಿಯವಾಗಿರುವ ಡಬ್ಲ್ಯೂಡಬ್ಲ್ಯೂಇದಂತಹ ಮನೋರಂಜನಾ ಕ್ರೀಡೆಗಳು ಕ್ರೀಡಾಪಟುಗಳಿಂದ ಅತ್ಯಂತ ಹೆಚ್ಚಿನ ಕ್ಷಮತೆಯನ್ನು ಕೇಳುತ್ತವೆ. ಈ ರಂಗದಲ್ಲಿ ಸೂಪರ್‌ಸ್ಟಾರ್‌ಗಳೆನಿಸಿಕೊಂಡವರು ದಿನದಿನವೂ ತಮ್ಮ ಚಾಣಾಕ್ಷತೆ, ಚುರುಕುತನವನ್ನು ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.”

ಇದೇ ಕಾರಣದಿಂದ ಹಲವಾರು ಡಬ್ಲ್ಯೂಡಬ್ಲ್ಯೂಇ ಸೂಪರ್‌ಸ್ಟಾರ್‌ಗಳು ಈ ಕಾದಾಟದಿಂದ ಹೊರಗಿನ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ.

ಇಂತಹ ಕೆಲವು ಜಟ್ಟಿಗಳ ಪಾರ್ಟ್-ಟೈಂ ಕೆಲಸಗಳ ಕುರಿತು ಮಾಹಿತಿ ಇಲ್ಲಿದೆ ಓದಿ..

ಡಾಲ್ಫ್ ಝಿಗ್ಲರ್- ಕಾಮೆಡಿಯನ್:-

ಝಿಗ್ಲರ್ ಕೆಫೆಗಳಲ್ಲಿ ಕಾಮೆಡಿಯನ್ ಆಗಿ ಕಾಣಿಸಿಕೊಳ್ಳುವುದನ್ನು ತನ್ನ ಪಾರ್ಟ್ ಟೈಮ್ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಹಾಸ್ಯ ಅವರಿಗೆ ಜನ್ಮದತ್ತವಾಗಿ ಒಲಿದಿದ್ದು,ಅದನ್ನೇ ರಿಂಗ್‌ನ ಹೊರಗೆ ಬಳಸಿಕೊಂಡಿದ್ದಾರೆ. ಮಾಜಿ ಇಂಟರ್‌ಕಾಂಟಿನೆಂಟಲ್ ಚಾಂಪಿಯನ್ ಆಗಿರುವ ಅವರು ಡಬ್ಲ್ಯೂಡಬ್ಲ್ಯೂಇ ಟೂರ್‌ಗಳಲ್ಲಿ ಸ್ಥಳೀಯ ಕೆಫೆಗಳಲ್ಲಿ ಕಾಮೆಡಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೈಕ್ ಫಾಲೀ:-

ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಶಿಪ್‌ನ ಖ್ಯಾತ ಕ್ರೀಡಾಪಟು ಮೈಕ್ ಫಾಲೀ ಸಾಹಿತಿಯೂ ಆಗಿದ್ದಾರೆ ಮತ್ತು ಅವರ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತವೆ ಎನ್ನುವುದು ನಿಮಗೆ ಗೊತ್ತೇ? ಈ ನಾಲ್ಕು ಬಾರಿಯ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಕಣದಲ್ಲಿ ಗುದ್ದಾಟದ ನಡುವೆಯೇ ತನ್ನ ಬರೆಯುವ ಗೀಳನ್ನು ಬಿಟ್ಟಿಲ್ಲ. ಮಕ್ಕಳ ಪುಸ್ತಕಗಳು,ಕಾದಂಬರಿಗಳು ಮತ್ತು ಸ್ಮರಣ ಕಥನಗಳು ಸೇರಿದಂತೆ ಅವರ ಹಲವಾರು ಕೃತಿಗಳು ಪ್ರಕಟಗೊಂಡಿವೆ.

ಮ್ಯಾಚೋ ಮ್ಯಾನ್’:-

ಈ ‘ಮ್ಯಾಚೋ ಮ್ಯಾನ್’ ತನ್ನ 30 ವರ್ಷಗಳ ರೆಸ್ಲಿಂಗ್ ವೃತ್ತಿಜೀವನದಲ್ಲಿ 29 ಚಾಂಪಿಯನ್ ಶಿಪ್‌ಗಳನ್ನು ಗೆದ್ದಿದ್ದಾರೆ. ಸಂಗೀತ ಅವರ ಹವ್ಯಾಸವಾಗಿದ್ದು,ತನ್ನ ಹಲವಾರು ಹಾಡುಗಳ ಆಡಿಯೋಗಳನ್ನು ಬಿಡುಗಡೆಗೊಳಿಸಿದ್ದಾರೆ.

ಅಂಡರ್‌ಟೇಕರ್- ರಿಯಲ್ ಎಸ್ಟೇಟ್ ಉದ್ಯಮಿ:-

ಡಬ್ಲ್ಯೂಡಬ್ಲ್ಯೂಇ ಇತಿಹಾಸದಲ್ಲಿ ಅತ್ಯಂತ ಖ್ಯಾತ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ಮಾರ್ಕ್ ಕಾಲವೇ ಅಲಿಯಾಸ್ ಅಂಡರ್‌ಟೇಕರ್ ವರ್ಷಕ್ಕೆ ಒಮ್ಮೆ ರೆಸ್ಲಿಂಗ್ ಕಣದಲ್ಲಿ ಕಾಣಿಸಿಕೊಂಡರೂ ಅದು ಭಾರೀ ಮಹತ್ವ ಪಡೆಯುತ್ತದೆ. ಕಣದಲ್ಲಿದ್ದುಕೊಂಡೇ ತನ್ನದೇ ಆದ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತನ್ನ ಉದ್ಯಮ ಪಾಲುದಾರ ಸ್ಕಾಟ್ ಎವರ್‌ಹಾರ್ಟ್ ಜೊತೆ ಸೇರಿ ಹಲವಾರು ಕಟ್ಟಡಗಳನ್ನು ನಿರ್ಮಿಸಿದ್ದಾರೆ