ಇಲ್ಲಿ 1 ಲೀಟರ್ ಪೆಟ್ರೋಲ್ ಅಥವಾ ಡಿಸೇಲ್ ನಿಮಗೆ ಉಚಿತವಾಗಿ ದೊರೆಯುತ್ತದೆ!ಇದು ನೂರಕ್ಕೆ ನೂರರಷ್ಟು ಸತ್ಯ!

ಮೊನ್ನೆ ತಾನೇ ಪೆಟ್ರೋಲ್ ಮತ್ತು ಡಿಸೇಲ್ ಗಳ ಬೆಲೆ ಗಗನಕ್ಕೇರಿದ್ದರಿಂದ ಭಾರತ ಬಂದ್ ಮಾಡಲಾಗಿತ್ತು.ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಮತ್ತು  ಡಿಸೇಲ್ ಗಳ ರೇಟಿನಿಂದಾಗಿ ಸಾರಿಗೆ ಸೇರಿದಂತೆ ದಿನ ನಿತ್ಯದ ವಸ್ತುಗಳಲ್ಲಿ ಬೆಲೆ ಏರಿಕೆ ಜಾಸ್ತಿಯಾಗುತ್ತಿದೆ. ಸಾಮಾನ್ಯ ಮನುಷ್ಯನು ಜೀವನ ನಡೆಸಲು ಕಷ್ಟವಾಗುತ್ತಿದೆ.

ಇಂತಹ ಸಮಯದಲ್ಲಿ ತಮಿಳುನಾಡಿನ ಕೃಷ್ಣಗಿರಿಯ ಪೆಟ್ರೋಲ್ ಬ್ಯಾಂಕ್ ಒಂದರಲ್ಲಿ ಉಚಿತವಾಗಿ ಪೆಟ್ರೋಲ್ ಮತ್ತು ಡಿಸೇಲ್ ನೀಡಲಾಗುತ್ತಿದೆ.ಇದು ತಮಿಳುನಾಡಿನ ಯಾವುದೇ ಯೋಜನೆಯ ಭಾಗವಲ್ಲ. ಬದಲಾಗಿ ಕ್ಯಾಶ್ ಲೆಸ್ ಸೇವೆಯನ್ನು ಉತ್ತೇಜಿಸಲು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆ ತೈಲ ಬೆಲೆ ಏರಿಕೆಯ ಈ ಸಮಯದಲ್ಲಿ ಇಂತಹ ವಿನೂತನ ಪ್ರಯೋಗ ಮಾಡುತ್ತಿದೆ.

ಹಾಗಾಗಿ ತಮಿಳುನಾಡಿನ ಕೃಷ್ಣಗಿರಿಯ ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್ ಕೆಲವು ಷರತ್ತುಗಳ ಅನ್ವಯ ಉಚಿತವಾಗಿ ಒಂದು ಲೀಟರ್ ಪೆಟ್ರೋಲ್ ಅಥವಾ ಡಿಸೇಲ್ ನೀಡುತ್ತಿದೆ.

ಹಾಗಾದ್ರೆ ಆ ಷರತ್ತುಗಳೇನು???

ಗ್ರಾಹಕರು ಉಚಿತವಾಗಿ ಒಂದು ಲೀಟರ್ ಪೆಟ್ರೋಲ್ ಅಥವಾ ಡಿಸೇಲ್ ಪಡೆಯಬೇಕಾದ್ರೆ ಆ ಪೆಟ್ರೋಲ್ ಬಂಕ್ ನವರ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಗ್ರಾಹಕರು ಡೌನ್‌ಲೋಡ್ ಮಾಡಿಕೊಂಡ ಈ ಆ್ಯಪ್ ನಿಂದ 5 ಲೀಟರ್ ಪೆಟ್ರೋಲ್ ಅಥವಾ 5 ಲೀಟರ್ ಡಿಸೇಲ್ ಖರೀದಿಸಬೇಕು. ಹೀಗೆ ಪ್ರತೀ 5 ಲೀಟರ್ ಪೆಟ್ರೋಲ್ ಅಥವಾ ಡಿಸೇಲ್ ಖರಿದಿಸಿದ ಗ್ರಾಹಕರು ಒಂದು ಲೀಟರ್ ಪೆಟ್ರೋಲ್ ಅಥವಾ ಡಿಸೇಲ್ ಅನ್ನು ಉಚಿತವಾಗಿ ಆ ಪೆಟ್ರೋಲ್ ಬಂಕ್ ನವರು ನಿದುತಾರೆ.

ಎರಡು ತಿಂಗಳು ಮಾತ್ರ ಉಚಿತವಾಗಿ ಪೆಟ್ರೋಲ್ ಅಥವಾ ಡಿಸೇಲ್ ನ್ನು  ಗ್ರಾಹಕರು ಪಡೆಯಬಹುದಾಗಿದೆ. ತೈಲ ಬೆಲೆ ಗಗನಕ್ಕೇರಿರುವ ಈ ಸಮಯದಲ್ಲಿ ಈ  ಉಚಿತವಾಗಿ ಸಿಗುತ್ತಿರುವ ಈ  ಕೊಡುಗೆಯಿಂದಾಗಿ ಅಲ್ಲಿನ ಜನರಿಗೆ ಖುಷಿ ಕೊಟ್ಟಿದ್ದು, ಜನರು ತಮ್ಮ ತಮ್ಮ ಮೊಬೈಲ್ ಗಳಲ್ಲಿ ಆ ಪೆಟ್ರೋಲ್ ಬ್ಯಾಂಕ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಉಚಿತ ಕೊಡುಗೆಯನ್ನು ಪಡೆಯುತ್ತಿದ್ದಾರೆ. ಬಂಕ್ ನ ಈ ಉಚಿತ ಕೊಡುಗೆಯಿಂದಾಗಿ  ಬಂಕ್ ನ ಮುಂದೆ ಸಾವಿರಾರು ಮಂದಿ ಸಾಲಾಗಿ ನಿಂತಿದ್ದಾರೆ.