ಇದು ಕೊಲೆಯೇ? ಆತ್ಮ ಹತ್ಯೆಯೇ?ಸರಿಯಾದ ಉತ್ತರ ತಿಳಿಯಲು ಈ ಚಿತ್ರದ ಮೇಲೆ ಕ್ಲಿಕ್ ಮಾಡಿ ನೋಡಿ…

ಕೆಲವೊಂದು ಫೋಟೋಗಳು ನಮ್ಮ ಬುದ್ದಿ ಸಾಮರ್ಥ್ಯಕ್ಕೆ ಸವಾಲು ಒಡ್ಡುವುದಲ್ಲದೆ, ನಮ್ಮ ಮೆದುಳಿಗೆ ಕೈ ಹಾಕುತ್ತವೆ.ಇಲ್ಲಿ ನೋಡುತ್ತಿರುವ ಫೋಟೋ ಕೂಡ ಇದೇ ತರವಾಗಿದೆ.ನಮಗೆ ಕಣ್ಣಿಗೆ ಕಾಣುವುದೆಲ್ಲಾ ಸತ್ಯ ಅಲ್ಲ ಎಂಬುದಕ್ಕೆ ಈ ಚಿತ್ರವೇ ಉದಾಹರಣೆ.ಅದಕ್ಕೆ ಒಂದು ಗಾದೆ ಮಾತಿದೆ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂದು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಫೋಟೋ ಹಲವರ ಬುದ್ದಿ ಸಾಮರ್ಥ್ಯಕ್ಕೆ ಸವಾಲಾಗಿ ಪರಿಣಮಿಸಿದೆ.ಅನೇಕ ಜನ ಹಲವಾರು ರೀತಿಯ ಉತ್ತರಗಳನ್ನು ಕಾಮೆಂಟ್ ಮಾಡಿದ್ದಾರೆ. ಹಾಗಾದ್ರೆ  ಒಂದು ಬಾರಿ ನೀವೂ ನಿಮ್ಮ ಮೆದುಳಿಗೆ ಕೆಲಸ ಕೊಟ್ಟು ನೋಡಿ.

ಕೇಸ್ ವಿಚಾರಣೆ : ಇನ್ನು ಈ ಫೋಟೋ ದಲ್ಲಿರುವ ಕೇಸ್ ವಿಷಯಕ್ಕೆ ಬಂದರೆ.. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ವಿಚಾರ ಪ್ರಶ್ನೆಯಾಗಿ ನಿಲ್ಲುತ್ತದೆ. ಇಲ್ಲಿ ನೇಣು ಹಾಕಿಕೊಂಡು ಸತ್ತ ವ್ಯಕ್ತಿಯೊಬ್ಬನ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಈ ಚಿತ್ರದಲ್ಲಿ ನಮಗೆ ಕಂಡುಬರುವ ಪ್ರಮುಖ ವಿಷಯಗಳು.1.ಸತ್ತ ವ್ಯಕ್ತಿ ನೇಣಿಗೆ ಶರಣಾಗಿದ್ದಾನೆ.2.ಟೇಬಲ್ ಮೇಲೆ ಡೆತ್ ನೋಟ್ ಇದೆ.3.ಈ ಚಿತ್ರದ ಪ್ರಕಾರ ಸತ್ತ ವ್ಯಕ್ತಿ ಅಂಗವಿಕಲನಾಗಿದ್ದಾನೆ.ಆದರೆ ಇಲ್ಲಿನ ಪ್ರಮುಖ ವಿಷಯ ಏನೆಂದರೆ  ಮೇಲು ನೋಟಕ್ಕೆ ಆತ್ಮಹತ್ಯೆಯಂತೆ ಕಂಡುಬರುತ್ತದೆ..ಆದರೆ ಇದು ಆತ್ಮಹತ್ಯೆಯಲ್ಲ..

ಇದು ಒಂದು ಕೊಲೆಯಾಗಿದೆ.. ಇದಕ್ಕೆ ಸಾಕ್ಷಿ ಇಲ್ಲಿದೆ ನೋಡಿ..

1.ಆತ್ಮಹತ್ಯ ಮಾಡಿಕೊಂಡಿರುವ ವ್ಯಕ್ತಿ ಅಂಗವಿಕಲನಾಗಿದ್ದಾನೆ. 2.ಆ ವ್ಯಕ್ತಿ ಅಂಗವಿಕಲನೆಂದು ಗುರುತಿಸಲು ಕಾರಣ ಆ ವ್ಯಕ್ತಿ ಬಳಸುವ ಸ್ಟಿಕ್ ಗಳು ರೂಮಿನಲ್ಲಿವೆ ನೋಡಿ… ವ್ಯಕ್ತಿ ನೇಣು ಹಾಕಿಕೊಂಡಿರುವ ಜಾಗದಿಂದ ತುಂಬಾ ದೂರವಿದೆ..3.ಟೇಬಲ್ ಮೇಲೆ ಎರೆಡು ಗ್ಲಾಸ್ ಇದೆ..ಅಂದರೆ ಯಾರೋ ಮತ್ತೊಬ್ಬ ವ್ಯಕ್ತಿ ಆ ರೂಮಿಗೆ ಬಂದು ಹೋಗಿದ್ದಾನೆ.

ಇದರಿಂದ ತಿಳಿಯುವುದೇನೆಂದರೆ..ಅಂಗವಿಕಲನಾಗಿರುವ ವ್ಯಕ್ತಿ ಸ್ಟಿಕ್ ಇಲ್ಲದೆ ನಡೆಯಲು ಸಾಧ್ಯವಿಲ್ಲ..ಹೇಳಬೇಕಂದ್ರೆ ಸ್ಟಿಕ್ ಅವನ ಬಳಿಯೇ ಇರಬೇಕಿತ್ತು. ಆದರೆ ಅವು ಅವನಿಂದ ತುಂಬಾ ದೂರ ಇವೆ.ಆತ ತಾನಾಗಿ ಆ ಟೇಬಲ್ ಬಾಲಿ ನಡೆದುಕೊಂಡು ಹೋಗಿ ನೇಣು ಹಾಕಿಕೊಳ್ಳಲು ಸಾಧ್ಯವಿಲ್ಲ..ಆದ್ದರಿಂದ ಯಾರೋ ಕೊಲೆ ಮಾಡಿ ನೇಣು ಹಾಕಿರುವುದು ಇದರಿಂದ ಸಾಬೀತಾಗುತ್ತದೆ..